
ತಾಳಿಕೊಟೆ:ಮೇ.21: ದೇವರ ಹಿಪ್ಪರಗಿ ಮತಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ರಾಜುಗೌಡ ಪಾಟೀಲ ಅವರು ಶಾಸಕರಾಗಿ ಆಯ್ಕೆಯಾಗಲೆಂದು ಹರಕೆ ಹೊತ್ತಿದ್ದ ದೇವರ ಹಿಪ್ಪರಗಿ ಪಟ್ಟಣದ ಅಭಿಮಾನಿಯೊಬ್ಬರು ಬೇಡಿಕೆ ಇಡೇರಿದ್ದರಿಂದ ಸುಮಾರು 48 ಕೀ.ಮೀ. ಅಂತರದ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠಕ್ಕೆ ದೀಡ ನಮಸ್ಕಾರ ಹಾಕಿ ಶನಿವಾರರಂದು ಹರಕೆ ತೀರಿಸಿದ್ದಾರೆ.
ದೇವರಹಿಪ್ಪರಗಿ ಪಟ್ಟಣದ ಹಣಮಂತ ಹೂಗಾರ ಎಂಬವರು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಅವರ ಅಭಿಮಾನಿಯು ದೇವರ ಹಿಪ್ಪರಗಿ ಪಟ್ಟಣದ ಶ್ರೀ ರಾವುತರಾಯ ದೇವಸ್ಥಾನದಿಂದ 48 ಕೀಲೋ ಮೀಟರ್ ಅಂತರದ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದವರೆಗೆ ದೀಡ ನಮಸ್ಕಾರ ಹಾಕಿದ್ದಾನೆ. ಅವನು ಹರಕೆಯು ಹೊತ್ತಂತೆ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಅವರು ಸುಮಾರು 20 ಸಾವಿರಕ್ಕೂ ಅಧಿಕ ಅತ್ಯಧಿಕ ಮತಗಳಿಂದ ಜಯ ಶಾಲಿಯಾಗಿದ್ದಾರೆ. ಹೀಗಾಗಿ ರಾಜುಗೌಡ ಪಾಟೀಲ ಅವರ ಅಪ್ಪಟ ಅಭಿಮಾನಿ ಹಣಮಂತ ಹೂಗಾರ ಅವರು ದಿ.15 ಸೋಮವಾರರಂದು ಪ್ರಾರಂಬಿಸಿದ ದೀಡ ನಮಸ್ಕಾರವು 6ನೇ ದಿನ ಶನಿವಾರರಂದು ತಾಳಿಕೋಟೆಯ ಶ್ರೀ ಖಾಸ್ಗತ ಮಠಕ್ಕೆ ತಲುಪಿ ತನ್ನ ಹರಕೆಯನ್ನು ತೀರಿಸಿದ್ದಾನೆ. ನಂತರ ಶ್ರೀ ಖಾಸ್ಗತ ಮಠದಲ್ಲಿ ಶ್ರೀ ಖಾಸ್ಗತರ, ವೀರಕ್ತಶ್ರೀಗಳ ಗದ್ದುಗೆಗೆ ಮಹಾ ಪೂಜೆ ಸಲ್ಲಿಸಿ ಶ್ರಿಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗಶ್ರೀಗಳಿಂದ ಹಣಮಂತ ಹೂಗಾರ ಅವರು ತಮ್ಮ ಧರ್ಮಪತ್ನಿ ಅಂಬಿಕಾ ಹೂಗಾರ ಅವರೊಂದಿಗೆ ಆಶಿರ್ವಾದ ಪಡೆದುಕೊಂಡರು.
ಇದೇ ಸಮಯದಲ್ಲಿ ಶಾಸಕ ರಾಜುಗೌಡ ಪಾಟೀಲ ಅವರ ಧರ್ಮಪತ್ನಿ ಶ್ರೀಮತಿ ಜಯಶ್ರೀಗೌಡತಿ ಪಾಟೀಲ, ಶಾಸಕರ ಸಹೋದರ ಸಚೀನಗೌಡ ಪಾಟೀಲ ಅಲ್ಲದೇ ತಾಳಿಕೋಟೆ ಪುರಸಭಾ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ದೀಡ ನಮಸ್ಕಾರ ಹಾಕಿದ ಹಣಮಂತ ಹೂಗಾರ ಹಾಗೂ ಧರ್ಮಪತ್ನಿ ಅಂಬಿಕಾ ಹೂಗಾರ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಮಯದಲ್ಲಿ ಶಾಸಕ ರಾಜುಗೌಡ ಪಾಟೀಲ ಅವರ ಧರ್ಮಪತ್ನಿ ಶ್ರೀಮತಿ ಜಯಶ್ರೀಗೌಡತಿ ಪಾಟೀಲ, ಶಾಸಕರ ಸಹೋದರ ಸಚೀನಗೌಡ ಪಾಟೀಲ, ಮುಖಂಡರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಕಾಸುಗೌಡ ಬಿರಾದಾರ, ವಿನೋದಗೌಡ ಪಾಟೀಲ, ವಿಜುಗೌಡ ಪಾಟೀಲ, ಸಂಗನಗೌಡ ಪಾಟೀಲ, ವಿರೇಶ ಕುದರಿ, ಶಿವು ಕಲ್ಬುರ್ಗಿ, ನಿಂಗಣ್ಣ ಕಲ್ಬುರ್ಗಿ, ಜಗನ್ನಾಥ ಮಸರಕಲ್ಲ, ಉಮೇಶ ಮೈಲೇಶ್ವರ, ಈರಣ್ಣ ಕಲ್ಬುರ್ಗಿ, ಸಾಹೇಬಗೌಡ ಪಾಟೀಲ, ಅಂಬ್ರೇಷ ಇಂಗಳಗಿ, ಚಂದ್ರು ಗೆಜ್ಜಿ, ಬಸ್ಸು ಕುಂಭಾರ, ಕಾಸು ಜಡಕಟ್ಟಿ, ನಿಂಗು ಎಂಬತನಾಳ, ಪರಮನಗೌಡ ಪಾಟೀಲ, ದೀನೇಶಗೌಡ ಪಾಟೀಲ, ಕಾಸು ಕೋಟಿನ, ಶ್ರೀಮತಿ ರೇಣುಕಾ ಕೋಟಿನ, ರಾಮು ಸಣ್ಣಕ್ಕಿ, ಮಲ್ಲಮ್ಮ ಸಣ್ಣಕ್ಕಿ, ಮೊದಲಾದವರು ಇದ್ದರು.