45 ವರ್ಷ ಮೇಲ್ಪಟ್ಟ ಎಲ್ಲರಿಗೂ ಏ.1ರಿಂದ ಕೋವಿಡ್-19 ಲಸಿಕೆ

ಬೀದರ.ಮಾ.27: ಸಕ್ಕರೆ ಕಾಯಿಲೆ, ಹೃದಯ ಬೇನೆ, ಕ್ಯಾನ್ಸರ್, ಹೆಚ್‍ಐವಿ ಸೇರಿದಂತೆ ಇನ್ನೀತರ ತೀವ್ರತರ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟು 59 ವಯೋಮಾನದವರಿಗೆ ಈ ಮೊದಲು ಕೋವಿಶಿಲ್ಡ್ ಮತ್ತು ಕೋವ್ಯಾಕ್ಷಿನ್ ಲಸಿಕೆಯನ್ನು ನೀಡಲಾಗುತ್ತಿತ್ತು.
ಈಗ ಮುಂದುವರೆದು, ಸಕ್ಕರೆ ಕಾಯಿಲೆ, ಹೃದಯ ಬೇನೆ, ಕ್ಯಾನ್ಸರ್, ಹೆಚ್‍ಐವಿ ಸೇರಿದಂತೆ ಇನ್ನೀತರ ತೀವ್ರತರ ಕಾಯಿಲೆಗಳು ಇಲ್ಲದೇ ಇರುವ 45 ವರ್ಷಗಳ ಮೇಲ್ಪಟ್ಟ ಎಲ್ಲರಿಗೂ ಕೂಡ ಕೋವಿಶಿಲ್ಡ್ ಮತ್ತು ಕೋವ್ಯಾಕ್ಷಿನ್ ಲಸಿಕೆಯನ್ನು ನೀಡಲಾಗುತ್ತಿದೆ.
ನಾವು ಸೇರಿದಂತೆ ನಮ್ಮ ಕುಟುಂಬವನ್ನು ನಮ್ಮ ಸುತ್ತಲಿನ ಸ್ನೇಹಿತರು ಮತ್ತು ಸಮುದಾಯವನ್ನು ಕೋವಿಡ್-19 ಸೋಂಕಿನಿಂದ ರಕ್ಷಿಸಿಕೊಳ್ಳಲು ಕೋವಿಡ್-19 ಲಸಿಕೆಯನ್ನು ಪಡೆಯುವುದು ಅತೀ ಅವಶ್ಯವಿದೆ. ಆದ್ದರಿಂದ ಅತ್ಯಂತ ಸುರಕ್ಷಿತವಾಗಿರುವ ಈ ಲಸಿಕೆಯನ್ನು 45 ವರ್ಷಗಳ ಮೇಲ್ಪಟ್ಟ ಎಲ್ಲರೂ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಬೀದರ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.