480 ರೆಮ್‍ಡಿಸಿವರ್ ಇಂಜಕ್ಷನ್ ತಂದ ಸಂಸದ

ಕಲಬುರಗಿ ಏ 30: ಸಂಸದ ಡಾ ಉಮೇಶ ಜಾಧವ ಅವರು ಇಂದು ಮತ್ತೆ ನಗರಕ್ಕೆ ಬೆಂಗಳೂರಿನಿಂದ 480 ರೆಮ್ ಡಿಸಿವರ್ ಇಂಜಕ್ಷನ್ ತಂದಿದ್ದಾರೆ.
ಜಿಲ್ಲೆಯಲ್ಲಿ ರೆಮ್ ಡಿಸಿವರ್ ಇಂಜಕ್ಷನ್ ಖಾಲಿಯಾದ ಹಿನ್ನೆಲೆಯಲ್ಲಿ
ಕಳೆದ ರಾತ್ರಿ ಬೆಂಗಳೂರಿನ ಡ್ರಗ್ ಕಂಟ್ರೋಲ್ ಕಚೇರಿಗೆ ಹೋಗಿ ರೆಮ್ ಡಿಸಿವರ್ ಇಂಜಕ್ಷನ್ ಪಡೆದಿದ್ದರು. ಇಂದು ವಿಮಾನದ ಮೂಲಕ ಸ್ವತ: ತಾವೇ ಇಂಜಕ್ಷನ್ ತಂದ ಸಂಸದ ಡಾ. ಉಮೇಶ ಜಾಧವ್ ಅವರು ಕಲಬುರಗಿ ಡ್ರಗ್ ಕಂಟ್ರೋಲ್ ಅಧಿಕಾರಿಗಳಿಗೆ ನೀಡಿದ್ದಾರೆ.