46 ಸಾವಿರ ರೂ. ಮೌಲ್ಯದ ಕಲಬೆರಕೆ ಸೇಂದಿ ಜಪ್ತಿ

ಚಿಂಚೋಳಿ,ಮಾ. 22: ತಾಲೂಕಿನ ಕೊಂಚವರಂನಲ್ಲಿ ದ್ವಿಚಕ್ರ ವಾಹನದ ಮೇಲೆ ಅಕ್ರಮವಾಗಿ ಸಾಗಿಸುತ್ತಿದ್ದ 10 ಲೀ ಕಲಬೆರಕೆ ಸೇಂದಿಯನ್ನು ಅಬಕಾರಿ ಇಲಾಖೆಯವರು ವಶಪಡಿಸಿಕೊಂಡಿದ್ದಾರೆ.ವಶಪಡಿಸಿಕೊಂಡ ಕಲಬೆರಕೆ ಸೇಂದಿಯು 46 ಸಾವಿರ ರೂಪಾಯಿ ಮೌಲ್ಯದ್ದಾಗಿದೆ.
ಈ ಸಂಬಂಧ ಪೋಚಯ್ಯ ಸತ್ಯಯ್ಯ ಕೊಂಚವರಂ ಮತ್ತು ನರಸಿಂಹ್ಲು ಶಂಕರ ಕಡ್ಮಂಚಿ ಕೊಂಚವರಂ ಎಂಬ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಚಿಂಚೋಳಿ ವಲಯ ಅಬಕಾರಿ ನಿರೀಕ್ಷಕ ರಾಹುಲ ಎಸ್ ನಾಯಕ,ಉಪ ನಿರೀಕ್ಷಕ ಮೊಹ್ಮದ ಹುಸೇನ್,ಸಿಬ್ಬಂದಿಗಳಾದ ಪುಂಡಲೀಕ,ಶಿವರಾಜ ಅವರು ದಾಳಿ ನಡೆಸಿದರು.