ಬ್ಯಾಹಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಗ್ರಾಮದೇವತೆಯ ದೇವಸ್ಥಾನ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಜಾತ್ರಾ ಮಹೋತ್ಸವದಲ್ಲಿ ಪಂಚಮಸಾಲಿ ಪ್ರಥಮ ಜಗದ್ಗುರು ಮಹಾಪೀಠ ಕೂಡಲಸಂಗಮದ ಶ್ರೀ ಬಸವಜಯ ಮೃತುಂಜಯ ಮಹಾಸ್ವಾಮಿಗಳು, ಶ್ರೀ ಅಮರಸಿದ್ದೇಶ್ವರ್ ಸ್ವಾಮಿಗಳು, ಕುಂದರಗಿಮಠ, ಗೋಕಾಕ್, ಶ್ರೀ ಶಿವಕುಮಾರ್ ಸ್ವಾಮಿಗಳು ದಾಸೋಹ ಮಠ, ಅಣ್ಣಿಗೇರಿ ಶ್ರೀ ಶ್ರೀಕಾರ ದೇವರು ಹಿರೇಮಠ ಇವರ ಸಾನಿಧ್ಯದಲ್ಲಿ ವಹಿಸಿದ್ದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಬಸವಶ್ರೀ ಪ್ರಶಸ್ತಿ ಪುರಸ್ಕೃತ ರಾಜಶೇಖರ್ ಮೆಣಸಿನಕಾಯಿ, ಬಂಗಾರೇಶ್ ಹಿರೇಮಠ್, ಮಲ್ಲಿಕಾರ್ಜುನ್ ಬಾಳಿಕಾಯಿ ಮತ್ತಿತರರನ್ನು ಸನ್ಮಾನಿಸಲಾಯಿತು.