
ನವದೆಹಲಿ.ಮೇ.9-ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಆಫ್ರಿಕಾದಿಂದ ಕರೆತರಲಾಗಿದ್ದ ಚಿರತೆಗಳ ಪೈಕಿ ಕಳೆದ 40 ದಿನಗಳಲ್ಲಿ ಮೂರನೇ ಚಿರತೆ ಇಂದು ಸಾವನ್ನಪ್ಪಿದೆ.
ದಕ್ಷ ಹೆಸರಿನ ಹೆಣ್ಣು ಚಿರತೆ ಸಾವನ್ನಪ್ಪಿರುವುದನ್ನು ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಖಚಿತ ಪಡಿಸುವ ಜೊತೆಗೆ ಚಿರತೆ ಸಾವಿಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಚಿರತೆಗಳಿಂದ ಕುನೋ ರಾಷ್ಟ್ರೀಯ ಉದ್ಯಾನವಮ ತುಂಬಿ ತುಳುಕುತ್ತಿದ್ದು ಹೀಗಾಗಿ ಗಾಂಧಿ ಸಾಗರ ಅಭಯಾರಣ್ಯಕ್ಕೆ ಚಿರತೆ ಸಾಗಿಸಲಿದ್ದು ಚಿರತೆಗಳ ಎರಡನೇ ಮನೆಯಾಗುವ ಸಾದ್ಯತೆಗಳಿವೆ
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇತರ ಪ್ರದೇಶಗಳಿಗೆ ಬಿಡುವ ನಿರ್ಧಾರವನ್ನು ಮುಂಗಾರು ನಂತರ ಪರಿಸ್ಥಿತಿ ಮರು ಮೌಲ್ಯಮಾಪನ ಮಾಡಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಪರಿಸರ ಸಚಿವಾಲಯ ಸುಳಿವು ನೀಡಿದೆ.
ಏಪ್ರಿಲ್ 30 ರಂದು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ದಕ್ಷಿಣ ಆಫ್ರಿಕಾದ ತಜ್ಞರು ಸೇರಿದಂತೆ ತಜ್ಞರ ತಂಡ ಮತ್ತು ಪ್ರಾಜೆಕ್ಟ್ ಚೀತಾದ ಪ್ರಸ್ತುತ ಸ್ಥಿತಿ ಪರಿಶೀಲಿಸಿದ ವರದಿ ಸಂಶೋಧನೆಗಳನ್ನು ಬಿಡುಗಡೆ ಮಾಡಿದ ಸಚಿವಾಲಯ, ಇತರ ಪ್ರದೇಶಗಳಿಗೆ ಮತ್ತಷ್ಟು ಚಿರತೆ ಬಿಡುಗಡೆ ಯೋಜಿತ ರೀತಿಯಲ್ಲಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಚಿರತೆಗಳನ್ನು ಬಿಡುಗಡೆ ಮಾಡಿದ ನಂತರ ಮತ್ತು ಮನೆ ವ್ಯಾಪ್ತಿ ಸ್ಥಾಪಿಸಿದ ನಂತರ ಮಾತ್ರ ಮೀಸಲು ಸ್ಥಳಾವಕಾಶ ಕಲ್ಪಿಸಬಹುದಾದ ಪ್ರಾಣಿಗಳ ನಿಜವಾದ ಸಂಖ್ಯೆ ನಿರ್ಣಯಿಸಬಹುದು ಎಂದು ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಚಿರತೆಗಳ ಎರಡನೇ ಮನೆಯ ನಿರ್ಧಾರದ ಬಗ್ಗೆ ಕೆಲವು ತಜ್ಞರು ಮತ್ತು ರಾಜ್ಯ ಅರಣ್ಯ ಅಧಿಕಾರಿಗಳ ಅಭಿಪ್ರಾಯಗಳೊಂದಿಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.
ಚೀತಾ ಕ್ರಿಯಾ ಯೋಜನೆ “ಇತರ ಸ್ಥಳಗಳನ್ನು ಮೌಲ್ಯಮಾಪನ ಮಾಡಿ ಗುರುತಿಸಿದೆ. ಮಧ್ಯಪ್ರದೇಶದ ಗಾಂಧಿಸಾಗರ್ ವನ್ಯಜೀವಿ ಅಭಯಾರಣ್ಯ ಮತ್ತು ಭೈನ್ಸ್ರೋರ್ಗಢ್ ವನ್ಯಜೀವಿ ಅಭಯಾರಣ್ಯ ಸಂಕೀರ್ಣ ಮತ್ತು ರಾಜಸ್ಥಾನದ ಜೈಸಲ್ಮೇರ್‌ನ ಶಾಘರ್ ಬಲ್ಜ್ ಅಭಯಾರಣ್ಯ ಗುರುತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಎರಡು ಬ್ಯಾಚ್‌ಗಳಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಗೊಂಡ 20 ಚಿರತೆಗಳಲ್ಲಿ ಎರಡು ಕೆಲವು ಖಾಯಿಲೆಗಳಿಂದ ಸಾವನ್ನಪ್ಪಿವೆ, ಆದರೆ ಉಳಿದವುಗಳು ಆರೋಗ್ಯವಾಗಿರುವಂತೆ ಕಾಣುತ್ತವೆ ಎಂದು ಹೇಳಿದ್ದಾರಡ.
ಇನ್ನೂ ಐದು ಚಿರತೆಗಳಲ್ಲಿ ಮೂರು ಹೆಣ್ಣು ಮತ್ತು ಎರಡು ಗಂಡು ಒಗ್ಗೂಡಿಸುವಿಕೆಯ ಶಿಬಿರಗಳಿಂದ ಜೂನ್‌ನಲ್ಲಿ ಮಾನ್ಸೂನ್ ಮಳೆ ಪ್ರಾರಂಭವಾಗುವ ಮೊದಲು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚಿರತೆ ಮಾರ್ಚ್ ನಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿಸೆ ಎಂದಿದ್ದಾರೆ.