411 ಸಾವು,16694 ಜನರಿಗೆ ಸೋಂಕು ಒಂದೇ ದಿನ 44373 ಮಂದಿ ಚೇತರಿಕೆ

ಬೆಂಗಳೂರು, ಮೇ.31-ರಾಜ್ಯದಲ್ಲಿಂದು ಒಂದೇ ದಿನ 411ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೃತರ ಸಂಖ್ಯೆ 29090ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.
ಇಂದು ರಾಜ್ಯದಲ್ಲಿ ಚೇತರಿಕೆ ಕಂಡವರ ಸಂಖ್ಯೆ ಏರಿಕೆಯಾಗಿದ್ದು, ಒಂದೇ ದಿನ 44373 ಮಂದಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು ಬಿಡುಗಡೆ ಹೊಂದಿದವರ ಸಂಖ್ಯೆ 2261590ಕ್ಜೆ ಏರಿದೆ.
ಹೊಸ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿದ್ದು ಇಂದು 16604 ಮಂದಿಗೆ ಹೊಸ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 2604431 ಪ್ರಕರಣಗಳಿಗೆ ಹೆಚ್ವಳವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರದಲ್ಲಿ ಸಾವಿನ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಇಂದು 242 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ನಗರದಲ್ಲಿ ಮೃತರ ಸಂಖ್ಯೆ 13346ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯತ್ತ ಸಾಗಿದೆ. ಇಂದು 3992 ಮಂದಿಗೆ ಹೊಸ ಸೋಂಕು ತಗುಲಿದೆ.ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 11632229ಕ್ಜೆ ಹೆಚ್ಚಳವಾಗಿದೆ. ನಗರದಲ್ಲಿ 29332 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಬಿಡುಗಡೆಗೊಂಡವರ ಸಂಖ್ಯೆ 1003339 ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ.
ಜಿಲ್ಲೆಗಳ ವಿವರ ಹೀಗಿದೆ:
ಬಾಗಲಕೋಟೆ 194, ಬಳ್ಳಾರಿ 437, ಬೆಳಗಾವಿ 910, ಬೆಂಗಳೂರು ಗ್ರಾಮಾಂತರ 383, ಬೆಂಗಳೂರು ನಗರ 3992, ಬೀದರ್ 17, ಚಾಮರಾಜನಗರ ,317, ಚಿಕ್ಕಬಳ್ಳಾಪುರ 415, ಚಿಕ್ಕಮಗಳೂರು 340, ಚಿತ್ರದುರ್ಗ 731, ದಕ್ಷಿಣ ಕನ್ನಡ 651, ದಾವಣಗೆರೆ 360, ಧಾರವಾಡ 291, ಗದಗ 240, ಹಾಸನ 1162, ಹಾವೇರಿ 134, ಕಲಬುರಗಿ 93, ಕೊಡಗು 193, ಕೋಲಾರ 465, ಕೊಪ್ಪಳ 249, ಮಂಡ್ಯ 753, ಮೈಸೂರು 1171, ರಾಯಚೂರು 192, ರಾಮನಗರ 90, ಶಿವಮೊಗ್ಗ 589, ತುಮಕೂರು 806, ಉಡುಪಿ 529, ಉತ್ತರ ಕನ್ನಡ 641, ವಿಜಯಪುರ 185 ಮತ್ತು ಯಾದಗಿರಿಯಲ್ಲಿ 84 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.