4 ವರ್ಷದ ಮಗುವಿಗೆ ಯಶಸ್ವಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ

ಕಲಬುರಗಿ,ಏ.16-ಕಲ್ಯಾಣ ಕರ್ನಾಟಕದಲ್ಲಿ ಮೊದಲ ಬಾರಿಗೆ 4 ವರ್ಷದ ಮಗುವಿಗೆ ಯಶಸ್ವಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡುವುದರ ಮೂಲಕ ನಗರದ ಗುಲಬರ್ಗಾ ಹಾರ್ಟ್ ಫೌಂಡೇಶನ್ ವೈದ್ಯಕೀಯ ಲೋದಲ್ಲೊಂದು ಉತ್ತಮವಾದ ಸಾಧನೆ ಮಾಡಿದೆ.
ಹಿರಿಯ ಹೃದಯ ರಕ್ತನಾಳದ ಶಸ್ತ್ರಚಿಕಿತ್ಸಕ ಡಾ.ಅರುಣ್ ಕುಮಾರ್ ಹರಿದಾಸ್ ಅವರ ನೇತೃತ್ವದಲ್ಲಿ ಹೃದಯರೋಗ ತಜ್ಞರು ಮಗುವಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
4 ವರ್ಷದ ಹೆಣ್ಣು ಮಗುವಿಗೆ ಹೃದಯದಲ್ಲಿ ರಂಧ್ರವಿದೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯುವಂತೆ ಹೃದ್ರೋಗ ತಜ್ಞರು ಪೆÇೀಷಕರಿಗ ಸೂಚಿಸಿದರು. ಇಲ್ಲಿಯೇ ಶಸ್ತ್ರ ಚಿಕಿತ್ಸೆ ಮಾಡುವಂತೆ ಮಗುವಿನ ಪೋಷಕರು ಮನವಿ ಮಾಡಿದರೂ ಹೃದ್ರೋಗ ತಜ್ಞರು ನಿರಾಕರಿಸಿ, ಮಕ್ಕಳಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಲು ಕಲಾಣ ಕರ್ನಾಟಕದಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸಕರು ಲಭ್ಯವಿಲ್ಲ ಆದ್ದರಿಂದ ಬೆಂಗಳೂರಿಗೆ ಕರೆದೊಯ್ಯುವಂತೆ ತಿಳಿಸಿದ್ದರು. ಆಗ ಮಗುವಿನ ಪೋಷಕರು ಗುಲಬರ್ಗಾ ಹಾರ್ಟ್ ಫೌಂಡೇಶನ್‍ನ ಡಾ.ಅರುಣ್ ಕುಮಾರ್ ಹರಿದಾಸ್ ಅವರ ಬಳಿ ಆಗಮಿಸಿದರು. ಆಗ ಅರುಣ ಕುಮಾರ್ ಹರಿದಾಸ್ ಅವರು ಮಗುವಿನ ಆರೋಗ್ಯ ಪರೀಕ್ಷಿಸಿ ಶಸ್ತ್ರಚಿಕಿತ್ಸೆ ಸವಾಲಿನ ಹೊರತಾಗಿಯೂ ಕನಿಷ್ಠ ಅಪಾಯದೊಂದಿಗೆ ತೆರೆದ ದಯ ಶಸ್ತ್ರಚಿಕಿತ್ಸೆ ಮಾಡಲು ಒಪ್ಪಿಕೊಂಡರು.
ಏ.11 ರಂದು ಅರುಣ್ ಕುಮಾರ್ ಹರಿದಾಸ, ತೆರೆದ ಹೃದಯ ಶಸ್ತ್ರಚಿಕಿತ್ಸಕ ಡಾ.ಕಾಸೀಮ್ ಮತ್ತು ಅರವಳಿಕೆ ತಜ್ಞ ಡಾ.ಫರ್ಯಾನ್ ಮತ್ತು ಇತರ ಐದು ತಂಡದ ಸದಸ್ಯರು ಸುಮಾರು 3 ತಾಸುಗಳಕಾಲ ಮಗುವಿಗೆ
ಯಶಸ್ವಿಯಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿದರು. ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ಯಾವುದೇ ತೊಡಕು ಸಂಭವಿಸಿಲ್ಲ, ಶಸ್ತ್ರಚಿಕಿತ್ಸೆಯಿಂದ ಮಗು ಚೇತರಿಸಿಕೊಂಡಿದ್ದು, ಹೃದಯ ಕಾಯಿಲೆಯಿಂದ ಶಾಶ್ವತವಾಗಿ ಗುಣಮುಖಳಾಗಿದ್ದಾಳೆ. ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಬೆಂಗಳೂರು ಮತ್ತು ಹೈದರಾಬಾದಿನಲ್ಲಿ 1.5 ರಿಂದ 2 ಲಕ್ಷ ವೆಚ್ಚವಾಗುತ್ತದೆ. ಡಾ.ಅರುಣ ಕುಮಾರ್ ಹರಿದಾಸ್ ಅವರು ಕೇವಲ 50 ಸಾವಿರ ರೂ. ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ಡಾ.ಅರುಣ್ ಕುಮಾರ್ ಹರಿದಾಸ್ ಅವರು ಇಲ್ಲಿಯವರೆಗೆ 150 ಕ್ಕೂ ಹೆಚ್ಚು ತೆರೆದ ಹೃದಯ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.