45 ವರ್ಷ ಮೇಲ್ಪಟ್ಟವರು ವ್ಯಾಕ್ಸೀನ್ ಪಡೆದುಕೊಳ್ಳಿ

ವಾಡಿ: ಎ.22:ಪಟ್ಟಣದ ಪುರಸಭೆಯಲ್ಲಿ ಪುರಸಭೆ ಸದಸ್ಯರ ಹಾಗೂ ಅಧಿಕಾರಿಗಳ ಸಭೆಯಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕೋವೀಡ್ ಲಸಿಕೆಯನ್ನು ಪಡೆದುಕೊಳ್ಳಬೇಕು. ವ್ಯಾಕ್ಸಿನ ವಿಶ್ವಾಸದಿಂದ ಪಡೆದುಕೊಳ್ಳಬೇಕು, ಅಪಪ್ರಚಾರಕ್ಕೆ ಕಿವಿ ಕೊಡಬಾರದು ಎಂದು ತಾಲ್ಲೂಕ ವೈಧ್ಯಾಧಿಕಾರಿ ಡಾ.ದೀಪಕ ಪಾಟೀಲ ಜನರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ್ ಭೀಮಶಾ ಜೀರೋಳ್ಳಿ, ಸದಸ್ಯರಾದ ದೇವಿಂದ್ರ ಕರದಳ್ಳಿ, ಮಹಮ್ಮದ ಗೌಸ, ಶರಣು ನಾಟೇಕರ್, ಮರೆಪ್ಪಾ ಕಲ್ಕುಟ್ಗಿ, ಪೃಥ್ವಿರಾಜ ಸೂರ್ಯವಂಶಿ, ಮುಖಂಡರಾದ ಮಹ್ಮದ ಅಶ್ರಫಖಾನ, ರಾಜಾಪಟೇಲ, ನಾಗೇಂದ್ರ ಜೈಗಂಗಾ ಸಂಘಟನಾಧಿಕಾರಿ ಕಾಶಿನಾಥ ಧನ್ನಿ, ಕಿರಿಯ ಆರೋಗ್ಯ ನೀರಿಕ್ಷಕ ಬಸವರಾಜ ಪೂಜಾರಿ ಇತರರು ಇದ್ದರು.