4 ವರ್ಷದಲ್ಲಿ ಗಣಿನಾಡಿನಲ್ಲಿ 1782 ಜನರಿಗೆ ಹೆಚ್ ಐ ವಿ ಸೋಂಕು

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ನ 30 :  ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ 2017 ರಿಂದ 2021 ರ ಅಕ್ಟೋಬರ್ ವರಗೆ 459034 ಜನರನ್ನು ಐಸಿಟಿಸಿ ಕೇಂದ್ರಗಳಲ್ಲಿ ಆಪ್ತಸಮಾಲೋಚನೆ ನಡೆಸಿ ರಕ್ತ ಪರೀಕ್ಷೆಗೆ ಒಳಪಡಿಸಿದಾಗ 1782 ಜನರಲ್ಲಿ ಹೆಚ್ ಐ ವಿ ಸೋಂಕು ಇರುವುದು ದೃಡಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಆದಿಕಾರಿ ಡಾ. ಜನಾರ್ಧನ ತಿಳಿಸಿದ್ದಾರೆ.
ನಗರದಲ್ಲಿನ ತಮ್ಮ ಕಚೇರಿಯ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಈ ಮಾಹಿತಿ ನೀಡಿದರು.
ಅಸಮಾನತೆಯನ್ನು ಕೊನೆಗೊಳಿಸಿ ಏಡ್ಸ್ ನ್ನು ಕೊನೆಗೊಳಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ  ಎಂಬ ಘೋಷ ವಾಖ್ಯ ಈ ವರ್ಷದ್ದಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ 10 ಐಸಿಟಿಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಐದು ಪಿಪಿಪಿ (ಖಾಸಗಿ)ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಸೋಂಕಿತರಿಗೆ ಜನಿಸಿದ ಮಕ್ಕಳಿಗೆ ಡಿಬಿಎಸ್ ಪರೀಕ್ಷೆ ಮಾಡಲಾಗುತ್ತದೆ ಈ ಪರೀಕ್ಷೆಯಿಂದ ಜಿಲ್ಲೆಯ ಆರು ಮಕ್ಕಳಲ್ಲಿ ಸೋಂಕು ಕಂಡುಬಂದಿದೆ.
 ಜಿಲ್ಲೆಯಲ್ಲಿ  ಸೋಂಕಿತರಿಗೆ  ಚಿಕಿತ್ಸಾ ರೂಪದಲ್ಲಿ ಬಳ್ಳಾರಿ‌ ಮತ್ತು ಸಿರುಗುಪ್ಪದಲ್ಲಿ ಎರೆಡು ಎಆರ್ ಟಿ ಕೇಂದ್ರಗಳಿದ್ದು,  ಇವುಗಳಲ್ಲಿ ಮತ್ತು ಏಳು ಲಿಂಕ್ ಎಆರ್ ಟಿ ಕೇಂದ್ರಗಳಲ್ಲಿ ನೊಂದಾಯಿಸುಕೊಂಡಿರುವ 1963 ಜನರಲ್ಲಿ ಪ್ರಸ್ತುತ 1339 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 624 ಜನರು ಸಾವನ್ನಪ್ಪಿದ್ದಾರೆ.
ಜಿಲ್ಲೆಯ ನಗರ ಪ್ರದೇಶದಲ್ಲಿ 2213, ಗ್ರಾಮೀಣ ಪ್ರದೇಶದಲ್ಲಿ 726 ಮಹಿಳಾ ಲೈಂಗಿಕ ಕಾರ್ಯಕರ್ತರು 519 ಎಮ್.ಎಸ್.ಎಮ್ ಜನರಿದ್ದಾರೆ. ಜಿಲ್ಲೆಯ ಎರೆಡು ಕಡೆಗಳಲ್ಲಿ ಲೈಂಗಿಕ ರೋಗ ಪತ್ತೆ ಕೇಂದ್ರಗಳಿವೆ ಎಂದು ಮಾಹಿತಿ‌ ನೀಡಿದರು.
ಕಂಪ್ಲಿ ತಾಲೂಕಿನಲ್ಲಿ ಕಳೆದ ನಾಲ್ಕು ವರ್ಷದಿಂದ ಹೆಚ್ ಐ ವಿ ಸೋಂಕು ಕಂಡುಬಂದಿಲ್ಲ. ಆದರೆ ಬಳ್ಳಾರಿ ತಾಲೂಕಿನಲ್ಲಿ ನಿರಂತರವಾಗಿ‌ ಕಂಡು ಬರುತ್ತಿದೆ. ಸಧ್ಯ ಈ ವರ್ಷ ಇಲ್ಲಿವರಗೆ 106 ಜನರಲ್ಲಿ ಕಂಡು ಬಂದಿದೆ. ಒಟ್ಟಾರೆ ಜಿಲ್ಲೆಯಲ್ಲಿ 158 ಜನರಲ್ಲಿ ಕಂಡು ಬಂದಿದೆ.
ಸೋಂಕಿತರ ಸಾಮಾನ್ಯ  ಪ್ರಮಾಣದಲ್ಲಿ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆ ಏಳನೇ ಸ್ಥಾನದಲ್ಲಿದ್ದು. ಗರ್ಭಿಣಿ ಸ್ತ್ರೀಯರಲ್ಲಿ ಸೋಂಕು ಕಂಡು ಬಂದಿರುವುದರಲ್ಲಿ ಮೊದಲ ಸ್ಥಾನದಲ್ಲಿದೆಂದರು.
ಡ್ಯಾಪ್ ಕೋ  ಅಧಿಕಾರಿ  ಡಾ.ಇಂದ್ರಾಣಿ ಅವರು
ಲೈಂಗಿಕ ವೃತ್ತಿಯಿಂದ ಹೊರ ಬರುವ ಜನರಿಗೆ
ಚೇತನ ಯೋಜನೆಯಡಿ 50 ಸಾವಿರ ಸಾಲ ನೀಡಲಿದೆ. ಇದರಲ್ಲಿ  25 ಸಾವಿರ ಸಹಾಯಧನವಾಗಿರಲಿದೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜಾನಾಯಕ್,  ಎಆರ್ ಟಿ ಕೇಂದ್ರದ ದಿನೇಶ್ ಗುಡಿ ಮೊದಲಾದವರು ಇದ್ದರು.