4 ರಂದು ಕಲಬುರಗಿಗೆ ಡಿಕೆಶಿ

ಕಲಬುರಗಿ:ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರರು ಅ.4 ರಂದು ನಗರಕ್ಕೆ ಆಗಮಿಸಲಿದ್ದಾರೆ.
ಅ.4 ರಂದು ಬೆಳಿಗ್ಗೆ 9.45 ಕ್ಕೆ ಸ್ಟಾರ್ ಏರ್ ವಿಮಾನ ಮೂಲಕ ನಗರಕ್ಕೆ ಆಗಮಿಸುವ ಡಿ.ಕೆ.ಶಿವಕುಮಾರರು ಬೆಳಿಗ್ಗೆ 11 ಕ್ಕೆ ಸುದ್ದಿಗೋಷ್ಠಿ ನಡೆಸುವರು. ಮಧ್ಯಾನ 12.30 ಕ್ಕೆ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಸಂಜೆ 5 ಕ್ಕೆ ರಸ್ತೆ ಮೂಲಕ ಹೈದ್ರಾಬಾದಗೆ ತೆರಳಿ ಅಲ್ಲಿಂದ ರಾತ್ರಿ 9.30 ಕ್ಕೆ ಬೆಂಗಳೂರಿಗೆ ತೆರಳುವರು.
ಕೆಪಿಸಿಸಿ(ಐ) ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಅವರು ಕಲಬುರಗಿ ನಗರಕ್ಕೆ ಆಗಮಿಸುತ್ತಿದ್ದಾರೆ.