44ನೇ ಚೆಸ್ ಒಲಂಪಿಯಾಡ್ ಗೆ ಮೋದಿ ಚಾಲನೆ

ನವದೆಹಲಿ, ಜೂ.19-ಪ್ರಧಾನಿ ನರೇಂದ್ರ ಮೋದಿಯವರು ಇಂದು 44ನೇ ಚೆಸ್ ಒಲಂಪಿಯಾಡ್ ಟಾರ್ಚ್ ರಿಲೆಗೆ ವಿಧ್ಯುಕ್ತ ಚಾಲನೆ ನೀಡಿದರು.
ಇಲ್ಲಿನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ಅಧ್ಯಕ್ಷ ಅರ್ಕಾಡಿ ಡ್ವೊರ್ಕೊವಿಚ್ ಅವರು ಒಲಿಂಪಿಯಾಡ್ ಜ್ಯೋತಿಯನ್ನು ಮೋದಿಯವರಿಗೆ ಹಸ್ತಾಂತರಿಸಿದರು.
ನಂತರ ಒಲಿಂಪಿಯಾಡ್ ಜ್ಯೋತಿಯನ್ನು ಐದು ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರಿಗೆ ಹಸ್ತಾಂತರಿಸಿ, ಅವರಿಂದ ಜ್ಯೋತಿಯನ್ನು ಬೆಳಗಿಸಿದರು.
ಚೆಸ್ ಚಾಂಪಿಯನ್ ಕೊನೆರೂ ಹಂಪಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಮತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ ಮಾತನಾಡಿದ ನರೇಂದ್ರ ಮೋದಿ ಭಾರತವು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯತ್ತ ಮುನ್ನುಗ್ಗುತ್ತಿದೆ. ದೇಶದ ಕ್ರೀಡಾಪಟುಗಳು ಒಲಿಂಪಿಕ್ಸ್ ಮತ್ತು ಪ್ಯಾರಾ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೂ ನಾವು ಈ ಹಿಂದೆಯೇ ಚೆಸ್ ನಲ್ಲಿ ಮೇಲುಗೈ ಸಾಧಿಸಿದ್ದೆವು ಎಂದು ಹೇಳಿದರು.
ಚೆಸ್ ನಲ್ಲಿ ಒಲಂಪಿಯಾರ್ಡ್ ಟಾರ್ಚ್ ರಿಲೆ ಭಾರತದಿಂದಲೇ ಆರಂಭಿಸಿರುವುದು ಹೆಮ್ಮೆಯ ವಿಷಯ ಎಂದರು.
ಈ ಬಾರಿ ಒಲಿಂಪಿಯಾರ್ಡ್ ನಲ್ಲಿ ಭಾಗವಹಿಸುತ್ತಿರುವ ಎಲ್ಲ ಸ್ಪರ್ಧಿಗಳು ಮೋದಿಯವರು ಶುಭಕೋರಿದರು.