45 ವರ್ಷ ಒಳಗಿನವರಿಗೆ ಹೃದ್ರೋಗ ಬರುತ್ತಿರುವುದು ಆತಂಕ ಕಾರಿ

ಮೈಸೂರು,ಸೆ.9:- 45 ವರ್ಷ ಒಳಗಿನವರಿಗೆ ಹೃದ್ರೋಗ ಗಳು ಬರುತ್ತಿರುವುದು ಆತಂಕ ಕಾರಿ ಬೆಳವಣಿಗೆ ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು,ಪದ್ಮಶ್ರೀ ಪುರಸ್ಕೃತ ಡಾ.ಸಿ.ಎನ್ ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.
ಅವರು ಇಂದು ಮೈಸೂರು ನಗರ ಪತ್ರಕರ್ತರ ಭವನದಲ್ಲಿ ಹೃದ್ರೋಗ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿದರು.
ಇವತ್ತು ಜಯದೇವ ಹೃದ್ರೋಗ ಸಂಸ್ಥೆ 1800 ಹಾಸಿಗೆ ಹೊಂದಿರುವ ಇಡೀ ದಕ್ಷಿಣ ಏಷ್ಯಾದ ದೊಡ್ಡ ಆಸ್ಪತ್ರೆಯಾಗಿದೆ ಅದು ನಮ್ಮ ಹೆಮ್ಮೆ, ಸರ್ಕಾರದ ಒಂದು ಆಸ್ಪತ್ರೆಯನ್ನ ಪಂಚತಾರೆ ಆಸ್ಪತ್ರೆಯನ್ನಾಗಿ ಮಾಡಬೇಕೆಂಬ ಕನಸಿತ್ತು. ಆ ಕನಸು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಮೂಲಕ ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಆಸ್ಪತ್ರೆಯ ಮೇಲೆ ನಂಬಿಕೆ ವಿಶ್ವಾಸ ಇಡಬೇಕು ಒಂದು ಚಿಕಿತ್ಸೆ ಕಾಯಿಲೆಗಿಂತ ದುಬಾರಿಯಾಗಬಾರದು. ರೋಗಿಯ ಆರ್ಥಿಕ ಹಿನ್ನೆಲೆ ಇಟ್ಟುಕೊಂಡು ಅವರಿಗೆ ಸಾಧ್ಯವಾಗುವ ಮಟ್ಟಿಗೆ ಚಿಕಿತ್ಸೆ ಕೊಡಬೇಕು. ಎಷ್ಟೋ ಬಾರಿ ರೋಗಿ ಬದುಕೋದೇ ಇಲ್ಲ ಅಂಥ ಗೊತ್ತಾದರೆ ರೋಗಿಗಳ ಸಂಬಂಧಿಗಳ ಜೊತೆ ಕರೆದು ಮಾತನಾಡಬೇಕು. ಸತ್ತವನು ಸತ್ತ ಇದ್ದವರು ಲಕ್ಷಾಂತರ ರೂ. ಕಳೆದುಕೊಳ್ಳುವಂತೆ ಮಾಡಬೇಡಿ ಎಂದು ಆಸ್ಪತ್ರೆಗಳಿಗೆ ಸಲಹೆ ನೀಡಿದರು.
ಅಸಾಂಪ್ರದಾಯಿಕ ರೋಗಗಳಿವೆ ಅದು ಹೃದಯ ಕಾಯಿಲೆ,ಸಕ್ಕರೆ ಕಾಯಿಲೆ, ಪಾಶ್ರ್ವ ವಾಯು, ರಕ್ತದೊತ್ತಡ, ಒಂಟಿತನ, ಅಡಿಕ್ಷನ್ ಇವು ಆಗಿವೆ. ಮೊದಲು ಮಕ್ಕಳು ತಂದೆ ತಾಯಿಗಳನ್ನ ಆಸ್ಪತ್ರೆಗೆ ಕರೆತರುತ್ತಿದ್ದರು ಆದರೆ,ಈಗ ಅವರ ತಂದೆ ತಾಯಿಗಳೇ ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆತರುವ ಪರಿಸ್ಥಿತಿ ಇದೆ. ಈಗ 10-20 ವರ್ಷಗಳಷ್ಟು ಬೇಗ ಕಾಯಿಲೆಗಳು ಬರ್ತಾ ಇದೆ. ಶೇ.30 ಹೃದಯಾಘಾತ ಕೇವಲ 45 ವರ್ಷಗಳ ಒಳಗಿರುವವರಿಗೆ ಬರ್ತಾ ಇದೆ. ಪಟ್ಟಣ ಮತ್ತು ಹಳ್ಳಿಗಳಲ್ಲಿ ಜೀವನ ಶೈಲಿ ಒಂದೇ ಆಗುತ್ತಿದೆ. ಮೊದಲು ಹಳ್ಳಿಗಳಲ್ಲಿ ಈ ಕಾಯಿಲೆ ಕಡಿಮೆ ಇತ್ತು. ಈಗ ಅಲ್ಲೂ ಕೂಡ ಹೆಚ್ಚಳವಾಗಿದೆ. ಶೇ.50 ರಷ್ಟು ಧೂಮಪಾನ ಮಾಡುವವರಿಗೆ ಹೃದಯಘಾತ ಆಗುತ್ತದೆ, ಕೆಲವರಿಗೆ ಅಧಿಕ ರಕ್ತದ ಒತ್ತಡ. ಶೇಕಡಾ 16 ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತ ಆಗುತ್ತವೆ. ಇದು ಹೆರಿಡಿಟಿ ಕಾರಣಗಳೂ ಇರುತ್ತವೆ. ಕುಟುಂಬದಲ್ಲಿ ಹೃದಯಾಘಾತ ಆಗುತ್ತಿದ್ದರೆ ಇಲ್ಲೂ ಹೆರಿಡಿಟಿ ಮುಖ್ಯವಾಗಿರುತ್ತದೆ. ಮಕ್ಕಳು ಏನ್ ಆಸ್ತಿ ಮಾಡಿದ್ದೀಯಾ ಅಂಥ ಕೇಳ್ತಾರೆ. ತಂದೆ ತಾಯಿ ದೀರ್ಘ ಆಯಸ್ಸು ಬದುಕಿದ್ದರೆ ಅದೇ ಮಕ್ಕಳಿಗೆ. ಅವರ ಮಕ್ಕಳೂ ಕೂಡ ಲಾಂಗ್ ಲೈಫ್ ಇರುತ್ತಾರೆ.
ಒತ್ತಡ ಅನ್ನೋದು ಹೊಸ ಧೂಮಪಾನ ಎನ್ನಬಹುದು. ಎಲ್ಲರಿಗೂ ಒಂದೊಂದು ರೀತಿ ಒತ್ತಡಗಳಿರುತ್ತವೆ. ಇದಕ್ಕೆ ಕಾರಣ ಅಳತೆ ಮೀರಿದ ಅಪೇಕ್ಷೆಗಳು. ಕಾರಣ ಚಿಕ್ಕ ಮಕ್ಕಳಿಂದಲೇ ಒತ್ತಡ ಶುರವಾಗುತ್ತವೆ. ಅದರಿಂದ ಕಾಯಿಲೆಗಳು ಬರುತ್ತದೆ. ಮನುಷ್ಯ ನ ಅವರವರ ಮನೋಭಾವ ಅವರ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಒತ್ತಡದ ಬದುಕಿಂದ ದೂರವಾಗಬೇಕು. ಹರಿ,ವರಿ ಕರಿ ಯಿಂದ ಹೃದಯ ಸಂಬಂಧಿ ಕಾಯಿಲೆ ಉಲ್ಬಣವಾಗುತ್ತದೆ ಎಂದು ತಿಳಿಸಿದರು.
ಶರೀರದ ತೂಕಕ್ಕೂ ರಕ್ತದ ಕೊಲೆಸ್ಟ್ರಾಲ್ ಗೂ ಯಾವುದೇ ಸಂಬಂಧ ಇಲ್ಲ, ಈ ಮನೋಭಾವ ಇರಬಾರದು. ವಾಯು ಮಾಲಿನ್ಯದಿಂದ ಉಸಿರಾಟದ ತೊಂದರೆ ಬರುತ್ತಿತ್ತು. ಈಗ ವಾಯುಮಾಲಿನ್ಯದಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ, ಇಂಡಸ್ಟ್ರೀಸ್ ಗಳಿಂದಾಗುವ ವಾಯುಮಾಲಿನ್ಯದಿಂದಲೂ ಹೃದಯಘಾತಕ್ಕೆ ಕಾರಣವಾಗಬಹುದು. ಹೃದಯದ ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುತ್ತದೆ, ಮಣ್ಣಿನ ಮಾಲಿನ್ಯದಿಂದಲೂ ಆಗುತ್ತಿದೆ. ದವಡೆಯಲ್ಲೂ ನೋವು ಬರಬಹುದು,ಬೆನ್ನು ನೋವು,ಉರಿ ,ನಡೆದಾಗ ಸುಸ್ತಾದಾಗ ಇದು ಕೂಡ ಸಿಂಪ್ಟಮ್ ಇರುತ್ತದೆ.
ಇನ್ನೂ ಅಸಿಡಿಟಿ, ಹೃದಯಾಘಾತ ಎರಡಕ್ಕೂ ಕನ್ಫೂಸ್ ಆಗಬಹುದು ಹೃದಯಘಾತ ಆದ ಸಂದರ್ಭದಲ್ಲಿ ಆದಷ್ಟು ಬೇಗ ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರತಿ 30 ನಿಮಿಷ ತಡ ಮಾಡಿದರೆ 7 ಪರ್ಸೆಂಟ್ ಸಾವಿನ ಪ್ರಮಾಣ ಹೆಚ್ಚಾಗುತ್ತದೆ. ಹೃದಯಾಘಾತ ಆದಾಗ ಗೋಲ್ಡನ್ ಅವರ್ ಅಂಥ ಇದೆ. ಆ ಸಮಯದಲ್ಲಿ ರೋಗಿಯ ಉಳಿಸುವ ಪ್ರಯತ್ನ ಮಾಡಬೇಕು. ಹೃದಯಾಘಾತ ಆದ ಮೇಲೆ 12 ಗಂಟೆ ಆದರೆ ಆತ ಬದುಕುಳಿದರೂ ಬುದ್ದಿ ಶಕ್ತಿ ಕಡಿಮೆಯಾಗುತ್ತದೆ ಎಂದರು.
ನಮ್ಮ ಭಾರತದಲ್ಲಿ 35 ವರ್ಷ ದಾಟಿದ ಗಂಡಸರು, 45 ವರ್ಷ ದಾಟಿದ ಮಹಿಳೆಯರು ಮೆಡಿಕಲ್ ಆನಿವರ್ಸರಿ ಚೆಕ್‍ಅಪ್ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಇದರಿಂದ ಸ್ಮೋಕ್, ಸ್ಪಿರಿಟ್, ಸ್ಯಾನಿಟರಿ ಲೈಫ್, ಸಾಲ್ಟ್ ಮತ್ತು ಸ್ಟ್ರೆಸ್ ಐದು S ಗಳನ್ನು ನಿಯಂತ್ರಣ ಮಾಡಬಹುದು. ರಕ್ತದೊತ್ತಡ ಇರುವವರು ನಿರ್ಲಕ್ಷ್ಯ ಮಾಡದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬ ಸಲಹೆಯನ್ನು ನೀಡಿದರು.
ಇಂದು ವಾರ್ಷಿಕ 30 ಲಕ್ಷ ಹೃದಯ ಸಂಬಂಧಿ ಕಾಯಿಲೆಯಿಂದ ಸಾವು ಸಂಭವಿಸುತ್ತಿವೆ, ಏಳು ಲಕ್ಷ ಸಕ್ಕರೆ ಕಾಯಿಲೆಗೆ ಸಾವಾಗುತ್ತಿವೆ, ವಾರಕ್ಕೆ ಒಮ್ಮೆ ಒಂದು ಬಾರಿ ಒಳ್ಳೆ ಊಟ ಮಾಡಬೇಕು, ಡಯೆಟ್ ಅಂಥ ಊಟವನ್ನು ಗಣನೀಯವಾಗಿ ಕಡಿಮೆಮಾಡಬಾರದು. ನಗು, ಉತ್ತಮ ಗೆಳೆತನ, ಪಾಸಿಟಿವ್ ನೆಸ್, ವಾಕಿಂಗ್ ಇವೆಲ್ಲವು ಶರೀರದಲ್ಲಿ ನವ ಚೈತನ್ಯವನ್ನು ಉಂಟುಮಾಡುತ್ತದೆ. ಆದರೆ ಭಾರತದಲ್ಲಿ ಶೇ.15 ರಷ್ಟು ಸೋಮಾರಿತನ ಇದೆ. ಇವತ್ತಿನ ಆಧುನಿಕ ಪ್ರಪಂಚದಲ್ಲಿ ಕಾಲು ನಡಿಗೆ ಮಾಡೋದೆ ಕಡಿಮೆ ಸೈಕಲ್ಗಳು ಕಣ್ಮರೆಯಾಗುತ್ತಿವೆ, ಮತ್ತು ಫಾಸ್ಟ್ ಫುಡ್ ಫಾಸ್ಟ್ ಆಗಿಯೇ ಜೀವ ತಗೆಯುತ್ತದೆ. ಮೊಬೈಲ್ ಫೆÇೀನ್, ಸಿಟ್ಟಿಂಗ್ ಡಿಸೀಸ್ ಯಾರಾದರೂ 4 ರಿಂದ 5 ಗಂಟೆ ಕುಂತಲ್ಲೇ ಕೂತರೆ 5 ಸಿಗರೇಟು ಸೇದಿದಕ್ಕೆ ಸಮ. ಹಾಗಾಗಿ ಎಲ್ಲೂ ಕೂತಲ್ಲೇ ಕೂರಬಾರದು,ಮೊಬೈಲ್ ಫೆÇೀನ್ ಹೆಚ್ಚು ಬಳಸಬಾರದು, ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ ಎಂಬ ಎಚ್ಚರಿಕೆಯನ್ನು ಸಹ ನೀಡಿದರು.
ನಾಲಿಗೆ ರುಚಿ ಬಿಡಿ ಸಾತ್ವಿಕ ಆಹಾರ ಸೇವಿಸಿ, ದುಡಿದು ಸಾಯುವವರಿಗಿಂತ ಚಿಂತೆಯಿಂದ ಸಾಯುವವರೇ ಹೆಚ್ಚು ಈ ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರಿಕೆ ವಹಿಸಿ, ಸುಳ್ಳು ಮತ್ತು ತಪ್ಪು ಸಂದೇಶಗಳನ್ನ ಕೊಟ್ಟು ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡುತ್ತಿವೆ ಎಂದರು.
ನಮ್ಮ ಜಯದೇವ ಹೃದ್ರೋಗ ಸಂಸ್ಥೆ ನಮ್ಮ ರಾಜ್ಯಕ್ಕೆ ದೇಶಕ್ಕೆ ಬಂದ ಮಾನ್ಯತೆ. ಇದು ಬೆಂಗಳೂರಲ್ಲಿ ಇನ್ನೊಂದು ವಾರದಲ್ಲಿ ಮತ್ತೊಂದು ಘಟಕ ಆರಂಭವಾಗುತ್ತಿದೆ. ನಮ್ಮಲ್ಲಿ 105 ಹೃದ್ರೋಗ ತಜ್ಞರು ಕೆಲಸ ಮಾಡುತ್ತಾರೆ ಅದು ದೇಶದಲ್ಲಿ ಒಳ್ಳೆಯ ಬೆಳವಣಿಗೆ, ಮೈಸೂರು ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಪ್ರತಿ ತಿಂಗಳಿಗೆ 1000 ದಷ್ಟು ಆಂಜಿಯೋಗ್ರಾಂ ಚಿಕಿತ್ಸೆ ನಡೆಯುತ್ತದೆ. ಇನ್ನೊಂದು ತಿಂಗಳಲ್ಲಿ ಹುಬ್ಬಳ್ಳಿಯಲ್ಲೂ 450 ಹಾಸಿಗೆ ಆಸ್ಪತ್ರೆ ಆರಂಭವಾಗುತ್ತದೆ ಮತ್ತು ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆಗೆ 350 ಹಾಸಿಗೆಗೆ ಇನ್ಫೋಸಿಸ್ನ ಸುಧಾ ಮೂರ್ತಿ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಹೈ ಇಂಟೆನ್ಸಟಿ ಜಿಮ್ ಮಾಡೋರು ಒಂದು ಕಾರ್ಡಿಯಾಕ್ ಟೆಸ್ಟ್ ಮಾಡಿಸಿಕೊಳ್ಳಬೇಕು ನಟ ಪುನಿತ್ ರಾಜ್ ಕುಮಾರ್ ಅವರ ಮನೆಯಲ್ಲಿ ಎಲ್ಲರಿಗೂ ಹೃದಯಘಾತ ಆಗಿತ್ತು. ಅದು ಅವರ ಹೆರಿಡಿಟಿಯಿಂದಾಗಿ ಅವರಿಗೂ ಹೃದಯಘಾತ ಆಯ್ತು. ಕೆಲವು ವೇಳೆ ಸಡನ್ ಡೆತ್ ಆಗುತ್ತದೆ ಹೆರೀಡಿಟಿ ಸಮಸ್ಯೆ ಇರೋರು ಅದಷ್ಟು ಪರೀಕ್ಷೆ ಮಾಡಿಸಿಕೊಂಡು ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.