ತಾಳಿಕೋಟೆ:ಮಾ.24: ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ಇಂದು ಗುರುವಾರರಂದು ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳ ಅವರ ಅಧ್ಯಕ್ಷತೆಯಲ್ಲಿ ನಡೆದ 2023-24 ನೇ ಸಾಲಿನ ಆಯವ್ಯಯ ವಿಶೇಷ ಸಭೆಯಲ್ಲಿ ಒಟ್ಟು 13 ಕೋಟಿ 79 ಲಕ್ಷ ರೂ.ಯ ಆದಾಯ ನಿರಿಕ್ಷಿತ ಬ್ರಹತ್ ಗಾತ್ರದ ಬಜೆಟ್ ಮಂಡನೆಯಾಗಿದ್ದು ಇದರಲ್ಲಿ 13 ಕೋಟಿ 74 ಲಕ್ಷ ರೂ. ವೆಚ್ಚ ತೆಗೆದು ಒಟ್ಟು 4ಲಕ್ಷ 93 ಸಾವಿರ ರೂ. ಉಳಿತಾ ಬಜೆಟ್ ಮಂಡಿಸಲಾಗಿದೆ.
ಆದಾಯದ ಮೂಲವಾಗಿ ಆಸ್ತಿ ತೆರಿಗೆಯಿಂದ 1 ಕೋಟಿ 59 ಲಕ್ಷ ರೂ. ಕಟ್ಟಡ ವಾಣಿಜ್ಯ ಮಳಿಗೆ ಬಾಡಿಗೆ 1 ಕೋಟಿ 37 ಲಕ್ಷ, ಸಾಮಾನ್ಯ ಆಡಳಿತದಿಂದ 1 ಕೋಟಿ 89 ಲಕ್ಷ ರೂ., ನೈರ್ಮಲೀಕರಣ ಗನತ್ಯಾಜ ವಸ್ತು 4.50 ಲಕ್ಷ ರೂ., ಕಟ್ಟಡ ಕಾಯ್ದೆಗಳಿಗೆ ಸಂಬಂದಿತ ಶುಲ್ಕದಿಂದ 21.60 ಲಕ್ಷ ರೂ, ನಾಗರಿಕ ಸೌಕರ್ಯಗಳು ಮತ್ತು ನೀರು ಸರಬರಾಜು(50&51) ದಿಂದ 77.75 ಲಕ್ಷ ರೂ., ರಾಜ್ಯ ಹಣಕಾಸು ಆಯೋಗದಿಂದ 4 ಕೋಟಿ 50 ಲಕ್ಷ ರೂ., ಕೇಂದ್ರ ಸರ್ಕಾರದಿಂದ 1 ಕೋಟಿ 80 ಲಕ್ಷ ರೂ., ಹೀಗೆ ರಾಜಸ್ವ ಸಂಗ್ರಹದಿಂದ 8 ಕೋಟಿ 19 ಲಕ್ಷ ರೂ., ಮತ್ತು ಬಂಡವಾಳ ಸ್ವಿಕೃತಿಯಿಂದ 3 ಕೋಟಿ 84 ಲಕ್ಷ ರೂ. ಅಸಾದಾರಣ ಸ್ವೀಕೃತಿ 1 ಕೋಟಿ 76 ಲಕ್ಷ ರೂ. ಹೀಗೆ ಒಟ್ಟು 13 ಕೋಟಿ 79 ಲಕ್ಷ ಆದಾಯ ನೀರಿಕ್ಷೀಸಲಾಗಿದೆ.
ಇದರಲ್ಲಿ ಪಟ್ಟಣದ ಅಭಿವೃದ್ದಿಯ ಹಿತ ದೃಷ್ಠಿಯಿಂದ ಹಾಗೂ ಜನ ಉಪಯೋಗಕ್ಕಾಗಿ ವೆಚ್ಚಗಳಾಗಿ ಸಾಮಾನ್ಯ ಆಡಳಿತಕ್ಕಾಗಿ 4 ಕೋಟಿ 26 ಲಕ್ಷ ರೂ., ರಸ್ತೆ, ಕಲ್ಲು, ಚರಂಡಿ ದುರಸ್ತಿಗಾಗಿ 6 ಕೋಟಿ 50 ಲಕ್ಷ ರೂ., ಬೀದಿ ದೀಪ ನಿರ್ವಹಣೆಗಾಗಿ 1 ಕೋಟಿ 47 ಲಕ್ಷ ರೂ., ಒಳಚರಂಡಿ ಇನ್ನಿತರ ಕಾರ್ಯಗಳಿಗಾಗಿ 16 ಲಕ್ಷ ರೂ., ಪಟ್ಟಣದ ಜನರಿಗೆ ಕುಡಿಯುವ ನೀರಿನ ಸರಬರಾಜುಗಾಗಿ 96 ಲಕ್ಷ ರೂ., ಉದ್ಯಾನವನಗಳಿಗಾಗಿ 50 ಲಕ್ಷ ರೂ., ಮತ್ತು ಇನ್ನಿತರ ಖರ್ಚುಗಳು ಸೇರಿ ಒಟ್ಟು 13 ಕೋಟಿ 74 ಲಕ್ಷ ರೂ.ಯನ್ನು ವೆಚ್ಚಕ್ಕಾಗಿ ಮಿಸಲಿಡಲಾಗಿದೆ, ಒಟ್ಟು 4.93 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಗಿದೆ.
ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ಸದಸ್ಯರುಗಳಾದ ಶ್ರೀಮತಿ ಅಕ್ಕಮಹಾದೇವಿ ಕಟ್ಟಿಮನಿ, ಅಣ್ಣಾಜಿ ಜಗತಾಪ, ಪರಶುರಾಮ ತಂಗಡಗಿ, ವಾಸುದೇವ ಹೆಬಸೂರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಮುತ್ತಣ್ಣ ಚಮಲಾಪೂರ, ಡಿ.ವ್ಹಿ.ಪಾಟೀಲ, ಮೋಹನ ಬಡಿಗೇರ, ಸೈದಾಬಿ ಚಿತ್ತರಗಿ, ಕಸ್ತೂರಿಬಾಯಿ ಬಿರಾದಾರ, ಇಸ್ಮಾಯಿಲಬಿ ಮಕಾಂದಾರ, ಶಾಂತಾಬಾಯಿ ಹೊಟ್ಟಿ, ಸಾಹಿದಾಬೇಗಂ ಬೇಪಾರಿ, ಮೈಹಿಬೂಬಿ ಲಾಹೋರಿ, ಗೌರಮ್ಮ ಕುಂಭಾರ, ನಿಂಗು ಕುಂಟೋಜಿ, ಯಾಸೀನ ಮಮದಾಪೂರ, ಜುಬೇದಾ ಜಮಾದಾರ, ಶ್ರೀಮತಿ ಮೈಹಿಬೂಬಿ ಅಲ್ಲಾಬಕ್ಷ ಮನಗೂಳಿ, ಫಾತಿಮಾಬಿ ಖಾಜಾಬಸರಿ, ಮಾನಸಿಂಗ್ ಕೊಕಟನೂರ, ಸಂಗಯ್ಯ ಹಿರೇಮಠ, ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ, ರಾಹುಲ್ ಕಾಂಬಳೆ, ಆರ್.ವಾಯ್.ನಾರಾಯಣಿ, ಶಿವಾನಂದ ಜುಮನಾಳ, ಲೆಕ್ಕಿಗ ಸಿದ್ದಲಿಂಗ ಚೋಂಡಿಪಾಟೀಲ, ಆಯ್.ಎಚ್.ಮಕಾಂದಾರ, ಶಂಕರಗೌಡ ಬಿರಾದಾರ, ಶಂಕರಗೌಡ ಪಾಟೀಲ, ಡಿ.ಬಿ.ಜಾನ್ವೇಕರ, ಶ್ರೀಪಾದ ಜೋಶಿ, ಅವರು ಉಪಸ್ಥಿತರಿದ್ದರು.
ವಿಶೇಷವಾಗಿ ಅಕ್ರಮ ಒಳಚರಂಡಿ ಜೋಡಣೆ ಸಕ್ರಮಗೊಳಿಸುವದು, ಮತ್ತು ಇತರೇ ಆದಾಯಗಳಿಂದ ರಾಜಸ್ವ ಸಂಗ್ರಹಿಸುವದರ ಜೊತೆಗೆ ಸರ್ಕಾರಕ್ಕೆ ನೀರು ಸರಬರಾಜು ಸಂಬಂದಿಸಿದಂತೆ ಹೆಚ್ಚಿನ ಅನುದಾನಕ್ಕೆ ಪ್ರಸ್ಥಾವನೆ ಸಲ್ಲಿಸುವದು ಮತ್ತು ವಾಣಿಜ್ಯ ಮಳಿಗೆಗಳ ಹಾಗೂ ಮೇಘಾ ಮಾರುಕಟ್ಟೆ ನಿರ್ಮಾಣ, ನಾಗರಿಕ ಸೌಲಭ್ಯ, ಗಾರ್ಡನ್,ಗಳಿಗೆ ಸಂಬಂದಿಸಿದಂತೆ ಅನುದಾನವನ್ನು ಕಾಯ್ದಿರಿಸಿ ಜನಹಿತ ಬಜೆಟ್ ಮಂಡಿಸಲಾಗಿದೆ.
ಸಂಗಮೇಶ ಇಂಗಳಗಿ
ಪುರಸಭೆ ಅಧ್ಯಕ್ಷ