4,50 ಲಕ್ಷ ರೆಮಿಡಿಸಿವಿರ್ ಅಮದಿಗೆ ಕೇಂದ್ರ‌ ನಿರ್ಧಾರ

ನವದೆಹಲಿ, ಏ.30- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆಯ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಅನುಕೂಲ ಮಾಡಿಕೊಡಲು ಎಂದು ಕೇಂದ್ರ ಸರ್ಕಾರ 4,50,000 ಬಾಟೆಲ್ ರೆಮಿಡಿಸಿವಿರ್ ವಿದೇಶಗಳಿಂದ ಅಮದು ಮಾಡಿಕೊಳ್ಳುತ್ತಿದೆ.

75 ಸಾವಿರ ಬಾಟಲಿಗಳು ಇಂದು ರಾತ್ರಿ ಇಲ್ಲವೇ ನಾಳೆಯೊಳಗೆ ಭಾರತಕ್ಕೆ ಬರಲಿದೆ ಉಳಿದ 3,75 ಲಕ್ಷ ರೆಮಿಡಿಸಿವಿರ್ ಬಾಟಲಿಗಳು ಜುಲೈ ಅಂತ್ಯದ ವೇಳೆಗೆ ದೇಶಕ್ಕೆ ಬರಲಿವೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

4,50 ಲಕ್ಷ ಬಾಟಲಿ ರೆಮಿಡಿಸಿವಿರ್ ಪೈಕಿ ಅಮೆರಿಕದಿಂದ 75 ಸಾವಿರದಿಂದ 1 ಲಕ್ಷ ರೆಮಿಡಿಸಿವಿರ್ ತರಿಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ. ಒಂದೆರಡು ದಿನಗಳಲ್ಲಿ ದೇಶಕ್ಕೆ ಔಷಧಿ ಬರಲಿದೆ.

ಈಜಿಪ್ಟ್ ನಿಂದ 10000 ಬಾಟಲಿ ರೆಮಿಡೀಸ್ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ 15ರೊಳಗೆ ದೇಶಕ್ಕೆ ಬರುವ ಸಾಧ್ಯತೆಗಳಿವೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ.

ಜೊತೆಗೆ ಸರಿ ಸುಮಾರು 40ಕ್ಕೂ ಅಧಿಕ ದೇಶಗಳಿಂದ ವೈದ್ಯಕೀಯ ಸಾಮಗ್ರಿಗಳನ್ನು ಭಾರತಕ್ಕೆ ತರಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

10 ದಶಲಕ್ಷಕ್ಕೆ ಏರಿಕೆ:

ದೇಶದಲ್ಲಿ ಪ್ರತಿ ತಿಂಗಳು 3.8 ದಶಲಕ್ಷ ಬಾಟಲಿ ರೆಮಿಡಿಸಿವಿರ್ ಔಷಧಿ ಉತ್ಪಾದನೆ ಮಾಡಿತ್ತಿದೆ.ಈ ಸಂಳ್ಯೆಯನ್ನು 10 ದಶ ಲಕ್ಷಕ್ಕೆ ಹೆಚ್ಚಳ ಮಾಡಲು ಮುಂದಾಗಿದೆ.

ದೇಶದಲ್ಲಿ ಕಳೆದ ಒಂದು ವಾರದಿಂದ ಸರಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೆಮಿಡಿಸಿವಿರ್ ಔಷಧಿ ಸೇರಿದಂತೆ ಇನ್ನಿತರ ವೈದ್ಯಕೀಯ ಪರಿಕರಗಳ ಅಭಾವ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಾಲ್ಕುವರೆ ಲಕ್ಷ ರೆಮಿಡಿಸಿವಿರ್ ಬಾಟಲಿಯನ್ನು ಅಮದು ಮಾಡಿಕೊಳ್ಳಲು ನಿರ್ಧರಿಸಿದೆ.

ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮತ್ತಷ್ಟು ಆತಂಕ ಮತ್ತು ಸಮಸ್ಯೆಗೆ ಸಿಲುಕುವಂತೆ ಮಾಡಿದೆ.