450 ಕ್ಕೂ ಹೆಚ್ಚು ಶಾಲಾಕೊಠಡಿಗಳ ನಿರ್ಮಾಣ

ಹರಪನಹಳ್ಳಿ.ಜ.೭ : ವಿಧಾನ ಸಭಾಕ್ಷೇತ್ರದಲ್ಲಿ ಕೆಕೆಆರ್‌ಡಿಬಿ ಹಾಗೂ ಡಿಎಂಎಫ್ ಯೋಜನೆಯಡಿಯಲ್ಲಿ 450 ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದೇನೆ ಎಂದು ಶಾಸಕ ಜಿ. ಕರುಣಾಕರರೆಡ್ಡಿ ಹೇಳಿದರು.ತಾಲೂಕಿನ ಶಿಂಗಿ ಹಳ್ಳಿ ಗ್ರಾಮದಲ್ಲಿ  ನೂತನ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ 28 ಹಾಸ್ಟೆಲ್ ಕಟ್ಟಡಗಳ ನಿರ್ಮಾಣ ವಸತಿ ನಿಲಯಗಳು ಡಿಪ್ಲೊಮಾ ಕಾಲೇಜು ನಿರ್ಮಾಣ ಮಾಡಿದ್ದೇನೆ ಎಂದು ತಿಳಿಸಿದರು.ತಾಲೂಕಿನ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ ಬಹುತೇಕ ಪೂರ್ಣಗೊಂಡಿದ್ದು, ಈ ತಿಂಗಳ ಕೊನೆಗೆ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಉದ್ಘಾಟನೆ ನೆರವೇರಿಸಲಾಗುವುದು ಎಂದು ತಿಳಿಸಿದರು.ಹರಪನಹಳ್ಳಿ ವಿಧಾನ ಕ್ಷೇತ್ರದಲ್ಲಿ ಸರ್ವ ರೀತಿಯಲ್ಲಿ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ ಎಂದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಸಾಕಷ್ಟು ವೃದ್ಧಿ ಕೆಲಸ ಮಾಡಿದ್ದು, ನಾನು ಸಹ ಹರಪನಹಳ್ಳಿ ಹಿ0ದುಳಿದ ತಾಲೂಕು ಎಂಬ ಅಭಿವೃದ್ಧಿ ಹಣೆಪಟ್ಟಿಯಿಂದ ಹೋಗಲು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ ಮುಂದಿಯೂ ಮಾಡುತ್ತೇನೆ ನಿಮ್ಮೆಲ್ಲರ ಆಶೀರ್ವಾದ ಸದಾ ಇರಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಪತ್ , ಎಇಇ ಸತೀಶ್ ಪಾಟೀಲ್ ಗೌಡ, ನಾಗಪ್ಪ ,ಜಿಇ ಅಶೋಕ್, ಪ್ರಕಾಶ್ ನಾಯ್ಕ, ನಾಗೇಶ್ ಹಾಗೂ ತಾಪಂ ಮಾಜಿ ಸದಸ್ಯ ನಾಗರಾಜ, ಮುಖಂಡರಾದ , ಬಾಗಳಿ ಕೋಟ್ರೆಶಪ್ಪ, ಪ್ರಕಾಶ,ಮಲ್ಲೇಶ ಇದ್ದರು.