48 ದಿನಗಳ ಮೌನ ಹಾಗೂ ಉಪವಾಸ ಅನುಷ್ಠಾನ ನ 5 ರಂದು ಮಹಾ ಮಂಗಲ

ಆಳಂದ.ಅ28:ಯಳಸಂಗಿ ಗ್ರಾಮದ ಶ್ರೀ ಸಚ್ಚಿದಾನಂದ ಸದ್ಗುರು ಸಿದ್ಧಾರೂಡ ಮಠದ ಶ್ರೀ ಪರಮ್ಮ ಪೂಜ್ಯ ಪರಮಾನಂದ ಮಹಾ ಸ್ವಾಮಿಗಳ ಅಧಿಕ ಮಾಸದ 48 ದಿನಗಳ ಮೌನ ಹಾಗೂ ಉಪವಾಸ ಅನುಷ್ಠಾನವನ್ನು ನ 5 ರಂದು ಮಹಾ ಮಂಗಲ ಗೊಳ್ಳಲಿದೆ ಎಂದು ಮಠದ ಭಕ್ತರು ತಿಳಿಸಿದ್ದಾರೆ.

ನ 4 ರಂದು ಸಾಯಂಕಾಲ 6 ಗಂಟೆಯಿಂದ ಚಂಡಿಕಾ ಹೋಮ ನಡೆಯಲಿದ್ದು. 5 ರಂದು ಬೆಳಗ್ಗೆ ಮಹಾ ಮಂಗಲ ಕಾರ್ಯಕ್ರಮದಲ್ಲಿ ಶ್ರೀ ಗುರುಪಾದಲಿಂಗ ಮಹಾ ಸ್ವಾಮಿಜೀ ವಿರಕ್ತ ಮಠ ಯಳಸಂಗಿ ಶ್ರೀ ಪರಮಾನಂದ ಸ್ವಾಮಿಜೀ ಮಂಚೂರು, ಶ್ರೀ ಮಹಾಂತ ಮಹಾ ಸ್ವಾಮಿಗಳು, ಬೀದರಿನ ಗಣಪತಿ ಮಹಾ ಸ್ವಾಮಿಜೀ ಅವರು ಮಹಾ ಮಂಗಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು. ಮಠದ ಭಕ್ತಾಧಿಗಳು ಮಹಾ ಮಂಗಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಆರ್ಶಿವಾದ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.

ಅಂದು ನಡೆಯುವ ಕಾರ್ಯಕ್ರಮದಲ್ಲಿ ಕೋವಿಡ-19ರನ್ವಯ ಕಡಿಮೆ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ ಧರಿಸಲು ಮಠದ ವತಿಯಿಂದ ಕಟ್ಟುನಿಟ್ಟಾಗಿ ಭಕ್ತಾಧಿಗಳಿಗೆ ಸೂಚಿಸಲಾಗಿದೆ ಎಂದು ಮಠದ ಭಕ್ತಾಧಿಗಳಾದ ಬೀಮಣ್ಣಾ ಶಿವಪೂರೆ, ಶ್ರೀಮಂತ ಯಲ್ದೆ, ಹಣಮಂತ ಅವಟೆ, ಗುರುನಾಥ ಶಿವಪೂರೆ, ಕಾಶಿನಾಥ ಯಲ್ದೆ, ರಾಜು ಸಾವಳೆ, ಕಾಶಿನಾಥ ಕಾಳೆ ಅವರು ಜಂಟಿಯಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.