4 ದಿನಗಳ ಬಳಿಕ ಅಯ್ಯಪ್ಪ ದೇಗುಲ ಪುನಾರಂಭ

ಪತನಂತಿಟ್ಟ, ಡಿ ೩೧- ಶಬರಿಮಲೆ ಅಯ್ಯಪ್ಪ ದೇಗುಲವನ್ನು ಮತ್ತೆ ತೆರೆಯಲಾಗಿದೆ. ೪ ದಿನಗಳ ತಾತ್ಕಾಲಿಕ ಬಂದ್ ಬಳಿಕ ಮತ್ತೆ ಆರಂಭಿಸಲಾಗಿದೆ.
ಮಕರವಿಳಕ್ಕು ಹಬ್ಬದ ಆಚರಣೆಗಾಗಿ ದೇವಸ್ಥಾನಕ್ಕೆ ಭಕ್ತರ ಭೇಟಿಗೆ ಇಂದಿನಿಂದ ಅವಕಾಶ ಕಲ್ಪಿಸಲಾಗಿದೆ. ಜನವರಿ ೧೪ ರಂದು ಸಂಕ್ರಾಂತಿ ಹಬ್ಬದ ಪೂಜೆ ನಡೆದ ಬಳಿಕ ೨೦ ರಂದು ಬಂದ್ ಮಾಡಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಮುಖ್ಯ ಅರ್ಚಕ ಕಂದರಾರು ರಾಜೀವರಾರು ಅವರು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗರ್ಭಗುಡಿಯ ಬಾಗಿಲು ತೆರೆದಿದ್ದಾರೆ.ಮಲ್ಲಿಕಾಪುರ ಕ್ಷೇತ್ರವನ್ನು ಮತ್ತೂಬ್ಬ ಅರ್ಚಕ ಹರಿಹರನ್‌ನಂಬೂದಿರಿ ತೆರೆದರು.
ಜ.೧೪ರಂದು ಸಂಕ್ರಾತಿ ಸಂದರ್ಭದಲ್ಲಿ ಮಕರಜ್ಯೋತಿ ಕಾಣಿಸಿಕೊಳ್ಳಲಿದೆ. ಜ.೨೦ರಂದು ದೇಗುಲವನ್ನು ಮುಚ್ಚಲಾಗುತ್ತದೆ.
ಯಾತ್ರಾರ್ಥಿ ಋತುವಿನ ಮೊದಲಾರ್ಧದಲ್ಲಿ ಭಕ್ತರ ನೂಕುನುಗ್ಗಲು ಕಂಡುಬಂದರೆ, ಮಂಡಳಿಯು ದೈನಂದಿನ ಕಾಲ್ನಡಿಗೆಯಲ್ಲಿ ಮತ್ತಷ್ಟು ಏರಿಕೆಯನ್ನು ಎಣಿಕೆ ಮಾಡ ಲಾಗಿತ್ತು, ಅದಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಮಾಡುತ್ತಿದೆ.
೨ ತಿಂಗಳ ತೀರ್ಥಯಾತ್ರೆಯ ಭಾಗವಾಗಿ ಮೊದಲ ಹಂತದಲ್ಲಿ ದೇವಸ್ಥಾನವನ್ನು ನವೆಂಬರ್ ೧೭ ರಂದು ಆರಂಭಿಸಲಾಯಿತು. ಸತತ ೩೦ ದಿನಗಳ ಬಳಿಕ ಅಂದರೆ ಡಿಸೆಂಬರ್ ೨೭ ರಂದು ಮಂಡಲ ಪೂಜೆ ಸಲ್ಲಿಸುವ ಮೂಲಕ ದೇವಸ್ಥಾನ ಬಂದ್ ಮಾಡಲಾಯಿತು.
ಈ ಅವಧಿಯಲ್ಲಿ ೩೦ ಲಕ್ಷಕ್ಕೂ ಹೆಚ್ಚು ಭಕ್ತರು ಅಯ್ಯಪ್ಪಸ್ವಾಮಿ ದರ್ಶನ ಪಡೆದರು.
ಈ ವರ್ಷ ಮೊದಲ ಅವಧಿಯಲ್ಲಿ ೨೨೨.೯೮ ಕೋಟಿ ಆದಾಯ ದೇವಸ್ಥಾನಕ್ಕೆ ಹರಿದು ಬಂದಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ತಿಳಿಸಿತ್ತು