40ಕ್ಕೂ ಹೆಚ್ಚು ಪತ್ರಿಕಾ ವಿತರಕರರಿಗೆ ಈ-ಶ್ರಮ್ ಕಾರ್ಡ್ ವಿತರಣೆ

ಸಂಜೆವಾಣಿ ವಾರ್ತೆ
ಹುಣಸೂರು, ಜ.10:- ಕಾರ್ಮಿಕ ಇಲಾಖೆ ಮತ್ತು ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನಾ ಕಾರ್ಯಕ್ರಮದಡಿ 40ಕ್ಕೂ ಹೆಚ್ಚು ಪತ್ರಿಕಾ ವಿತರಕರರಿಗೆ ಈ-ಶ್ರಮ್ ಕಾರ್ಡ್ ವಿತರಿಸಲಾಯಿತು.
ನಗರದ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಮಿಕ ನಿರೀಕ್ಷಕ ಲಕ್ಷಿಶ್ ಪತ್ರಿಕೆ ಹಂಚುವ ಹುಡುಗರಿಗೆ ಈ- ಶ್ರಮ್ ಕಾಡ್ರ್ಗಳನ್ನು ವಿತರಿಸಿ ಮಾತನಾಡಿ, ಅಸಂಘಟಿತ ವಲಯದಲ್ಲಿ ದಿನಪತ್ರಿಕೆ ವಿತರಿಸುವ ಕಾರ್ಮಿಕರು ಅರೆಕಾಲಿನ ವೃತ್ತಿ ನಿರ್ವಹಿಸುತ್ತಿದ್ದು, ಈ ಕಾರ್ಮಿಕರಲ್ಲಿ ಬಹುತೇಕರು ಪತ್ರಿಕೆ ವಿತರಿಸಲು ದ್ವಿಚಕ್ರ ವಾಹನ ಬಳಸುತಿದ್ದಾರೆ. ಇಂತಹ ಸಂದರ್ಭದಲ್ಲಿ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿತರಿಸುವ ಮೂಲಕ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
18 ವರ್ಷದಿಂದ 59 ವರ್ಷದೊಳಗಿನ ಇ.ಎಸ್.ಐ, ಇ.ಪಿ.ಎಫ್ ಸೌಲಭ್ಯ ಹೊಂದಿರದ ಮತ್ತು ಆದಾಯ ತೆರಿಗೆ ಪಾವತಿದಾರರಾಗಿರದ ಎಲ್ಲರೂ ಯೋಜನೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಕಾರ್ಮಿಕರು ಅಪಘಾತದಲ್ಲಿ ಮರಣ ಹೊಂದಿದರೆ 2 ಲಕ್ಷ ರೂ.ಗಳು, ಶಾಶ್ವತ ದುರ್ಬಲತೆ ಹೊಂದಿದರೆ 2 ಲಕ್ಷ ರೂಗಳು ಹಾಗೂ ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿ 1 ಲಕ್ಷ ರೂಪಾಯಿ ಗಳವರೆಗೆ ಅವಕಾಶವಿದೆ. ಈ-ಶ್ರಮ್ ಪೆÇೀರ್ಟಲ್ ಮೂಲಕವೂ ಸ್ವಯಂ ಆಗಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.
ತಾಲೂಕು ಪತ್ರಿಕಾ ವಿತರಕರ ಸಂಘದ ನಿರ್ದೇಶಕ ಕೆ.ಪ್ರತಾಪ್ ಮಾತನಾಡಿ, ವಿಜಯವಾಣಿ ಪತ್ರಿಕೆಯು ಕೆಲ ವರ್ಷಗಳ ಹಿಂದೆ ಮೊದಲ ಬಾರಿಗೆ ರಾಜ್ಯಾದ್ಯಂತ ಪತ್ರಿಕೆ ವಿತರಿಸುವ ಹುಡುಗರ ಸಮೀಕ್ಷೆ ನಡೆಸಿ ಅಂದಿನ ಸರ್ಕಾರಕ್ಕೆ ಪತ್ರಿಕೆ ಹಂಚುವ ಹುಡುಗರಿಗೆ ಸೇವಾ ಭದ್ರತೆ ನೀಡಲು ಒತ್ತಾಯಿಸಿತ್ತು.
ಇದೀಗ ವಿಜಯವಾಣಿ ಪತ್ರಿಕೆಯ ಸಾಮಾಜಿಕ ಕಳಕಳಿಯ ಸೇವೆ ಜಾರಿಗೊಳ್ಳುತ್ತಿದೆ. ಮಳೆ, ಬಿಸಿಲು, ಚಳಿಯೆನ್ನದೇ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವ ಹುಡುಗರಿಗೆ ಧ್ಯರ್ಯ ಸರ್ಕಾರ ಯಶಸ್ಸು ಸಾಧಿಸಿರುವುದು ನಮಗೆಲ್ಲರಿಗೂ ಸಂತಸದ ವಿಷಯವಾಗಿದೆ ಎಂದರು.
ವಿಜಯವಾಣಿ ತಾಲೂಕು ವರದಿಗಾರ ಶಿವಕುಮಾರ್.ವಿ.ರಾವ್ ಮಾತನಾಡಿ ನಮ್ಮ ವಿಜಯವಾಣಿ ಪತ್ರಿಕೆ ಮೂಲಕ ಈ ಮಹತ್ವದ ಕಾರ್ಯಕ್ರಮ ಆಯೋಜಿರುವುದು ಹೆಮ್ಮೆಯಾಗಿದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಬನ್ನಿಕುಪ್ಪೆ ಚಲುವರಾಜು, ಹಿರಿಯ ಪತ್ರಕರ್ತರಾದ ಗಜೇಂದ್ರ, ಹಿರೀಕ್ಯಾತನಹಳ್ಳಿ ಸ್ವಾಮಿಗೌಡ, ಯೋಗಾನಂದ್, ಸಣ್ಣಶೆಟ್ಟಿ, ಮಹದೇವ್, ಕಾರ್ಮಿಕ ಇಲಾಖೆಯ ಡಿ.ಇ.ಒಗಳಾದ ಭಾಸ್ಕರ್, ರಮ್ಯ ಮತ್ತು ಇತರ ಸಿಬ್ಬಂದಿ ಮತ್ತು ಪತ್ರಿಕೆ ಹಂಚುವ ಹುಡುಗರು ಹಾಜರಿದ್ದರು.