40 ಲಕ್ಷ ಮೌಲ್ಯದ ಸೀರೆ ಜಪ್ತಿ

ಬೀದರ್:ಏ.11: ಲಾರಿಯೊಂದರಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ?40 ಲಕ್ಷ ಮೌಲ್ಯದ ಸೀರೆಗಳನ್ನು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮನ್ನಳ್ಳಿ ಚೆಕ್ ಪೆÇೀಸ್ಟ್ ನಲ್ಲಿ ಸೋಮವಾರ ಜಪ್ತಿ ಮಾಡಿಕೊಳ್ಳಲಾಗಿದೆ.

ಸೀರೆಗಳನ್ನು ಸೂರತ್ ನಿಂದ ಚೆನ್ನೈಗೆ ಸಾಗಿಸಲಾಗುತ್ತಿತ್ತು.

ಈ ಸಂಬಂಧ ದಾಖಲೆ ಇಲ್ಲದ್ದರಿಂದ ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಲಾರಿ ಚಾಲಕನಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.

ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಮಹೇಶ ಪಾಟೀಲ ನೇತೃತ್ವದಲ್ಲಿ ಜಪ್ತಿ ಕಾರ್ಯ ನಡೆದಿದೆ. ಇಲಾಖೆಯ ಅಧಿಕಾರಿಗಳಾದ ಅಶೋಕ ಶೆಂಬೆಳ್ಳಿ, ಅಶೋಕ ಮಡಿವಾಳ, ನಂಜಯ್ಯ, ಶರಣ ಎಳವಂತಗಿ ಇದ್ದರು.