463 ಸಾವು-21,199 ಮಂದಿಗೆ ಚೇತರಿಕೆ, 16387 ಮಂದಿಗೆ ಸೋಂಕು

ಬೆಂಗಳೂರು, ಜೂ. 2-ರಾಜ್ಯದಲ್ಲಿಂದು ಕೂಡ ಸಾವಿನ ಸಂಖ್ಯೆ ಹೆಚ್ಚಳವಾಗಿದ್ದು, ಇಂದು 463 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೃತರ ಸಂಖ್ಯೆ 30017ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.
ಇಂದು ರಾಜ್ಯದಲ್ಲಿ ಆಸ್ಪತ್ರೆಯಿಂದ 21,199 ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು ಬಿಡುಗಡೆ ಹೊಂದಿದವರ ಸಂಖ್ಯೆ 2312060ಕ್ಕೆ ಏರಿದೆ.
ಇಂದು 16387 ಮಂದಿಗೆ ಹೊಸ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 293024ಕ್ಕೆ ಹೆಚ್ವಳವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರದಲ್ಲಿ ಸಾವಿನ ಸಂಖ್ಯೆಯಲ್ಲಿ ಏರು ಮುಖದತ್ತ ಸಾಗಿದೆ, ನಿನ್ನೆ 276 ಮಂದಿ ಸಾವನ್ನಪ್ಪಿದ್ದರು ಇಂದು ನಗರದಲ್ಲಿ 307 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ನಗರದಲ್ಲಿ ಮೃತರ ಸಂಖ್ಯೆ 13929ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಇಂದು 4095 ಮಂದಿಗೆ ಹೊಸ ಸೋಂಕು ತಗುಲಿದೆ.ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1170742 ಕ್ಕೆ ಹೆಚ್ಚಳವಾಗಿದೆ. ನಗರದಲ್ಲಿ 8620 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಬಿಡುಗಡೆಗೊಂಡವರ ಸಂಖ್ಯೆ 1017942 ಕ್ಕೆ ಏರಿಕೆಯಾಗಿದೆ . ಒಟ್ಟು ಸಕ್ರಿಯ ಪ್ರಕರಣಗಳು 138870 ಕ್ಕೆ ಹೆಚ್ಚಳವಾಗಿದೆ ಆರೋಗ್ಯ ಇಲಾಖೆ
ಎಂದು ಮಾಹಿತಿ ನೀಡಿದೆ.
ಜಿಲ್ಲೆಗಳ ವಿವರ ಹೀಗಿದೆ:
ಬಾಗಲಕೋಟೆ 262, ಬಳ್ಳಾರಿ 525, ಬೆಳಗಾವಿ 1006, ಬೆಂಗಳೂರು ಗ್ರಾಮಾಂತರ 164, ಬೆಂಗಳೂರು ನಗರ 4095, ಬೀದರ್ 23, ಚಾಮರಾಜನಗರ 258 ಚಿಕ್ಕಬಳ್ಳಾಪುರ 360, ಚಿಕ್ಕಮಗಳೂರು 214, ಚಿತ್ರದುರ್ಗ ,483, ದಕ್ಷಿಣ ಕನ್ನಡ 618, ದಾವಣಗೆರೆ 535, ಧಾರವಾಡ 245, ಗದಗ 285, ಹಾಸನ 520, ಹಾವೇರಿ 79, ಕಲಬುರಗಿ 117, ಕೊಡಗು 298, ಕೋಲಾರ 389, ಕೊಪ್ಪಳ 295, ಮಂಡ್ಯ 712, ಮೈಸೂರು 1,687, ರಾಯಚೂರು 249, ರಾಮನಗರ 165, ಶಿವಮೊಗ್ಗ 548, ತುಮಕೂರು 862, ಉಡುಪಿ 636, ಉತ್ತರ ಕನ್ನಡ 456, ವಿಜಯಪುರ 166 ಮತ್ತು ಯಾದಗಿರಿಯಲ್ಲಿ 116 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.