
ಬೀದರ್:ಮೇ.6: ದೇಶದಲ್ಲಿ ಎಲ್.ಐ.ಸಿ ಏಜೆಂmರು, ಜನರಲ್ ಇನ್ಸುರೆನ್ಸ್ ಏಜೆಂmರು, ವಿಮಾನ ಹಾಗೂ ರೈಲ್ವೆ ಟಿಕೆಟ್ ಮಾಡುವ ಏಜೆಂmರು, ರಿಯಲ್ ಇಸ್ಟೆಟ್ ಏಜೆಂಟರ ಬಗ್ಗೆ ತಿಳಿದುಕೊಂಡಿದ್ದಿರಿ. ಆದರೆ 40 ಪ್ರತಿಶತ ಕಮಿಷನ್ ಹೊಡೆಯುವ ಬಗ್ಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕವಷ್ಟೆ ಗೊತ್ತಾಗಿದ್ದು ಎಂದು ಎ.ಐ.ಸಿ.ಸಿ ವಕ್ತಾರರು ಹಾಗೂ ಕರ್ನಾಟಕ ವಿಧಾನ ಸಭೆ ಚುನಾವಣೆಯ ಮಾಧ್ಯಮ ಉಸ್ತುವಾರಿ ಗೌರವ ವಲ್ಲಭ ಲೇವಡಿ ಮಾಡಿದರು.
ಗುರುವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಇಂಥ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಕರೆ ನೀಡಿದರು.
ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರದ ಬಗ್ಗೆ, ಬೆಲೆ ಏರಿಕೆ ಹಾಗೂ ನಿರುದ್ಯೋಗ ನಿವಾರಣೆ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನೆ ಮಡಿದರು.
ಹಾಲಿ ಬಿಜೆಪಿ ಸರ್ಕಾರ 40 ಪ್ರತಿಶತ ಕಮಿಷನ್ ಹೊಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘ, ಖಾಸಗಿ ಶಾಲೆ ಅಡಳಿತ ಮಂಡಳಿಯವರು ರಾಜಾ ರೋಷವಾಗಿ ಹೇಳುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗ್ರಹ ಸಚಿವ ಅಮಿತ ಷಾ ಮೌನ ವಹಿಸಲು ಕಾರಣವೇನು? ಇದನ್ನು ಮತದಾರರ ಮುಂದೆ ಬಹಿರಂಗ ಪಡಿಸಲಿ ಹಾಗೇ ಸ್ವಾಮಿಜಿಗಳು ಸಹ ಆರೋಪಿಸಿದಂತೆ ಮಠ, ಮಾನ್ಯಗಳುಗೆ ನೀಡಿದ ಅನುದಾನದಲ್ಲಿ ಶೇಕಡಾ 30ರಷ್ಟು ಕಮಿಷನ್ ಪಡೆದಿರುವರೆಂದು ದಿಂಗಾಲೇಶ್ವರ ಸ್ವಾಮಿಜಿ ಹೇಳಿದ್ದಾರೆ. ಅವರ ಪಕ್ಷದ ಶಾಸಕರೆ ಹೇಳುವಂತೆ ಇಲ್ಲಿಯ ಸಿಎಂ ಕುರ್ಚಿ 2500 ಕೋಟಿ ರೂಪಾಯಿಗೆ ಬಿಕರಿ ಆಗಿದೆ ಎಂದು ಹೇಳಿದ್ದಾರೆ. ಬಿಜೆಪಿಯವರು ಬರೀ ಧರ್ಮ ಹಾಗೂ ಜಾತಿ ಹೆಸರಲ್ಲಿ ವಿಭಜಿಸಿ ಮತ ಪಡೆಯಲು ಹವಣಿಸುತ್ತಿರುವರು. ಆದರೆ, ಈ ಬಾರಿ ಬಿಜೆಪಿಯವರು ಹೊಡೆದ 40 ಪ್ರತಿಶತ ಕಮಿಷನ್‍ನಿಂದ 40 ಸೀಟು ಸಹ ಪಡೆಯಲು ಹೆಣಗಾಡಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನವೇ ಐದು ಗ್ಯಾರಂಟಿ ಯೋಜನೆಗಳಾದ ಗೃಹ ಲಕ್ಷ್ಮೀ ಯೋಜನೆ, ಗೃಹ ಜ್ಯೋತಿ, 200 ಯುನಿಟ್ ಉಚಿತ ವಿದ್ಯುತ್, ನಿರೂದ್ಯೋಗ ಯುವಜನರಿಗೆ 3,000 ನಿರೂದ್ಯೋಗ ಭತ್ಯೆ, ಉಚಿತ 10 ಕೆ.ಜಿ ಅಕ್ಕಿ ಹಾಗೂ ಮಹಿಳೆಯರಿಗೆ ರಾಜ್ಯದ ಎಲ್ಲ ಸಾರಿಗೆ ನಿಗಮಗಳ ಬಸ್‍ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಯೋಜನೆ ಜಾರಿಗೆ ತರಲಾಗುವುದು. ಖಾಸಗಿ ಬ್ಯಾಂಕ್ ಆದ ರಾಘವೇಂದ್ರ ಬ್ಯಾಂಕ್‍ನಿಂದ ವಿಜೇಯಂದ್ರ ಸ್ಕ್ಯಾಮ್ ವರೆಗೆ ಹಾಗೂ ಪಿ.ಎಸ್.ಐ ಹಗರಣದಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆ ವರೆಗೆ ಮತ್ತು ಇಂಜಿನಿಯರ್ ನೇಮಕಾತಿಯಲ್ಲಿ ಆದ ಹಗರಣಗಳ ಬಗ್ಗೆ ಪ್ರಧಾನಿಗಳು ಏಕೆ ಮಾತನಾಡುತ್ತಿಲ್ಲ. ಸಬಕಾ ಸಾಥ, ಸಬಕಾ ವಿಕಾಸ ಹಾಗೂ ಸಬಕಾ ವಿಶ್ವಾಸ ಎಲ್ಲಿ ಹೋಯಿತು ಎಂದು ಟೀಕಿಸಿರುವ ಗೌರವ ಅವರು, ಮೇಲೆ ತಿಳಿಸಿದ ಐದು ಯೋಜನೆಗಳ ಮೇಲೆ ರಾಜ್ಯದ ನಾಯಕರ ಭಾವಚಿತ್ರ ಅಳವಡಿಸಲಾಗಿದೆ. ಆದರೆ, ಭಾರತೀಯ ಜನತಾ ಪಕ್ಷದವರ ಪ್ರಣಾಳಿಕೆ ಮೇಲೆ ನರೇಂದ್ರ ಮೋದಿಯವರ ಹಾಗೂ ಅಮಿತಾ ಹಾಗೀ ಜೆ.ಪಿ ನಡ್ಡಾ ಅವರ ಭಾವಚಿತ್ರ ಅಳವಡಿಸಲಾಗಿದೆ. ಹಾಗಾದರೆ ಈ ರಾಜ್ಯದಲ್ಲಿ ಮೋದಿ-ಶಾ ಚುನಾವಣೆ ಏದುರಿಸುತ್ತಿದ್ದಾರೆಓ ಏನೋ ಗೊತ್ತಾಗುತ್ತಿಲ್ಲ ಎಂದರು.
ಹಿಮಾಚಲ ಪ್ರದೇಶದಲ್ಲಿ ಇತ್ತಿಚೀಗೆ ತಂದ ಯೋಜನೆಗಳಿಂದ ಅಲ್ಲಿಯ ಭ್ರಷ್ಟಾಚಾರ ತೊಲಗಿಸಲು ನಮ್ಮ ಸರ್ಕಾರ ಮುಂದಾದ ಕಾರಣ ಇತ್ತಿಚೀಗೆ ನಡೆದ ಸಿಮ್ಲಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗಿದೆ. ಇಲ್ಲಿಯೂ ಭ್ರಹ್ಮಾಂಡ ಭ್ರಷ್ಟಾಚಾರವಾಗಿರುವುದಕ್ಕೆ ಸಾವಿರಾರು ಉದಾಹರಣೆ ಇದ್ದು ನಮ್ಮ ಸರ್ಕಾರ ಬಂದ ಬಳಿಕ ಈ ಎಲ್ಲ ಭ್ರಷ್ಟಾಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಯುತ್ತದೆ. ಹಾಗೇ ಕಳೆದ ಕೆಲವು ತಿಂಗಳ ಹಿಂದೆ ಗುತ್ತಿಗೆದಾರ ಸಂತೋಷ ಬರೆದ ಡೆತ್ ನೋಟ್ ಬಗ್ಗೆಯೂ ತನಿಖೆ ನಡೆಸಿ ಮಾಜಿ ಸಚಿವ ಈಶ್ವರಪ್ಪರನ್ನು ಜೈಲಿಗೆ ಕಳುಹಿಸುತ್ತೇವೆ ಎಂದ ಅವರು, ಬೀದರ್ ಜಿಲ್ಲೆಯಲ್ಲಿ 6ಕ್ಕೆ 6 ಸೀಟು ಗೆಲ್ಲುವುದರಲ್ಲಿ ಅನುಮಾನವೇ ಇಲ್ಲವೆಂದು ಗೌರವ ವಲ್ಲಭ ಸ್ಪಷ್ಟಪಡಿಸಿದರು.
ಕೆ.ಪಿ.ಸಿ.ಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ಆನಿಲಕುಮಾರ, ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರರಾದ ಜಾರ್ಜ್ ಫನಾಂಡಿಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರ್ವೆಜ್ ಕಮಲ್, ನಗರ ಸಭೆ ಸದಸ್ಯ ಪ್ರಶಾಂತ ದೊಡ್ಡಿ, ಮೋಹನ ಕಾಳೇಕರ್, ವಿಶಾಲ ದೊಡ್ಡಿ ಹಾಗೂ ಇತರರು ಪತ್ರಿಕಾ ಗೋಷ್ಟಿಯಲ್ಲಿದ್ದರು.