4 ಜನ ಶಿಕ್ಷಾ ಬಂದಿಗಳ ಬಿಡುಗಡೆ

ಕಲಬುರಗಿ,ಅ.15:77 ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಕಾರಾಗೃಹದ ಮುಖ್ಯದ್ವಾರದ ಮುಂಭಾಗದಲ್ಲಿ ಕಾರಾಗೃಹದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಕಾರಾಗೃಹದ ಒಳ ಭಾಗದಲ್ಲಿ ಕೂಡ ಬಂದಿಗಳಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ನಂತರ ಕರ್ನಾಟಕ ಸರ್ಕಾರದ ಆದೇಶದಂತೆ ಈ ಕೆಳಕಂಡ ನಿರ್ಧಿಷ್ಠ ವರ್ಗದ ಶಿಕ್ಷಾ ಬಂದಿಗಳನ್ನು 75 ವರ್ಷದ ಅಜಾದಿಕ ಅಮೃತ ಮಹೋತ್ಸವದ ಅಂಗವಾಗಿ 4 ಜನ ಶಿಕ್ಷಾ ಬಂದಿಗಳಾದ 1) ಸಜಾ ಬಂದಿ ಸಂಖ್ಯೆ: 872, ಸೀನು ತಂದೆ ರಾಮರೆಡ್ಡಿ 2) ಸಜಾ ಬಂದಿ ಸಂಖ್ಯೆ: 873 ಬಸವರಾಜು ತಂದೆ ವೈಜಿನಾಥ 3) ಸಜಾ ಬಂದಿ ಸಂಖ್ಯೆ: 446 ಮಲ್ಲಪ್ಪ @ ಮಲ್ಲೇಶ ತಂದೆ ಸುರಪ್ಪ ಪೂಜಾರಿ 4) ಸಜಾ ಬಂದಿ ಸಂಖ್ಯೆ: 751, ಶೇಖಪ್ಪ ತಂದೆ ಬೈಲಪ್ಪ ನಡಕೇರಿ ರವರನ್ನು ಅವಧಿ ಪೂರ್ವ ಬಿಡುಗಡೆಗೊಳಿಸಲಾಯಿತು.
ಸ್ವಾತಂತ್ರೋತ್ಸವ ದಿನಾರಣೆಯ ಪ್ರಯುಕ್ತ ಕಾರಾಗೃಹದಲ್ಲಿ ಹೊಲಿಗೆ, ವಿದ್ಯುತ್ ವಿಭಾಗಗಳಲ್ಲಿ ತರಬೇತಿ ಪಡೆದ ಶಿಕ್ಷಾ ಮತ್ತು ವಿಚಾರಣಾ ಬಂದಿಗಳು ಸೇರಿದಂತೆ ಒಟ್ಟು 40 ಜನ ಬಂದಿಗಳಲ್ಲಿ 27 ಜನ ಶಿಕ್ಷಾ ಬಂದಿಗಳಿಗೆ ಕರ್ನಾಟಕ ಕಾರಾಗೃಹ ಮತ್ತು ಸುಧಾರಣೆ ಸೇವೆ ಕೈಪಿಡಿ-2021 ರ ನಿಯಮ 167 ಎಫ್ ರಂತೆ ಬಂದಿಗಳಿಗೆ 30 ದಿನಗಳ ವಿಶೇಷ ಮಾಫಿಯನ್ನು ದಿನಾಂಕ: 15-08-2023 ರಂದು ಮಂಜೂರು ಮಾಡುವುದರೊಂದಿಗೆ ಪ್ರಮಾಣ ಪತ್ರಗಳನ್ನು ಹಾಗೂ 13 ಜನ ವಿಚಾರಣಾ ಬಂದಿಗಳಿಗೆ ತರಬೇತಿ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಸ್ತಾವಿಕವಾಗಿ ಈ ಸಂಸ್ಥೆಯ ಅಧೀಕ್ಷಕರಾದಂತಹ ಶ್ರೀ ಬಿ.ಎಂ. ಕೊಟ್ರೇಶ್, ಮಾತನಾಡುತ್ತಾ, ಮೊದಲಿಗೆ ಎಲ್ಲರಿಗೂ 77 ನೇ ಸ್ವಾತಂತ್ರೋತ್ಸವ ದಿನಾಚರಣೆಯ ಶುಭಾಶಯವನ್ನು ಕೋರಿದರು. ಅವಧಿ ಪೂರ್ವ ಬಿಡುಗಡೆ ಹೊಂದಿದ ಶಿಕ್ಷಾ ಬಂದಿಗಳಿಗೆ ಕಾರಾಗೃಹದಿಂದ ಹೊರಗಡೆ ಹೋಗಿ ಸಮಾಜದಲ್ಲಿ ಉತ್ತಮ ಬದುಕನ್ನು ನಡೆಸಲು ತಿಳಿಸಿದರು. ಉಳಿದ ಶಿಕ್ಷಾ ಬಂದಿಗಳು ನೀವು ಕೂಡ ಕಾರಾಗೃಹದಲ್ಲಿ ನೀಡುವ ವಿವಿಧ ವೃತ್ತಿ ಪರ ತರಬೇತಿಗಳು ಹಾಗೂ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡು ಸನ್ನಡತೆ ಹೊಂದಿ ಅದಷ್ಟು ಬೇಗ ಕಾರಾಗೃಹದಿಂದ ಬಿಡುಗಡೆ ಹೊಂದುವಂತೆ ಕೋರಿದರು.

     ಅತಿಥಿಗಳಾಗಿ ಆಗಮಿಸಿದ  ನ್ಯಾಯಾಧೀಶರಾದ ಶ್ರೀ ಮೊಹ್ಮದ ಅನ್ವರ ಹುಸೇನ್ ಮೊಗಲಾನಿ ಸದಸ್ಯ ಕಾರ್ಯರ್ದಶಿಗಳು ಮಾತನಾಡುತ್ತಾ, ಬಿಡುಗಡೆ ಹೊಂದಿದ ಬಂದಿಗಳಿಗೆ ಹೊರಗಡೆ ಹೋಗಿ ಉತ್ತಮ ಜೀವನವನ್ನು ಕಟ್ಟಿಕೊಳ್ಳುವಂತೆ ತಿಳಿಸಿದರು ಹಾಗೂ ನಿಮಗೆ ಬಿಡುಗಡೆ ಮಾಡುವಾಗ ನಿಮ್ಮ ಕೆಲಸ ಕಾರ್ಯಗಳನ್ನು ಗಮನಿಸಿ, ಸನ್ನಡೆತೆಯನ್ನು ಪರಿಗಣಿಸಿ ಬಿಡುಗಡೆ ಮಾಡಲಾಗುತ್ತಿದೆ. ತಾವುಗಳು ಇದರ ಸದುಪಯೋಗವನ್ನು ಪಡೆದುಕೊಂಡು ಕಾರಾಗೃಹದಿಂದ ಬಿಡುಗಡೆ ಹೊಂದುವಂತೆ ತಿಳಿಸಿದರು.
     ಮುಖ್ಯ ಅತಿಥಿಗಳಾಗಿ ಆಗಮಿಸಿದ  ನ್ಯಾಯಾಧೀಶರಾದ ಶ್ರೀ ಕೆ.ಬಿ.ಪಾಟೀಲ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಲಬುರಗಿ ರವರು ಬಿಡುಗಡೆ ಹೊಂದಿದ ಬಂದಿಗಳಿಗೆ ಹಾಗೂ ತರಬೇತಿ ಪಡೆದ ಶಿಕ್ಷಾ ಬಂದಿಗಳಿಗೆ ಪ್ರಮಾಣ ಪತ್ರಗಳನ್ನು ನೀಡುವುದರೊಂದಿಗೆ ಮಾತನಾಡುತ್ತಾ, ತಾವುಗಳು ಈ ಕಾರಾಗೃಹದಲ್ಲಿ ತಪ್ಪು ಮಾಡಿರಬಹುದು ಅಥವಾ ಮಾಡದೇ ಇರುಬಹುದು ಅಂತಹವರು ಶಿಕ್ಷೆಗೆ ಗುರಿಯಾಗಿ ಕಾರಾಗೃಹದಲ್ಲಿ ಬಂದಿದ್ದಿರಿ, ಇಲ್ಲಿನ ಅಧಿಕಾರಿ ವೃಂದದವರು ನೀಡುವ ತರಬೇತಿಗಳನ್ನು ಪಡೆದು ಹೊರಗಡೆ ಹೋಗಿ ಸ್ವಾವಲಂಭಿ ಬದಕನ್ನು ಪ್ರಾರಂಭಿಸಬೇಕು. ಏಕೆಂದರೆ ಹೊರಗಡೆ ಜನ ನಿಮ್ಮನ್ನು ಕೈದಿ ಎಂಬ ಭಾವನೆಯಿಂಧ ನೋಡಲಾಗುತ್ತದೆ. ಅದಕ್ಕೆ ತಾವುಗಳು ಸಿಟ್ಟಿನ ಕೈಯಲ್ಲಿ ಬೇರೆ ಅಫರಾದವನ್ನು ಮಾಡದೇ ಕೆಟ್ಟ ಕೆಲಸಕ್ಕೆ ಕೈ ಹಾಕದೇ ಒಳ್ಳೆಯವರಾಗಿ ಸಮಾಜ ಮುಖಿಯಾಗಿ ಕೆಲಸವನ್ನು ಮಾಡುತ್ತಾ, ಸಮಾಜದಲ್ಲಿರುವ ಜನರ ಜೊತೆ ಬೆರೆತು ಉತ್ತಮರಾಗಿ ಬಾಳಿ ಎಂದು ಹೇಳಿದರು.  
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ|| ಪಿ.ರಂಗನಾಥ್‍ರವರು ಎಲ್ಲರಿಗೂ 77 ನೇ ಸ್ವಾತಂತ್ರೋತ್ಸವ ಶುಭಾಶಯವನ್ನು ಕೋರಿದರು ಹಾಗೂ ಬಿಡುಗಡೆ ಹೊಂದಿರುವ ಬಂದಿಗಳಿಗೆ ಹೊರಗಡೆ ಹೋಗಿ ಉತ್ತಮ ಜೀವನವನ್ನು ನಡೆಸಲು ಸಲಹೆಗಳನ್ನು ನೀಡಿದರು.
     ಈ ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ವೈದ್ಯಾಧಿಕಾರಿಗಳಾದ ಡಾ|| ರವೀಂಧ್ರ ಬನ್ನೇರ, ಡಾ|| ಅಣ್ಣಾರಾವ್ ಪಾಟೀಲ್, ಸಹಾಯಕ ಅಧೀಕ್ಷಕರಾದ ಶ್ರೀ ಹುಸೇನಿ ಪೀರ್, ಸಂಸ್ಥೆಯ ಜೈಲರ್ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದರು. ದೇಶಭಕ್ತಿ ಗೀತೆಯನ್ನು ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿಯಾದ ಶ್ರೀ ಭೀಮಾಶಂಕರ.ಕೆ.ಡಾಂಗೆ ಹಾಡಿದರು. ವಂದನಾರ್ಪಣೆಯನ್ನು ಸಂಸ್ಥೆಯ ಸಹಾಯಕ ಅಧೀಕ್ಷಕರಾದ ಶ್ರೀ ವಿ. ಕೃಷ್ಣಮೂರ್ತಿ ನಡೆಸಿಕೊಟ್ಟರು. ನಿರೂಪಣೆಯನ್ನು ಶಿಕ್ಷಕರಾದ ಶ್ರೀ ನಾಗರಾಜ ಮುಲಗೆ, ನೆರವೇರಿಸಿಕೊಟ್ಟರು. ಬಂದಿಗಳಿಂದ ಭಾಷಣ ಹಾಗೂ ದೇಶಭಕ್ತಿಗೀತೆಗಳನ್ನು ಹಾಡಿಸಲಾಯಿತು.