410 ಗ್ರಾಂ ಗಾಂಜಾ ಜಪ್ತಿ: ಮಹಿಳೆ ಬಂಧನ

ಕಲಬುರಗಿ,ಮೇ.28-ಇಲ್ಲಿನ ಬಾಪುನಗರದ ಹಾಳು ಬಿದ್ದಿರುವ ಸರ್ಕಾರಿ ಹಾಸ್ಟೆಲ್ ಒಳಗಡೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಬ್ರಹ್ಮಪುರ ಪಿಎಸ್‍ಐ ಶ್ಯಾಮಸುಂದರ, ಸಿಬ್ಬಂದಿಗಳಾದ ನವೀನ್ ರೆಡ್ಡಿ, ಶಶಿಕಾಂತ, ಇಂದ್ರಮ್ಮ, ತಿಮ್ಮಮ್ಮ ಅವರು ದಾಳಿ ನಡೆಸಿದ್ದಾರೆ.
ಬಾಪು ನಗರದ ಆರತಿ ಕೀರ್ತಿಕುಮಾರ ಕಾಳೆ (26) ಎಂಬುವವರನ್ನು ಬಂಧಿಸಿ 4500 ರೂ.ಮೌಲ್ಯದ 410 ಗ್ರಾಂ.ಗಾಂಜಾ ಜಪ್ತಿ ಮಾಡಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.