48 ದಿನ ವಾಯುಸ್ತುತಿ ಪುನಶ್ಚರಣ:ಸತ್ಯಾತ್ಮತೀರ್ಥಶ್ರೀಗಳಿಂದ ಆಶೀರ್ವಚನ

ಕಲಬುರಗಿ,ಜು 10: ಶ್ರೀ ವಿಶ್ವ ಮಧ್ವ ಮಹಾ ಪರಿಷತ್ ಅಡಿಯಲ್ಲಿ ಬರುವ ಶ್ರೀ ಸತ್ಯಪ್ರಮೋದ ತೀರ್ಥ ಕೃಪಾಪೋಶಿತ ಪಾರಾಯಣ ಸಂಘದ ವತಿಯಿಂದ
ರವೀಂದ್ರ ದೇಶಪಾಂಡೆ ಅಲಮೇಲ ಅವರ ಮನೆಯಲ್ಲಿ
ಜೂನ್ 30 ರಿಂದ ಪ್ರಾರಂಭವಾಗಿ ಆಗಸ್ಟ್ 16 ರ ವರೆಗೆ ನಿರಂತರ 48 ದಿನಗಳ ಕಾಲ (ಒಂದು ಮಂಡಲ)ವಾಯು ಸ್ತುತಿ ಪುನಶ್ಚರಣ ಕಾರ್ಯಕ್ರಮ ನಡೆಯುತ್ತಿದೆ.
ರವಿವಾರ ಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಪಾರಾಯಣ ಸ್ಥಳಕ್ಕೆ ಆಗಮಿಸಿ ಭಕ್ತಾದಿಗಳಿಗೆ ಆಶೀರ್ವಚನ,ಮುದ್ರಾಧಾರಣೆ ಮತ್ತು ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು.ಈ ಸಂದರ್ಭದಲ್ಲಿ
ರಾಮಾಚಾರ ಘಂಟಿ, ಅನಂತ ಕಾಮೆಗಾಂಕರ್ , ಭೀ .ಜಿ ದೇಶಪಾಂಡೆ ಆಡಕಿ,ಡಾ ಗೌತಮ ಜಹಾಗೀರದಾರ ,
ವಿಜಯಕುಮಾರ ಶಾಹಾಬಾದ ಮತ್ತು ಪಾರಾಯಣ ಸಂಘದ ಸದಸ್ಯರು ಉಪಸ್ಥಿತರಿದ್ದರು