ಲಕ್ಷ್ಮೇಶ್ವರ,ಮೇ14: ಕನ್ನಡಿಗರು ಕನ್ನಡದ ಅಸ್ಮಿತೆಯ ಕಾಪಾಡುವ ಕಾರ್ಯ ಮಾಡಬೇಕು. ಕನ್ನಡ ನಾಡು ಭಾವೈಕ್ಯತೆಗೆ ಹೆಸರುವಾಸಿಯಾಗಿದ್ದು ಅದಕ್ಕೆ ದಕ್ಕೆ ತರುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಅದನ್ನು ತಡೆಯುವುದು ಅಗತ್ಯವಾಗಿದೆ ಎಂದು ಕೂಡಲ ಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮಿಗಳು ಹೇಳಿದರು.
ಸೋಮೇಶ್ವರ ತೇರಿನ ಮನೆಯ ಬಯಲಿನಲ್ಲಿ ಸೋಮೇಶ್ವರ ಜಾತ್ರಾ ಮಹೋತ್ಸವ ಹಾಗೂ ಗ್ರಾಮಗಳ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಕನ್ನಡಿಗರು ಭಾಷಾ ಸ್ವಾಭಿಮಾನಕ್ಕೆ ಹೆಸರು ವಾಸಿಯಾಗಿದ್ದಾರೆ. ಕನ್ನಡ ನಾಡಿನ ಸಂಸ್ಕøತಿ, ಪರಂಪರೆ ಹಾಗೂ ನಲೆ ಜಲ ಭಾಷೆಯ ಬಗ್ಗೆ ಇಲ್ಲ ಸಲ್ಲದ ಹೇಳಿಕ ನೀಡುವ ಕಿಡಿಗೇಡಿಗಳಿಗೆ ತಕ್ಕ ಉತ್ತರ ನೀಡುವ ಮೂಲಕ ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ. ಕನ್ನಡ ನಾಡಿನ ಸಂಸ್ಕøತಿ ಮತ್ತು ಪರಂಪರೆ ಕಾಪಾಡುವ ಕೆಲಸವನ್ನು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಕರವೇ ಕಾರ್ಯಕರ್ತರು ಮಾಡುತ್ತ ಬರುತ್ತಿದ್ದಾರೆ ಎಂದು ಹೇಳಿದ ಅವರು ಕನ್ನಡ ನಾಡಿನ ಸಾಮರಸ್ಯ ಕದಡುವ ಕಾರ್ಯ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕನ್ನಡ ನಾಡು ಭಾವೈಕ್ಯತೆಗೆ ಹೆಸರುವಾಸಿಯಾಗಿದೆ, ಕನ್ನಡ ನಾಡಿನ ಶರಣರು ಸಂತರು, ಅನುಭಾವಿಗಳು ನಮ್ಮ ನಾಡಿನಲ್ಲಿ ಭಾವೈಕ್ತಯೆ ಬೀಜ ಬಿತ್ತಿದ್ದಾರೆ. ಆದರೆ ಕೆಲವರು ಈಗ ಅದನ್ನು ಹಾಳು ಮಾಡುವ ಕೃತ್ಯಕ್ಕೆ ಇಳಿದಿದ್ದಾರೆ. ನಮ್ಮ ಕರವೇ ಕಾರ್ಯಕರ್ತರು ಸಾಮರಸ್ಯ ಕದಡುವ ಕಾರ್ಯವನ್ನು ಸಮರ್ಥವಾಗಿ ತಡೆಯುವ ಕಾರ್ಯ ಮಾಡುತ್ತಾರೆ ಎಂದು ಹೇಳಿದರು.
ಈ ವೇಳೆ ಕನ್ನಡ ಖ್ಯಾತ ಚಿತ್ರನಟ, ನಿರ್ಧೇಶಕ ರವಿಚಂದ್ರ ಅವರ ಸುಪುತ್ರ ವಿಕ್ರಂ ಅವರ ತ್ರಿವಿಕ್ರಮ ಚಿತ್ರದ ಟೀಸರ್‍ನ್ನು ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕೂಡಲ ಸಂಗಮದ ಶ್ರೀಗಳು ಬಿಡುಗಡೆ ಮಾಡುವ ಮೂಲಕ ಹರಸಿದರು.
ಈ ವೇಳೆ ಚಿತ್ರನಟ ವಿಕ್ರಂ ಅವರು ಮಾತನಾಡಿ ಕನ್ನಡ ನಾಡಿನ ಜನರು ಭಾಷಾಭಿಮಾನಕ್ಕೆ ಹೆಸರಾಗಿದ್ದಾರೆ. ಉತ್ತರ ಕರ್ನಾಟಕದ ಜನರು ಸ್ವಾಭಿಮಾನಿಗಳಾಗಿದ್ದಾರೆ. ಕನ್ನಡ ಚಿತ್ರ ರಂಗವನ್ನು ಬೆಳೆಸುವಲ್ಲಿ ಉತ್ತರ ಕರ್ನಾಟಕದ ಜನರ ಕೊಡುಗೆ ಅಪಾರ ಎಂದು ನಮ್ಮ ತಂದೆಯವರು ಹೇಳಿದ್ದು ನಿಜವೆಂದೆನಿಸುತ್ತದೆ. ನನ್ನ ಪ್ರಥಮ ಚಿತ್ರದ ಟೀಸರ್‍ನ್ನು ಸೋಮೇಶ್ವರ ದೇವರ ಸನ್ನೀಧಾನದಲ್ಲಿ ಬಿಡುಗಡೆಗೊಳಿಸಿದ್ದು ಉತ್ತರ ಕರ್ನಾಟಕದ ಜನರು ನನ್ನ ಚಿತ್ರ ನೋಡಿ ಹರಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಹನಮಂತಪ್ಪ ಅಬ್ಬಿಗೇರಿ, ಸುನೀಲ ಮಹಾಂತಶೆಟ್ಟರ. ಎಚ್.ಎಸ್.ಸೋಂಪುರ, ಡಾ.ಚಂದ್ರು ಲಮಾಣಿ, ಮಹೇಶ ಹೊಗೆಸೊಪ್ಪಿನ, ವಿಕಾಸ ಲಮಾಣಿ, ಗುರುನಾಥ ದಾನಪ್ಪನವರ, ಲೋಕೇಶ ಸುತಾರ, ಆನಂದ ಗಡ್ಡದೇವರಮಠ ಮಾತನಾಡಿದರು.
ಸಮಾರಂಭದಲ್ಲಿ ಪುರಸಭೆ ಉಪಾಧ್ಯಕ್ಷೆ ಮಂಜವ್ವ ನಂದೆಣ್ಣವರ, ಚೆಂಬಣ್ಣ ಬಾಳಿಕಾಯಿ, ಚೆನ್ನಪ್ಪ ಜಗಲಿ, ವಿಜಯ ಹತ್ತಿಕಾಳ, ಸುಮಾ ಚೋಟಗಲ್ಲ, ಕುಬೇರಪ್ಪ ಮಹಾಂತಶೆಟ್ಟರ, ಈಶ್ವರ ಮೆಡ್ಲೇರಿ, ಮಂಜುನಾಥ ಮಾಗಡಿ, ನಿಂಗಪ್ಪ ಪ್ಯಾಟಿ, ಬಸವರಾಜ ಹೊಗೆಸೊಪ್ಪಿನ, ಶರಣಪ್ಪ ಪುರ್ತಗೇರಿ, ನಬೀಬ ಕಿಲ್ಲೇದಾರ, ಬಸವರಾಜ ಮೇಟಿ, ಪ್ರಕಾಶ ಕೊಂಚಿಗೇರಿಮಠ, ಪ್ರವೀಣ ಗಾಣಿಗೇರ, ಅರುಣ ಮೆಕ್ಕಿ, ಗಂಗಾಧರ ಕರ್ಜಕಣ್ಣವರ, ಫಕ್ಕೀರೇಶ ಅಣ್ಣಿಗೇರಿ, ಪ್ರವೀಣ ಗೌರಿ, ನಿಂಗಪ್ಪ ಹೊನ್ನಾಪೂರ ಸೇರಿದಂತೆ ಅನೇಕರು ಇದ್ದರು.
ಬಸವರಾಜ ಬಾಳೇಶ್ವರಮಠ ಹಾಗೂ ವಿಜಯ ಆಲೂರ ಕಾರ್ಯಕ್ರಮ ನಿರ್ವಹಿಸಿದರು.
ಸಮಾರಂಭದಲ್ಲಿ ಭರತನಾಟ್ಯ, ಸುಗಮ ಸಂಗೀತ ಕಾರ್ಯಕ್ರಮಗಳು ನಡೆದು ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದು ಕಂಡು ಬಂದಿತು.