4 ರಾಜ್ಯಗಳಿಗೆ 2 ಸಾವಿರ ಮೆ. ಟ. ಆಮ್ಲಜನಕ

ನವದೆಹಲಿ, ಜೂ.೨- ದೇಶದಲ್ಲಿ ಆಮ್ಲಜಕ ಕೊರತೆ ಎದುರಾದ ಹಿನ್ನೆಲೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಿಗೆ ತಲಾ ೨೦೦೦ ಮೆಟ್ರಿಕ್ ಟನ್‌ಗೂ ಅಧಿಕ ಆಮ್ಲಜನಕ ಪೂರೈಕೆ ಮಾಡಲಾಗಿದೆ.
ದೇಶಾದ್ಯಂತ ೩೩೪ ಎಕ್ಸ್ ಪ್ರೆಸ್ ರೈಲಿಗಳ ೧೩೫೭ ಟ್ಯಾಂಕರ್ ಮೂಲಕ ಇಲ್ಲಿಯ ತನಕ ೨೨೯೧೬ ಮೆಟ್ರಿಕ್ ಆಮ್ಲಜನಕ ಪೂರೈಕೆ ಮಾಡಲಾಗಿದೆ ಎಂದು ರೈಲ್ವ ಸಚಿವಾಲಯ ತಿಳಿಸಿದೆ.
ರಾಜ್ಯ ಮತ್ತು ಕೇಂದ್ರಾಡಳಿ ಪ್ರದೇಶಗಳು ಕೊರೊನಾ ಸೋಂಕಿನ ವಿರುದ್ದ ಹೋರಾಡುತ್ತಿದ್ದು ಅವುಗಳೊಂದಿಗೆ ಭಾರತೀಯ ರೈಲ್ವೆ ಕೈಜೋಡಿಸಿ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ
ಯಾವ ಯಾವ ರಾಜ್ಯಕ್ಕೆ ಎಷ್ಟು:

ಮಹಾರಾಷ್ಟ್ರಕ್ಕೆ ೬೧೪ ಮೆಟ್ರಿಕ್ ಟನ್ ಆಕ್ಸಿಜನ್, ಉತ್ತರ ಪ್ರದೇಶಕ್ಕೆಸುಮಾರು ೩೭೯೭ ಮೆಟ್ರಿಕ್ ಟನ್, ಮಧ್ಯಪ್ರದೇಶಕ್ಕೆ ೬೫೬, ದೆಹಲಿಗೆ ೫೫೫೭ , ಹರಿಯಾಣಕ್ಕೆ ೨೦೮೯, ರಾಜಸ್ಥಾನಕ್ಕೆ ೯೮, ಕರ್ನಾಟಕಕ್ಕೆ ೨೪೪೦, ಉತ್ತರಾಖಂಡಕ್ಕೆ ೩೨೦, ತಮಿಳುನಾಡಿಗೆ ೨೧೯೦, ಆಂಧ್ರಪ್ರದೇಶಕ್ಕೆ ೨೧೨೫, ಪಂಜಾಬ್ ಗೆ ೨೨೫, ಕೇರಳಕ್ಕೆ ೩೮೦, ತೆಲಂಗಾಣಕ್ಕೆ ೨೦೬೨, ಜಾರ್ಖಂಡ್ ಗೆ ೩೮ ಮತ್ತು ಅಸ್ಸಾಂಗೆ ೩೨೦ ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ ಮಾಡಲಾಗಿದೆ.

ಇದರ ಜೊತೆಗೆ ಇನ್ನೂ ೩೨ ಟ್ಯಾಂಕರ್ ಗಳಲ್ಲಿ ೫೦೦ ಮೆಟ್ರಿಕ್ ಟನ್ ಆಮ್ಲಜನಕ ಹೊತ್ತ ೬ ಭರ್ತಿ ಮಾಡಿದ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಪ್ರಗತಿಯಲ್ಲಿದೆ.

ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಅಸ್ಸಾಂ ಸೇರಿ ೧೫ ರಾಜ್ಯಗಳಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಆಮ್ಲಜನಕವನ್ನು ನೆರವು ನೀಡಲಾಗುತ್ತಿದೆ.

ದೇಶಾದ್ಯಂತ ೧೫ ರಾಜ್ಯಗಳ ೩೯ ನಗರ,ಪಟ್ಟಣಗಳಿಗೆ ಆಮ್ಲಜನಕ ಪೂರೈಕೆ ಮಾಡಲಾಗಿದೆ. ಗರಿಷ್ಠ ಆದ್ಯತೆಯ ಗ್ರೀನ್ ಕಾರಿಡಾರ್ ನಲ್ಲಿ ರೈಲುಗಳು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.