ಲಕ್ಷ್ಮೇಶ್ವರ ಪಟ್ಟಣದಲ್ಲಿ ರವಿವಾರ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಸಂಸ್ಥಾಪಕ ಪ್ರವೀಣ್ ಶೆಟ್ಟಿ ಅವರ ಜನ್ಮದಿನದ ಅಂಗವಾಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ಅಧ್ಯಕ್ಷ ದಾವಲಸಾಬ ಮುಳಗುಂದ, ಲಕ್ಷ್ಮೇಶ್ವರ ಘಟಕದ ಅಧ್ಯಕ್ಷ ಮಹೇಶ್ ಕಲಘಟಗಿ, ಶ್ರೀನಿವಾಸ್ ಭಂಡಾರಿ, ಇಲಿಯಾಸ್ ಮೀರಾನವರ, ಸಾಹೆಬಲಾಲ್ ಕಲೇಗಾರ್, ಮಂಜುನಾಥ ಗಾಂಜಿ, ಜಿಲಾನಿ ಖವಾಸ್, ಪರುಶುರಾಮ ಗಾಂಜಿ ಸೇರಿ ಮತ್ತಿತರರು ಇದ್ದರು