4 ಜನ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಶಿರಹಟ್ಟಿ,ಏ20 : ಶಿರಹಟ್ಟಿ ವಿಧಾನ ಸಭಾ ಮತಕ್ಷೇತ್ರ (065)ವು ಮಿಸಲಾತಿ ಕ್ಷೇತ್ರದ ಚುನಾವಣೆಯ ಹಿನ್ನಲೆಯಲ್ಲಿ ಎ.13 ರಿಂದ ನಾಮ ಪತ್ರ ಸಲ್ಲಿಕೆಯಾಗಿದ್ದು, ಈ ವರೆಗೆ ಒಟ್ಟು 12 ನಾಮ ಪತ್ರ ಸಲ್ಲಿಕಯಾಗಿದ್ದು, ದಿ. 19 ರಂದು 12 ಜನ ಅಭ್ಯರ್ಥಿಗಳು ನಾಮ ಪತ್ರವನ್ನು ಸಲ್ಲಿಸಿದ್ದಾರೆ. ಈ ವರೆಗೆ ಒಟ್ಟು 24 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ದಿ. 19 ರಂದು ಬುದವಾರದಂದು ಅಶೋಕ ಲಮಾಣಿ ಸ್ವತಂತ್ರ ಅಭ್ಯರ್ಥಿ,ಸುನೀಲ ಕುಮಾರ ಪಾಂಡಪ್ಪ ಬಹಮನಪದ ಸ್ವತಂತ್ರ ಅಭ್ಯರ್ಥಿ,ಮಲ್ಲಿಕಾರ್ಜುನ ಯಲ್ಲಪ್ಪ ದೊಡ್ಡಮನಿ ಆಮ ಆದ್ಮಿ ಪಕ್ಷದ (ದ್ವಿ ಪ್ರತಿಗಳಲ್ಲಿ )ಪತ್ರವನ್ನು ಸಲ್ಲಿಸಿದ್ದಾರೆ. ಸುಜಾತಾ ನಿಂಗಪ್ಪ ದೊಡ್ಡಮನಿ ಕಾಂಗ್ರೆಸ್ಸ ಅಭ್ಯರ್ಥಿ(ತ್ರಿ ಪತ್ರಿಗಳಲ್ಲಿ) , ಹನುಮಂತಪ್ಪ ಮಂಗಲೆಪ್ಪ ನಾಯಕ ಜನತಾ ದಳ( ಜಾತ್ಯಾತೀತ) ಪಕ್ಷದ ವತಿಯಿಂದ, ಸಂತೋಷ ಗೌರವ್ವ ಹಿರೇಮನಿ ಸ್ವತಂತ್ರ ಅಭ್ಯರ್ಥಿ, ಹನುಮಂತಪ್ಪ ಪೀರಪ್ಪ ಕೊರವರ ಸ್ವತಂತ್ರ ಅಭ್ಯರ್ಥಿ, ಗುರುನಾಥ ದಾನಪ್ಪನವರ ಭಾರತೀಯ ಜನತಾ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.