4 ಕೋಟಿ ರುಪಾಯಿ ವೆಚ್ಚದ ರಸ್ತ ಕಾಮಗರಿಗೆ ಶಾಸಕ ಅಲ್ಲಂಪ್ರಭು ಪಾಟೀಲ್‌ ಗುದ್ದಲಿ ಪೂಜೆ

ಕಲಬುರಗಿ:ಮಾ.06:2022 23ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮ್ಯಾಕ್ರೋ ಸಿ ಡಿ ಕ್ಯೂ ಯೋಜನೆ ಅಡಿಯಲ್ಲಿ ವಾರ್ಡ್ ನಂಬರ್ 42 ಹೀರಾಪೂರದಲ್ಲಿ ರೂಪಾಯಿ 1 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಹಾಗೂ ಪಾಣೆಗಾಂವ್‌ನಿಂದ ಕಲಬುರಗಿ ಮುಖ್ಯ ರಸ್ತೆಗೆ 3 ಕೋಟಿ ರು ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಲ್ಲಂಪ್ರಭು ಪಾಟೀಲರು ಸಮ ಸಮಾಜ ನಿರ್ಮಾಣಕ್ಕಾಗಿ ಕಾಂಗ್ರೆಸ್‌ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ರೂಪಿಸಿದ, ಇದರಿಂದಾಗಿ ಬಡವರು, ಮಧ್ಯಮ ವರ್ಗದವರಿಗೂ ಕೊಳ್ಳುವ ಶಕ್ತಿ ಬಂದಿದೆ. ಪಂಚ ಗ್ಯಾರಂಟಿಯಿಂದ ಜನರ ಆರ್ಥಿಕ ಸಬಲೀಕರಣವಾಗುತ್ತಿದೆ ಎಂದರು.

ಅತ್ತ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಲೇ ಇತ್ತ ರಸ್ತೆ, ಚರಂಡಿ, ಸೇತುವಂಯಹ ಮೂಲ ಸವಲತ್ತು ನಿರ್ಮಾಣಕ್ಕೂ ಹಣದ ಅನುಕೂಲ ತಮ್ಮ ಸರಕಾರ ಮಾಡುತ್ತಿದೆ. ಇದರಿಂದಲೇ ತಾವೀಗ 4 ಕೋಟಿ ರು ವೆಚ್ಚದಲ್ಲಿ ಪಾಣೆಗಾಂವ್‌, ಹೀರಾಪೂರ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದಾಗಿ ಹೇಳಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಅಲಿಮೋದ್ದೀನ್ ಪಟೇಲ್, ದಕ್ಷಿಣ ಮತಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ್ ಕಣ್ಣಿ, ಬಡಾವಣೆಯ ಹಿರಿಯರಾದ ಶಿವಯೋಗಿ ದೊಡ್ಡಮನಿ, ನಾಗೇಂದ್ರಪ್ಪ ನಾಡಗಿರಿ, ಆಬಿದ ಅಲಿ, ಮಕ್ಬುಲ್ ಖಾನ್, ಸುನೀಲ ಇನಾದಾರ, ಶಂಕರ್ ನಿಕ್ಷಿ, ಉದಯಕುಮಾರ್ ಡಿಪ್ಟಿ, ಪರಮೇಶ್ವರ ಮೇಲ್ಮನಿ, ಇರ್ಫಾನ್ ಮೇಲಿನಮನಿ, ಸಂತೋಷ್ ಮೇಲ್ಮನಿ, ಸುನಿಲ್ ದಿಕ್ಸಂಗಿ, ಬಸವರಾಜ್ ಬಿರಾದರ್, ಶರಣಗೌಡ ಬಿರಾದರ್ ಹನುಮಂತ್ ನಿಂಬರಗಿ ಅಲ್ಲಮಪ್ರಭು ನಿಂಬರ್ಗಾ ಭೀಮಶಂಕರ್ ದುದನಿ ಮಹೇಶ್ ತೆಲ್ಲೂರ್ ಅರುಣ್ಕುಮಾರ್ ಇನಾಮ್ದಾರ್ ಲೋಕೊಪಯೋಗಿ ಇಲಾಖೆ ಸಹಾಯಕ ಅಭಿಯಂತರು ಶಾಂತಕುಮಾರ್ ನಂದೂರ್ ಗುತ್ತಿಗೆದಾರ ದತ್ತು ಪಾಟೀಲ್ ಇದ್ದರು.