47 ಕೊರೊನಾ ದೃಢ


ಲಕ್ಷ್ಮೇಶ್ವರ, ಮೇ 27 : ತಾಲೂಕಿನಲ್ಲಿ ನಿನ್ನೆ ಒಟ್ಟು 47 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಕುಂದ್ರಳ್ಳಿ ತಾಂಡಾದಲ್ಲಿ ಒಟ್ಟು 78 ಜನರ ಗಂಟಲ ದ್ರವ ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ 15 ಪ್ರಕರಣಗಳು ಪತ್ತೆಯಾಗಿವೆ.
ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ಯಳವತ್ತಿ, ಶಿಗ್ಲಿ, ಸೂರಣಗಿ ಮತ್ತು ಬಾಲೆಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಹೊಸದಾಗಿ 47 ಪ್ರಕರಣಗಳು ಪತ್ತೆಯಾಗಿವೆ.