40 ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಸ್ವೀಕಾರ

ಹಗರಿಬೊಮ್ಮನಹಳ್ಳಿ:ನ.14 ಹಳೇ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 40 ಪ್ರತಿಭಾವಂತ ಆರ್ಥಿಕ ಸಬಲರಲ್ಲದ ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಿತು.
ಪಟ್ಟಣದ ಶಾಲಾ ಆವರಣದಲ್ಲಿ ನಡೆದ ಈ ಒಂದು ವಿಶೇಷ ಕಾರ್ಯಕ್ರಮ ಮಕ್ಕಳ ಶೈಕ್ಷಣಿಕ ಸಮಾನತೆಯ ದೃಷ್ಟಿಯಿಂದ ನಿಜಕ್ಕೂ ಎಲ್ಲಾ ಸರ್ಕಾರಿ ಶಾಲೆಗಳೂ ಅನುಸರಿಸಬಹುದಾದ ಉತ್ತಮ ಪ್ರಯತ್ನವಾಗಿದೆ.,ದತ್ತು ಸ್ವೀಕರಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬೇಕಾದ ಅವಶ್ಯಕ ವಸ್ತುಗಳನ್ನು ನೀಡಲಾಯಿತು. ಶಾಲೆಯ ಗುರುವೃಂದವು ಸುಮಾರು 40 ವಿದ್ಯಾರ್ಥಿಗಳನ್ನು ಗುರುತಿಸಿ ಊರಿನ ಹಿರಿಯರನ್ನು ಸಂಪರ್ಕಿಸಿ ಅವರೆಲ್ಲರಿಗೂ ಶೈಕ್ಷಣಿಕ ದತ್ತು ಪಡೆಯುವ ದಾನಿಗಳನ್ನು ಹುಡುಕಿ ಆರ್ಥಿಕ ನೆರವು ನೀಡಲು ಸಹಕಾರಿಯಾಗಿದ್ದ ಎಲ್ಲಾ ದಾನಿಗಳನ್ನು ಮುಖ್ಯಗುರುಗಳು ಹಾಗೂ ಶಿಕ್ಷಕ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಕವಿತಾ ವಿಜಯಕುಮಾರ್,ಮುಖ್ಯಾಧಿಕಾರಿ ಕೃಷ್ಣನಾಯ್ಕ,ಇಸಿಒ ಶಿವಲಿಂಗಸ್ವಾಮಿ,ಮುಸ್ತಾಕ್ ಆಹಮದ್,ಮುಖಂಡರಾದ ಕೃಷ್ಣಮೂರ್ತಿ.ಈ.ಕೆ.ನಟರಾಜ್ ಬಂಗಾರಿ,ಮಖ್ಯ ಶಿಕ್ಷಕರಾದ ಯು.ಎಸ್.ಕೊಟ್ರೇಶ್,ಬಿಅರ್‍ಸಿ ಭೀಮಸೇನಪ್ಪ,ಎಸ್‍ಡಿಎಂಸಿ ಅಧ್ಯಕ್ಷ ಲೋಕಪ್ಪ,ಹಾಗೂ ಶಾಲಾ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು.ಕಾರ್ಯಕ್ರಮ ನಿರೂಪಣೆ ಶಾಂತಮೂರ್ತಿ ನಿರ್ವಹಿಸಿದರು.
ಅಂಬೇಡ್ಕರ ಭವನ ನಿರ್ಮಾಣ ನನ್ನ ಕನಸಾಗಿತ್ತು
-ಎಸ್.ಭೀಮಾನಾಯ್ಕ