4 ಎಕರೆ ಕಬ್ಬು ಭಸ್ಮ

ಇಂಡಿ : ಅ.18:ತಾಲೂಕಿನ ಆಳೂರ ಗ್ರಾಮದಲ್ಲಿ ವಿದ್ಯುತ್ ಸಾಟ್ ಸಕ್ರ್ಯೂಟ್ ದಿಂದ 4 ಎಕರೆ ಕಬ್ಬು ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ನಡೆದಿದೆ.
ಶೈಲಾ ಬಸವರಾಜ ಪೂಜಾರಿ ಎಂಬುವವರ ಕಬ್ಬಿನ ಗದ್ದೆಗೆ ವಿದ್ಯುತ್ ಅವಘಡ ಸಂಭವಿಸಿದರಿಂದ ಕಬ್ಬು ಸಂಪೂರ್ಣ ಸುಟ್ಟಿದೆ.ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸುವಷ್ಟರಲ್ಲಿ ಬೆಂಕಿ ಸಂಪೂರ್ಣ ಕಬ್ಬಿಗೆ ಆವರಿದ್ದರಿಂದ ಕಬ್ಬು ಸಂಪೂರ್ಣ ಸುಟ್ಟಿತು ಎಂದು ರೈತ ಮಹಿಳೆ ಶೈಲಾ ಪೂಜಾರಿ ತಿಳಿಸಿದ್ದಾರೆ.
ಪರಿಹಾರಕ್ಕೆ ಆಗ್ರಹ: ಬರಗಾಲದಲ್ಲಿ ಇದ್ದ ಅಲ್ಪಸ್ವಲ್ಪ ನೀರಿನಿಂದ ಕಬ್ಬು ಬೆಳೆ ಬೆಳೆಸಲಾಗಿದೆ.ಸಾಲ ಮಾಡಿ ಬೆಳೆ ಮಾಡಲಾಗಿದೆ.ಕಬ್ಬು ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.