ಕೋಲಾರ,ಏ,೮-ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೋಲಾರ ಜಿಲ್ಲೆಗೆ ಈಗ ಬರುತ್ತಿರುವ ೪೦೦ ಎಂ.ಎಲ್.ಡಿ. ನೀರಿಗೆ ಬದಲಿಗೆ ೬೦೦ ಎಂ.ಎಲ್.ಡಿ. ನೀರನ್ನು ಹರಿಸಲಾಗುವುದು ಎತ್ತಿನಹೊಳೆ ಯೋಜನೆಯಲ್ಲಿ ಒಂದು ವರ್ಷದಲ್ಲಿ ಎರಡು ಜಿಲ್ಲೆಗಳಿಗೆ ನೀರನ್ನು ಹರಿಸಲಾಗುವುದು ಎಂದು ಶಾಸಕ ರಮೇಶ್ ಕುಮಾರ್ ತಿಳಿಸಿದರು.
ಶ್ರೀನಿವಾಸಪುರ ಮಿಲನ್ಸಾರ್ ಮಂಡಿಯಲ್ಲಿ ಕೆಂಪೇಗೌಡ ವಕ್ಕಲಿಗರ ಸಭೆಯಲ್ಲಿ ಅವರು ಮಾತನಾಡಿ, ಬಾಲಗಂಗಾಧರ ಸ್ವಾಮಿಗಳನ್ನು ಸ್ಮರಿಸಿ ಕ್ಷೇತ್ರದಲ್ಲಿನ ಅಗಲಿ ಒಕ್ಕಲಿಗ ನಾಯಕರನ್ನು ನನೆದು ಕಳೆದ ೪೫ ವರ್ಷಗಳ ಹಿಂದೆ ಅಪರಿಚಿತನಾಗಿ ಬಂದಿದ್ದ ನನ್ನನ್ನು ರಾಜಕೀಯವಾಗಿ ಪ್ರೋತ್ಸಾಹ ನೀಡಿದ ವಕ್ಕಲಿಗರ ಸಮುದಾಯದ ಹಲವಾರು ಜನ ಅಗಲಿದ್ದಾರೆ ಕೆಲವರಿಗೆ ವಯಸ್ಸಾಗಿದೆ ಅವರು ನನ್ನೊಂದಿಗೆ ಪಟ್ಟ ಕಷ್ಟ-ಸುಖಗಳು ಒಂದು ಇತಿಹಾಸವೇ ಇದೆ. ತಾಲೂಕಿನಲ್ಲಿ ಇದುವರೆಗೂ ರಾಜಕೀಯಕ್ಕಾಗಿ ಘರ್ಷಣೆಗಳಾಗಲಿಲ್ಲ. ಖಾಸಗಿ ವಿಚಾರಗಳಿಗೆ ಆಗುವ ಘರ್ಷಣೆಗಳನ್ನು ಮಧ್ಯಮಗಳು ರಾಜಕೀಯ ಘರ್ಷಣೆಗಳು ಎಂದು ಬಿಂಬಿಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಇತ್ತೀಚಿಗೆ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ರಾಜಕೀಯ ಸಭೆಗಳಲ್ಲಿ ನಾನು ೨೫೦ ಎಕರೆ ಜಮೀನು ಮಾಡಿಕೊಂಡಿರುವುದಾಗಿ ಅಪಾದಿಸುತ್ತಿದ್ದಾರೆ. ಎಕರೆಗೆ ಎಷ್ಟು ಗುಂಟೆ ಎಂಬುದು ನಿಮಗೆ ಗೊತ್ತಿದಿಯೇ? ಯಾರಪ್ಪ ನಿಮ್ಮ ಸಲಹೆಗಾರರು, ಯಾರು ನಿಮಗೆ ಹೇಳಿಕೊಡುತ್ತಿದ್ದಾರೆ, ೬೦-೭೦ ಎಕರೆ ಎಂದಾದರೂ ಹೇಳಿದ್ದರೆ ಸತ್ಯಕ್ಕೆ ಸಮೀಪವಾಗುತ್ತಿತ್ತು ಎಂದು ಶಾಸಕ ರಮೇಶ್ ಕುಮಾರ್ ವ್ಯಂಗ್ಯಭರಿತವಾಗಿ ಮಾಜಿ ಶಾಸಕರನ್ನು ಟೀಕಿಸಿದರು.
ಜಿಲ್ಲೆಗೆ ಕೆಸಿ ವ್ಯಾಲಿ ನೀರು ತರುತ್ತಿರುವುದು ಕುಡಿಯಲು ಅಲ್ಲ, ವ್ಯವಸಾಯಕ್ಕೆ ಅಲ್ಲ, ಬತ್ತಿಹೋಗಿರುವ ಕೊಳವೆ ಬಾವಿಗಳು, ಕರೆಗಳಲ್ಲಿ ಅಂತರ್ಜಲ ಹೆಚ್ಚಿಸಲು ಮುಂದಿನ ದಿನಗಳಲ್ಲಿ ೩ನೇ ಹಂತದಲ್ಲಿ ನೀರನ್ನ ಶುದ್ಧೀಕರಿಸಲಾಗುವುದು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ, ರೈತರ ಹಿತರಕ್ಷಣೆಗಾಗಿ, ವಿದ್ಯುತ್ ಸರಬರಾಜು ಮಾಡಲು ೧೨ ಸಬ್‌ಸ್ಟೇಷನ್‌ಗಳನ್ನು ಮಾಡಲಾಗಿದೆ. ರೈತರು ಬೆಳೆದ ಬೆಳೆಗಳು ಮಾರುಕಟ್ಟೆಗೆ ತಲುಪಿಸಲು ರಸ್ತೆ ಸರಿಪಡಿಸಲಾಗಿದೆ. ಕೊಳವೆ ಬಾವಿಗಳಿಂದ ರೈತರು ನಷ್ಟವಾಗಬಾರದು ಎಂಬ ಉದ್ದೇಶದಿಂದ ಕೆರೆಗಳನ್ನು ತುಂಬಿಸಲಾಗಿದೆ ಇವೆಲ್ಲವು ವಿರೋದಿ ಸ್ನೇಹಿತರಿಗೆ ಅಭಿವೃದ್ಧಿಯಲ್ಲವೇ ಎಂದು ಪ್ರಶ್ನಿಸಿದರು.
ತೆರಿಗೆ, ಇಡಿ ಸಮಸ್ಯೆಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೇಸ್‌ನವರ ಮೇಲೆ ಚೂ ಬಿಡುವ ಮೋದಿಯವರೆ ಅಡ್ಡಗಲ್ಲಿನ ನಮ್ಮ ಮನೆಯನ್ನು ರೈಡ್ ಮಾಡಿಸಿ ಎಂದರು. ಭೂಮಿಯನ್ನೆ ನಂಬಿರುವ ವಕ್ಕಲಿಗ ಸಮುದಾಯಕ್ಕೆ ದ್ರೋಹ ಮಾಡುವುದು ಹೆತ್ತ ತಾಯಿಗೆ ದ್ರೋಹ ಮಾಡುವುದು ಒಂದೇ. ನಾನು ಯೋಗ್ಯನಾಗಿದ್ದರೆ, ನಂಬಿಕೆಗೆ ಆರ್ಹನಾಗಿದ್ದರೆ, ನುಡಿದಂತೆ ನಡೆದಿದ್ದರೆ, ಮುಂದಿನ ಚುನಾವಣೆಯಲ್ಲಿ ಮತ ನೀಡಿ ಎಂದು ಕೋರಿದರು.
ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಮಾತನಾಡಿ ವಕ್ಕಲಿಗರು ಜಾತಿವಾದಿಗಳಲ್ಲ ಜಾತ್ಯಾತೀತ ಜನ ಎಂದು ಸಾಬೀತು ಮಾಡಲು ರಮೇಶ್ ಕುಮಾರ್‌ರವರನ್ನು ಬೆಂಬಲಿಸುವ ಮೂಲಕ ರಾಜ್ಯಕ್ಕೆ ಸಂದೇಶ ಕಳುಹಿಸಬೇಕು. ನಾಲ್ಕು ಸಾರಿ ವಕ್ಕಲಿಗ ಮುಖಂಡ ವೆಂಕಟಶಿವಾರೆಡ್ಡಿ ಶಾಸಕರಾಗಿ ವಕ್ಕಲಿಗರಿಗಾಗಿ ಏನು ಮಾಡಿದ್ದಾರೆ. ಶಾಸಕ ರಮೇಶ್ ಕುಮಾರ್‌ರವರು ನನ್ನನ್ನು ಎಂ.ಎಲ್.ಸಿ ಸೇರಿದಂತೆ ಕೋಚಿಮುಲ್, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಮತ್ತು ನಿರ್ದೇಶಕರನ್ನು, ಪಿ.ಎಲ್.ಡಿ. ಬ್ಯಾಂಕ್, ಪಿ.ಎ.ಪಿ.ಎಂ.ಸಿ. ಎ.ಪಿ.ಎಂ.ಸಿ. ಸೇರಿದಂತೆ ಹಲವಾರು ಹುದ್ದೆಗಳನ್ನು ವಕ್ಕಲಿಗರಿಗೆ ಅನುವು ಮಾಡಿಕೊಟ್ಟಿದ್ದಾರೆ ಅದಕ್ಕಾಗಿ ವಕ್ಕಲಿಗರು ರಮೇಶ್ ಕುಮಾರ್‌ರವರನ್ನು ಬೆಂಬಲಿಸಬೇಕು ಎಂದರು.