4.15 ಲಕ್ಷ ಮೌಲ್ಯದ 24 ಮೊಬೈಲ್ ಪತ್ತೆ

ಹುಮನಾಬಾದ:ಜೂ.29: ಕಳೆದ ಮೂರು ತಿಂಗಳಲ್ಲಿ ಸಾರ್ವಜನಿಕರಿಂದ ಕಳೆದು ಹೋದ ಅಥವಾ ಕಳ್ಳತನ ಮಾಡಿದ 4.15 ಲಕ್ಷ ಮೌಲ್ಯದ 24 ಮೊಬೈಲ್ ಪತ್ತೆ ಮಾಡಲಾಗಿದೆ ಎಂದು ಎಎಸ್‍ಪಿ ಶಿವಾಂಶು ರಜಪೂತ ತಿಳಿಸಿದ್ದಾರೆ.

ಪಟ್ಟಣದ ಪೆÇಲೀಸ್ ಠಾಣೆ ಪ್ರಾಂಗಣದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಸಿಇಐಆರ್ ಪೆÇೀರ್ಟಲ್ ಆಪು ಮೂಲಕ 24 ಮೊಬೈಲ್‍ಗಳು ಪತ್ತೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಶರಣಬಸಪ್ಪ ಕೋಡಾ ಪಿಎಸ್‍ಐ ಮಂಜನಗೌಡ ಪಾಟೀಲ, ಅಪರಾಧ ವಿಭಾಗ ಪಿಎಸ್‍ಐ ಸುರೇಶ ಹಜ್ಜರ್ಗಿ, ಸಿಬ್ಬಂದಿಗಳಾದ ಭಗವಾನ ಬಿರಾದಾರ, ಸೂರ್ಯಕಾಂತ ದಾಂಡೆಕರ್, ಸೋಮಶೇಖರ ಸಜ್ಜನ್, ಸಂಗಮೇಶ, ಬಾಲಾಜಿ ಪಿಚರಾಟೆ, ಬಾಬುರಾಯ ಕೋರೆ ಅವರ ತಂಡ ಕಲಬುರ್ಗಿ,ಚಿಟಗುಪ್ಪಾ ಹುಮನಾಬಾದ,

ಸೇರಿದಂತೆ ಇತರೆ ರಾಜ್ಯಗಳಲ್ಲಿ ಸಂಚರಿಸಿ ಬೆಲೆಬಾಳುವ ವಿವಿಧ ಕಂಪನಿಯ – ಒಟ್ಟು 24 ಮೊಬೈಲ್‍ಗಳನ್ನು ಪತ್ತೆ ಮಾಡಿ ಸದರಿ ಮೊಬೈಲ್‍ಗಳನ್ನು ಅವುಗಳ ಮಾಲಿಕರಿಗೆ ಒಪ್ಪಿಸಲಾಗುತ್ತಿದೆ ಎಂದರು.

ಮೊಬೈಲ್ ಫೆÇೀನ್‍ಗಳನ್ನು ಪತ್ತೆ ಹಚ್ಚುವಲ್ಲಿ ಆನ್‍ಲೈನ್ ಸಿಇಐಆರ್ ವ್ಯವಸ್ಥೆ ಸಹಕಾರಿಯಾಗಿದ್ದು, ಈ ಸೇವೆಯನ್ನು ಬಳಸಿಕೊಂಡು ಪೆÇಲೀಸರು ಕಳತವಾದ ಹಾಗೂ ಕಳೆದುಹೋದ ಮೊಬೈಲ್‍ಗಳನ್ನು ಪತ್ತೆ ಮಾಡಲಾಗುತ್ತಿದೆ. ಅದಲ್ಲದೇ ಈ ತಂತ್ರಜ್ಞಾನ ಫೆÇೀನ್ ಕಳರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಕಳವು ಅಥವಾ ಕದ್ದಲ್ಲಿ ತಕ್ಷಣ ಸಿಇಐಆರ್ ಪೆÇೀರ್ಟಲ್ ಈ ???ಪ್ ಬಳಸಿ ತಮ್ಮ ಮೊಬೈಲ್ ಮಾಹಿತಿ ಹಾಕಿದ್ದಲ್ಲಿ ಪತ್ತೆ ಹಚ್ಚಲು ಪೆÇಲೀಸರಿಗೆ ಸಹಕಾರಿಯಾಗಲಿದೆ ಎಂದರು