`4 ಎನ್ 6′ ಚಿತ್ರೀಕರಣ ಮುಕ್ತಾಯ

ಮರ್ಡರ್‌ ಮಿಸ್ಟ್ರಿ ಕ್ರೈಂ‌ ಜೊತೆಗೆ  ಥ್ರಿಲ್ಲರ್ ಕಥಾಹಂದರ  ಹೊಂದಿರುವ  4 ಎನ್  6 ಚಿತ್ರೀಕರಣ ಮುಕ್ತಾಯವಾಗಿದೆ. ಸಾಯಿಪ್ರೀತಿ  ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ, ಬಾಕಿ ಉಳಿದಿದ್ದ ವಿಶಿಷ್ಟ ಶೈಲಿಯ, ಆಂಗ್ಲ ಸಾಹಿತ್ಯವಿರುವ ಹಾಡನ್ನು  ಚಿತ್ರೀಕರಿಸುವುದರೊಂದಿಗೆ ಕುಂಬಳಕಾಯಿ ಒಡೆಯಲಾಯ

ರಚನಾ ಇಂದರ್  ಹಾಗೂ ನವೀನ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ  “4 ಎನ್ 6” ಚಿತ್ರಕ್ಕೆ  ದರ್ಶನ್ ಶ್ರೀನಿವಾಸ್  ಆಕ್ಷನ್ ಕಟ್ ಹೇಳಿದ್ದಾರೆ. ಕೊಲೆಯೊಂದರ ತನಿಖೆಯ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಚಿತ್ರ ಇದಾಗಿದೆ.

ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಮುಂದಿನ ತಿಂಗಳು ಚಿತ್ರದ ಟೀಸರ್ ರಿಲೀಸ್ ಮಾಡುವ ‌ಮೂಲಕ ಪ್ರೊಮೋಷನ್ ಕಾರ್ಯಗಳಿಗೆ ಚಾಲನೆ ನೀಡಲಿದೆ. ಚಿತ್ರಕ್ಕೆ ನಿರ್ದೇಶಕರೇ ಎಡಿಟರ್ ಆಗಿದ್ದು ಮುತ್ತುರಾಜ್ ಸಾಥ್ ನೀಡಿದ್ದಾರೆ. ಚರಣ್ ತೇಜ್  ಛಾಯಾಗ್ರಹಣ, ಸತ್ಯಕಹಿ  ಸಂಭಾಷಣೆ ಹಾಗೂ ಸಾಯಿ ಸೋಮೇಶ್ ಸಂಗೀತ ನಿರ್ದೇಶನವಿದೆ.

ತಾರಾಬಳಗದಲ್ಲಿ  ಭವಾನಿಪ್ರಕಾಶ್, ಮೇಘನಾ,  ಸಂಜಯ್ ನಾಯಕ್, ಸೌರವ್, ಸತ್ ಚಿತ್ರದಲ್ಲಿ‌ ಅಭಿನಯಿಸಿದ್ದಾರೆ. ಒಂದೆರಡು ತಿಂಗಳಲ್ಲಿ ಚಿತ್ರ  ಚಿತ್ರಮಂದಿರಕ್ಕೆ  ಬರುವ ನಿರೀಕ್ಷೆಯಲ್ಲಿದೆ.