46,800 ರೂ.ಮೌಲ್ಯದ ಬೋರ್‍ವೆಲ್ ಕೇಬಲ್ ಕಳವು

ಕಲಬುರಗಿ,ಸೆ.22-ಅಷ್ಟಗಾ ಸೀಮಾಂತರದಲ್ಲಿರುವ ರೈತರ ಜಮೀನಿನಲ್ಲಿ ಹಾಕಲಾಗಿದ್ದ 46,800 ರೂ.ಮೌಲ್ಯದ ಬೋರ್‍ವೆಲ್ ಕೈಬಲ್ ಸೇರಿದಂತೆ ಇತರೆ ವಸ್ತುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.
ಭೀಮಳ್ಳಿ ಗ್ರಾಮದ ರೈರ ಶಿವುಕುಮಾರ ಲೋಣಿ ಎಂಬುವವರು ಈ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಶಿವುಕುಮಾರ ಲೋಣಿ ಅವರು ಅಷ್ಟಗಾ ಸೀಮಾಂತರದಲ್ಲಿರುವ ತಮ್ಮ 4 ಎಕರೆ ಜಿಮೀನಿನಲ್ಲಿ 4 ತಿಂಗಳ ಹಿಂದೆ ಬೋರ್‍ವೆಲ್ ಹಾಕಿಸಿದ್ದಾರೆ. ಅಲ್ಲದೆ ನೆರೆಯ ಹೊಲದ ಅಶೋಕ ದಣ್ಣೂರ, ಯೂಸೂಫ್ ಮೋಮಿನ್ ಮತ್ತು ಫರತಪ್ಪ ಯರಗಲ್ ಅವರು ಸಹ ಬೋರ್‍ವೆಲ್ ತೋಡಿಸಿದ್ದಾರೆ.
ಶಿವುಕುಮಾರ ಲೋಣಿ ಅವರ ಹೊಲದಲ್ಲಿನ 4 ಸಾವಿರ ರೂ.ಮೌಲ್ಯದ ಬೋರವೆಲ್ ಕೇಬಲ್, 2,500 ರೂ.ಮೌಲ್ಯದ ಸ್ಟಾರ್ಟರ್, 20 ಸಾವಿರ ರೂ.ಮೌಲ್ಯದ ಸ್ಪ್ರಿಂಕ್ಲರ್ ನೌಜಲ್ ಮತ್ತು 1,800 ರೂ.ಮೌಲ್ಯದ ಕೀಟನಾಶಕ, ಅಶೋಕ ದಣ್ಣೂರ ಅವರ ಹೊಲದಲ್ಲಿನ 3 ಸಾವಿರ ರೂ.ಮೌಲ್ಯದ ಬೋರವೆಲ್ ಕೇಬಲ್, 2,500 ರೂ.ಮೌಲ್ಯದ ಸ್ಟಾರ್ಟರ್ ಮತ್ತು 2 ಸಾವಿರ ರೂ.ಮೌಲ್ಯದ ಕೀಟನಾಶಕ, ಯೂಸೂಫ್ ಮೋಮಿನ್ ಅವರ ಹೊಲದಲ್ಲಿನ 2 ಸಾವಿರ ರೂ.ಮೌಲ್ಯದ ಬೋರವೆಲ್ ಕೇಬಲ್, ಫರತಪ್ಪ ಯರಗಲ್ ಅವರ ಹೊಲದಲ್ಲಿನ 4 ಸಾವಿರ ರೂ.ಮೌಲ್ಯದ ಬೋರವೆಲ್ ಕೇಬಲ್, 5 ಸಾವಿರ ರೂ.ಮೌಲ್ಯದ ಸೋಲಾರ್ ಬ್ಯಾಟರಿ ಸೇರಿ 46,800 ರೂ.ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಲಾಗಿದೆ.
ಈ ಸಂಬಂಧ ರೈತ ಶಿವುಕುಮಾರ ಲೋಣಿ ಅವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.