427 ಕೊರೊನಾ ಪಾಸಿಟಿವ್ :07 ಜನರ ಸಾವು

ಕಲಬುರಗಿ.ಮೇ.2:ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯಲ್ಲಿ‌ 7 ಜನ ನಿಧನರಾಗಿದ್ದಾರೆ ಎಂದು ರವಿವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ.
ತೀವ್ರ ಉಸಿರಾಟದ ತೊಂದರೆ ಜೊತೆಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅಫಜಲಪೂರ ತಾಲೂಕಿನ‌ ಹುಣಸಿಹಡಗಿಲ್ ಗ್ರಾಮದ 53 ವರ್ಷದ ಪುರುಷ (ರೋಗಿ ಸಂ.1255066) ಏ.19 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೇ.1ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಮತ್ತು ಅಧಿಕ ರಕ್ತದೊತ್ತಡದಿಂದ‌ ಬಳಲುತ್ತಿದ್ದ ಕಲಬುರಗಿಯ ಬಾಪು ನಗರದ 77 ವರ್ಷದ ವೃದ್ಧ (ರೋಗಿ ಸಂ.1373999) ಏ.25 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೇ.1ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಜೊತೆಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿಯ ಬಡೇಪುರ ಕಾಲೋನಿಯ 50 ವರ್ಷದ ಮಹಿಳೆ (ರೋಗಿ ಸಂ.1447825) ಏ.24 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೇ.2ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಿಂದ ಕಲಬುರಗಿಯ ಭರತ‌ ನಗರದ 28 ವರ್ಷದ ಯುವಕ (ರೋಗಿ ಸಂ.1596774) ಏ.30 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಜೊತೆಗೆ ಮಧುಮೇಹದಿಂದ ಬಳಲುತ್ತಿದ್ದ ಶಹಾಬಾದ ಪಟ್ಟಣದ 70 ವರ್ಷದ ವೃದ್ಧ (ರೋಗಿ ಸಂ.1605154) ಏ.28 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಏ.30ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಿಂದ ಕಲಬುರಗಿಯ ದೇವಾ ನಗರದ 48 ವರ್ಷದ ಮಹಿಳೆ (ರೋಗಿ ಸಂ.1605171) ಏ.27 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಮೇ.1ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಜೊತೆಗೆ ಮಧುಮೇಹ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ಕಲಬುರಗಿಯ ಐವಾನ್-ಎ-ಶಾಹಿ ಪ್ರದೇಶದ 78 ವರ್ಷದ ವೃದ್ಧ (ರೋಗಿ ಸಂ.1508488) ಏ.25 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಏ.30ಕ್ಕೆ ನಿಧನ ಹೊಂದಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ಸೋಂಕಿನಿಂದ 479 ಜನ ನಿಧನರಾಗಿದ್ದಾರೆ.
ಇಂದು ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 427 ಪಾಸಿಟಿವ್ ಪ್ರಕರಣ ವರದಿಯಾಗಿದ್ದು , 07 ಜನರು ಸಾವಿಗೀಡಾಗಿದ್ದಾರೆ. ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 41046 ಪಾಸಿಟಿವ್ ಕೇಸ್ ಗ ಲಾದಂತಾಗಿದೆ. 538 ಜನ ಆಸ್ಪತ್ರೆ ಯಿಂದ ಇಂದು ಬಿಡುಗಡೆಯಾಗಿದ್ದಾರೆ.ಇಂದು ಪಾಸಿಟಿವ್ ಗಿಂತ ಆಸ್ಪತ್ರೆಯಿಂದ ಬಿಡುಗಡೆ ಯಾದವರೆ ಅಧಿಕವಾಗಿದ್ದಾರೆ. ಈ ವರೆಗೆ 31697 ಜನ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.8870 ಜನ ಸಕ್ರಿಯ ರೋ ಗಿಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.