42ನೇ ರೈತ ಹುತಾತ್ಮರ ದಿನಾಚರಣೆ

ಬೀದರ:ಜು.22:ನಗರ ಪ್ರವಾಸಿ ಮಂದಿರ ಎದುರುಗಡೆ ಕಾರಂಜಾ ಸಂತ್ರಸ್ತರ ಹೋರಾಟ ಟೆಂಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೀದರ ಜಿಲ್ಲಾ ಘಟಕದ ವತಿಯಿಂದ 42ನೇ ರೈತ ಹುತಾತ್ಮರ ದಿನಾಚರಣೆ ಆಚರಣೆಮಾಡಿ, 42 ವರ್ಷಗಳ ಹಿಂದೆ ನರಗುಂದಾ-ನವಲಗುಂದಾದಲ್ಲಿ ರೈತರು ತಮ್ಮ ಹಕ್ಕಿಕ್ಕಾಗಿ ಹೋರಾಟ ಮಾಡುತ್ತಿದ್ದಾಗ ಆಗಿನ ಕಾಂಗ್ರೇಸ್ ಸರಕಾರದ ಮುಖ್ಯಮಂತ್ರಿಯಾದ ಆರ್. ಗುಂಡೆರಾವ ರವರು ಸಂದರ್ಭದಲ್ಲಿ ರೈತರ ಮೇಲೆ ಗೋಲಿಬಾರಯಾಗಿ, ಅದಾದನಂತರ ಹಂತ ಹಂತವಾಗಿ 154 ರೈತರ ಹತ್ಯೆಗಿಡಾಗಿರುತ್ತಾರೆ. ಇದರ ಹೊಣೆಯು ಹೊತ್ತಿ ಆಗಿನ ಮುಖ್ಯಮಂತ್ರಿ ರಾಜಿನಾಮೆ ನೀಡಿರುತ್ತಾರೆ. ಇದೇನೆಲ್ಲೆಲ ನೆನೆಯುತ್ತ ಈ ವಿಷಯವನ್ನು ಜಿಲ್ಲಾಧ್ಯಕ್ಷರಾದ ಸಿದ್ರಾಮಪ್ಪ ಆಣದೂರೆ ಟೆಂಟಿನಲ್ಲಿ ಪ್ರಸ್ತಾವನೆಮಾಡಿ, ಪ್ರತಿ ವರ್ಷ 21-ಏಪ್ರೀಲ್ ರೈತ ಹುತಾತ್ಮರ ದಿನಾಚರಣೆ ಆಚರಿಸುತ್ತೇವೆಂದು ಸಂತಾಪವ್ಯಕ್ತಪಡಿಸಿದರು.

ಈ ದಿನಾಚರಣೆಯಲ್ಲಿ ಉಪಸ್ಥಿತರಾದವರು ಜಿಲ್ಲಾ ಕಾರ್ಯಧ್ಯಕ್ಷರಾದ ಶ್ರೀಮಂತ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ ಔರಾದ ತಾಲೂಕಾ ಅಧ್ಯಕ್ಷರು, ಬಾಬುರಾವ ಜೋಳದಾಬಗಾ ಬೀದರ ತಾಲೂಕಾಧ್ಯಕ್ಷರು, ನಾಗಯ್ಯಾ ಸ್ವಾಮಿ ಔರಾದ ತಾಲೂಕಿನ ಅಧ್ಯಕ್ಷರು, ಪ್ರಕಾಶ ಬಾವಗೆ, ಪ್ರವೀಣ ಕುಲಕರ್ಣಿ, ಕಾರಂಜಾ ಸಂತ್ರಸ್ತರ ಅಧ್ಯಕ್ಷರಾದಂತಹ ಚಂದ್ರಶೇಖರ ಪಾಟೀಲ್, ವಿಜಯಕುಮಾರ ಬೋರಾಳೆ, ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಬಿರಾದಾರ, ಭಾವರಾವ ಪಾಟೀಲ್, ಮಲ್ಲಿಕಾರ್ಜುನ ಚಕ್ಕಿ, ವಿಶ್ವನಾಥ ಧರಣೆ, ನಾಗಶೆಟ್ಟಿ ಹಚ್ಚೆ, ವೀರಭದ್ರಪ್ಪಾ ಉಪ್ಪಿನ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.