5ನೇ ಸೀನಿಯರ್ ರಾಜ್ಯ ಮಟ್ಟದ ನೆಟ್‍ಬಾಲ್ ಚಾಂಪಿಯನ್‍ಶಿಪ್ ಪಂದ್ಯಾವಳಿ

filter: 0; fileterIntensity: 0.0; filterMask: 0; module: a; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 98.04491; hist255: 0.0; hist252~255: 0.0; hist0~15: 0.0;

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ 23- ಬೆಂಗಳೂರಿನಲ್ಲಿ ನಡೆದರಾಜ್ಯ ಮಟ್ಟದ ನೆಟ್‍ಬಾಲ್ ಪಂದ್ಯಾವಳಿಯಲ್ಲಿ ಚಾಮರಾಜನಗರ ಜಿಲ್ಲೆ 3ನೇ ಸ್ಥಾನ ಪಡೆದಿದೆ.
ಬೆಂಗಳೂರಿನ ಚಾಮರಾಜಪೇಟೆಯ ಜಿಂಕೆ ಪಾರ್ಕ್‍ಎದುರಿರುವ ರಾಜೀವ್‍ಗಾಂಧಿ ಸ್ಪೋಟ್ರ್ಸ್ ಕಾಂಪ್ಲೆಕ್ಸ್‍ನಲ್ಲಿ ಮೇ 18 ಮತ್ತು 19ರಂದು ನಡೆದ 5ನೇ ಸೀನಿಯರ್ ರಾಜ್ಯ ಮಟ್ಟದ ನೆಟ್‍ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಿ, 3ನೇ ಸ್ಥಾನ ಗಳಿಸಿದರು. ಈ ಹಿನ್ನೆಲೆಯಲ್ಲಿ ಚಾಮರಾಜನಗರಕ್ಕೆ ಇಂದು ಆಗಮಿಸಿದ ಕ್ರೀಡಾ ಪಟುಗಳನ್ನು ಚಾಮರಾಜೇಶ್ವರ ದೇವಸ್ಥಾನದ ಬಳಿ ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್‍ನ ಗೌರವಾಧ್ಯಕ್ಷೆನ ರ್ಗೀಸ್ ಬಾನು ಅವರು ಅಭಿನಂದಿಸಿದ್ದಾರೆ.
ನಂತರ ಮಾತನಾಡಿದ ಅವರು, ಅಮೆಚೂರ್ ನೆಟ್‍ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಯೂನಿಕ್ಸ್ ಸ್ಫೋಟ್ರ್ಸ್ ಆಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ 5ನೇ ಸೀನಿಯರ್ ರಾಜ್ಯ ಮಟ್ಟದ ನೆಟ್‍ಬಾಲ್ ಪಂದ್ಯಾವಳಿಯಲ್ಲಿ ನಮ್ಮ ಜಿಲ್ಲೆಯ ಕ್ರೀಡಾಪಟುಗಳು ಪಾಲ್ಗೊಂಡು 3ನೇ ಸ್ಥಾನ ಪಡೆದಿರುವುದು ಸಂತಸದ ವಿಷಯ ಎಂದರು.
16 ಜಿಲ್ಲೆಯಿಂದ 32 ಟೀಮ್‍ನ ಪುರುಷ ಹಾಗೂ ಮಹಿಳೆಯರ ತಂಡಗಳು ಆಗಮಿಸಿತ್ತು. ಇವುಗಳಲ್ಲಿ ಹಲವು ತಂಡಗಳೊಂದಿಗೆ ಸೆಣಸಾಟ ನಡೆಸಿ,ಕ್ವಾಟರ್ ಫೈನಲ್‍ನಲ್ಲಿ ನಡೆದರೋಚಕ ಪಂದ್ಯಾಟದಲ್ಲಿ ಬೆಳಗಾವಿ ಜಿಲ್ಲೆಯನ್ನು ಅವರನ್ನು ಮಣಿಸಿ ಸೆಮಿಫೈನಲ್‍ಗೆ ಪಾದಾರ್ಪಣೆ ಮಾಡಿದರು.
ನಂತರ ಸೆಮಿಫೈನಲ್‍ನಲ್ಲಿ ಬೆಂಗಳೂರು ನಗರತಂಡದ ಮೇಲೆ ನಡೆದ ರೋಚಕ ಪಂದ್ಯದಲ್ಲಿ 22-23 ರಅಂತರದ ಅಂತಿಮ ಹಣಾಹಣಿಯಲ್ಲಿ 1 ಅಂಕದಿಂದ ಪರಾಜಿತಗೊಂಡು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು ಎಂಬ ಮಾಹಿತಿ ನೀಡಿದರು.
ಜಿಲ್ಲೆಯ ಅಭಿನಾಯಕ್‍ಗೆ ಅತ್ಯುತ್ತಮ ಗೋಲು ರಕ್ಷಕ ಪ್ರಶಸ್ತಿ:
ನೆಟ್‍ಬಾಲ್‍ಚಾಂಪಿಯನ್ ಶಿಪ್‍ನಲ್ಲಿ ನಡೆದ ಲೀಡ್‍ನಲ್ಲಿ 3 ಪಂದ್ಯಟ, ಕ್ವಾಟರ್ ಫೈನಲ್‍ನಲ್ಲಿ 1 ಪಂದ್ಯಾಟ, ಸೆಮಿಫೈನಲ್‍ನಲ್ಲಿ 1 ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ನಮ್ಮಜಿಲ್ಲೆಯ ಅಭಿನಾಯಕ್‍ಗೆ ಅತ್ಯುತ್ತಮ ಗೋಲು ರಕ್ಷಕ(ಬೆಸ್ಟ್‍ಗೋಲ್‍ಡಿಫೆಂಡರ್) ಪ್ರಶಸ್ತಿಯನ್ನು ಅಮೆಚೂರ್ ನೆಟ್‍ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಯೂನಿಕ್ಸ್ ಸ್ಫೋಟ್ರ್ಸ್ ಆಕಾಡೆಮಿ ವತಿಯಿಂದ ನೀಡಿ ಗೌರವಿಸಲಾಯಿತು ಎಂದರು.
ಜಿಲ್ಲಾ ನೆಟ್‍ಬಾಲ್ ಅಸೋಷಿಯೇಷನ್‍ನ ಅಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ನಮ್ಮತಂಡವುದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಕ್ರೀಡೆಯಲ್ಲಿಯಶಸ್ಸು ಸಾಧಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಕ್ರೀಡಾಪಟುಗಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಅತ್ಯುತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸುತ್ತಿರುವ ತರಬೇತುದಾರರಾದ ಮಹದೇವ ಪ್ರಸಾದ್‍ಅವರ ಪರಿಶ್ರಮ ಹಾಗೂ ಅವರ ಮಾರ್ಗದರ್ಶನವೂಕೂಡಾ ಪ್ರಶಸ್ತಿಗಳಿಸಲು ಮುಖ್ಯಕಾರಣ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಗೆ ಇನ್ನೂ ಹೆಚ್ಚಿನಕೀರ್ತಿಯಶಸ್ಸನ್ನು ತರಲೆಂದು ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು.
ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆ ಕೊರಗಾಂವ್‍ನ ಬೋರವ ಜವಾಹರ್‍ಲಾಲ್ ನೆಹರೂಇನ್ಟಿಟ್ಯೂಟ್‍ನಲ್ಲಿ ನಡೆದ 36ನೇ ರಾಷ್ಟ್ರೀಯಜೂನಿಯರ್‍ಚಾಂಪಿಯನ್ ಶಿಪ್‍ನ ಬಾಲಕಿಯರ ವಿಭಾಗದಲ್ಲಿ 2ನೇ ರನ್ನರ್‍ಅಪ್, ಮತ್ತು ಫಾಸ್ಟ್ 5 ಜೂನಿಯರ್ ಚಾಂಪಿಯನ್‍ಶಿಪ್‍ನ ಬಾಲಕರ ವಿಭಾಗದಲ್ಲಿ 2ನೇ ರನ್ನರ್‍ಅಪ್ ಪ್ರಶಸ್ತಿಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿಕಂಚಿನ ಪದಕ ಪಡೆದುಕೊಂಡಿರುವುದನ್ನುಇಲ್ಲಿ ಸ್ಮರಿಸಬಹುದು.
ಈ ಸಂದರ್ಭದಲ್ಲಿ ಮುಖ್ಯ ತರಬೇತುದಾರ ಮಹದೇವ ಪ್ರಸಾದ್, ಸಹಾಯಕತರಬೇತುದಾರ ಸೋಮಶೇಖರ್, ವ್ಯವಸ್ಥಾಪಕ ಮಾದೇಶ್, ಕ್ರೀಡಾಪಟುಗಳಾದನಾಯಕಚಂದು, ಸಂದೀಪ್‍ಎಸ್., ದಿನೇಶ್.ಎಂ., ಅಭಿ.ಎಸ್., ಅಭಿನಾಯಕ್.ಡಿ., ಸಂಯಕ್, ಚೇತನ್, ಪವನ್‍ಕುಮಾರ್, ದಿಲೀಪ್, ಪ್ರಜ್ವಲ್‍ಕುಮಾರ್, ನಿತಿನ್‍ನಾಯಕ್, ಮಹದೇವ ಇದ್ದರು.