40 ಸಾವಿರ ದೀಪಗಳ ಹಣತಿ ನೀಡಿದ ಗುತ್ತೇದಾರ

ಸೇಡಂ,ಜ,24: ದೇಶದೆಲ್ಲೆಡೆ ರಾಮನ ಆರಾಧನೆ ಜೋರಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರಣ ದೇಶದ ಜನರ ದೃಷ್ಟಿ ರಾಮಮಂದಿರದತ್ತ ನೆಟ್ಟಿದೆ. ಸೇಡಂ ತಾಲ್ಲೂಕಿನಲ್ಲಿ ರಾಮಮಂದಿರ ಹಬ್ಬದ ವಾತಾವರಣ ಸೃಷ್ಟಿಸಿದು.
ಈ ನಡುವೆ ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಅವರು 40 ಸಾವಿರಕ್ಕೂ ಅಧಿಕ ಮಣ್ಣೀನ ದೀಪಗಳನ್ನು ಸೇಡಂ ಮತಕ್ಷೇತ್ರದ ಪ್ರತಿ ಗ್ರಾಮದ ದೇವಸ್ಥಾನಗಳಿಗೆ ಅವರ ತಂಡದ ಸದಸ್ಯರ ಮೂಲಕ ದ್ವೀಪಗಳನ್ನು ತಲುಪಿಸಿದ್ದಾರೆ.