4 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ

ತಾಳಿಕೋಟೆ:ಜೂ.15: ತಾಳಿಕೋಟೆ ಪಟ್ಟಣದ ಜನರಿಗೆ ಕುಡಿಯಲು ಮಾಳನೂರ ಕೇರೆಯಿಂದ ಸರಬರಾಜು ಮಾಡಲಾಗುತ್ತಿರುವ ಶುದ್ದ ಕುಡಿಯುವ ಸಿಹಿ ನೀರು ಇನ್ನುಮುಂದೆ 4 ದಿನಕ್ಕೋಮ್ಮೆ ಸರಬರಾಜು ಮಾಡಲಾಗುತ್ತಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಅವರು ಪಟ್ಟಣದ ಜನರಲ್ಲಿ ಮನವಿ ಮಾಡಿದ್ದಾರೆ.

ಮಾಳನೂರ ಕೇರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವದರಿಂದ ಮತ್ತು ಕೇರೆಗೆ ನೀರು ಸರಬರಾಜು ಆಗುವ ಎಡದಂಡೆ ಕಾಲುವೆಗೆ ನೀರು ಬಿಟ್ಟಿಲ್ಲದಿರುವದರಿಂದ ಸದ್ಯ 3ದಿನಕ್ಕೋಮ್ಮೆ ಸರಬರಾಜು ಮಾಡಲಾಗುತ್ತಿರುವ ಕುಡಿಯುವ ನೀರು ಇನ್ನೂ ಮುಂದೆ 4 ದಿನಕ್ಕೋಮ್ಮೆ ಸರಬರಾಜು ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸದ್ಯ ಇದೇ ಜೂನ್ 23 ರಿಂದ ತಾಳಿಕೋಟೆ ಪಟ್ಟಣದಲ್ಲಿ ಶ್ರೀ ಗ್ರಾಮದೇವತೆ ಮತ್ತು ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವಗಳು ಬಂದಿರುವದರಿಂದ ಸಾರ್ವಜನಿಕರು ನೀರನ್ನು ವ್ಯರ್ಥವಾಗಿ ಪೋಲುಮಾಡದೇ ಮಿತಿವೇಯವಾಗಿ ಬಳಕೆ ಮಾಡಬೇಕು ಮತ್ತು ಪ್ರತಿ ಮನೆಯಗಳಿಗೆ ನಳಗಳನ್ನು ಜೋಡಣೆ ಮಾಡಿಕೊಂಡು ನೀರು ಸಾಕಾದಕೂಡಲೇ ಚರಂಡಿ ಇನ್ನಿತರಕಡೆಗಳಲ್ಲಿ ಪೈಪುಗಳನ್ನು ಎಸೆಯದೇ ಬಂದ್ ಮಾಡಬೇಕು ನೀರು ವ್ಯರ್ಥವಾಗಿ ಹರಿದುಹೋಗುವದನ್ನು ತಡೆದು ಪುರಸಭೆಗೆ ಸಹಕರಿಸಬೇಕೆಂದು ಪುರಸಭೆಯ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಅವರು ಪ್ರಕಟನೆ ಮೂಲಕ ತಿಳಿಸಿದ್ದಾರೆ.