4ಲೈನ್ ರಾಷ್ಟ್ರೀಯ ಹೆದ್ದಾರಿಯಿಂದ 35 ಕೋ ರೂ. ಬಿಡುಗಡೆ: ಶಾಸಕ ಯತ್ನಾಳ

ವಿಜಯಪುರ, ಮಾ.21-ನಗರ ಶಾಸಕಬಸನಗೌಡರಾ. ಪಾಟೀಲ್ (ಯತ್ನಾಳ) ರವರು ಕಳೆದ 2 ವರ್ಷಗಳಿಂದ ಸತತ ಪ್ರಯತ್ನ, ಪತ್ರ ವ್ಯವಾಹಾರ ಹಾಗು ತಮ್ಮ ಹಳೆಯ ಭಾಂದವ್ಯದಿಂದ ಕೇಂದ್ರ ಭೂ ಸಾರಿಗೆ ಸಚಿವ ನೀತಿನ್‍ಗಡ್ಕರಿಯವರ ಮೂಲಕ ನಮ್ಮ ನಗರದ ಕನಸಾದ ಸುಸಜ್ಜಿತ ರಸ್ತೆಯನ್ನಾಗಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ನಂ. 584 ಃಯ ವಿಜಯಪುರ-ಸಂಕೇಶ್ವರ ರಸ್ತೆ 0.0 ಕಿ.ಮೀ ದಿಂದ 80 ಕಿ.ಮೀ ವರೆಗೆ ನಗರದ ನೇತಾಜಿ ಸುಬಾಸ ಚಂದ್ರ ಭೋಸ್ ವೃತ್ತ (ಇಟಗಿ ಪಂಪ) ದಿಂದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮೂಲಕ ತೊರವಿ, ತಿಕೋಟಾ, ಅಥಣಿ ಮುರಗುಂಡಿಕ್ರಾಸ್ ವರೆಗಿನ 410 ಕೋ ರೂ. ಮೊತ್ತದಲ್ಲಿ ರಸ್ತೆ ಕಾಮಗಾರಿಗೆ ಮಂಜೂರಾತಿ ದೊರತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸದರಿ ಸಂಕೇಶ್ವರ ವರೆಗಿನರಸ್ತೆಗೆ 766 ಕೋ.ರೂ ವೆಚ್ಚ ತಗುಲುತ್ತದೆ.
ನಗರದ ನೇತಾಜಿ ಸುಬಾಸ ಚಂದ್ರ ಭೋಸ್ ವೃತ್ತದಿಂದ (ಇಟಗಿ ಪಂಪ) ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವರೆಗೆ35 ಕೋ ರೂ. ವೆಚ್ಚದಲ್ಲಿ5.4 ಕಿ.ಮೀ 4 ಲೈನ್ ರಸ್ತೆ ಆಗುತ್ತದೆ. ಇದರಲ್ಲಿ ರಸ್ತೆಯ ಮಧ್ಯಭಾಗದಲ್ಲಿ ಬೀದಿ ದೀಪ, ಎರಡೂ ಬದಿ ಡಕ್ಟ ಕೇಬಲಿಂಗ್, ಡ್ರೇನ್, ಪುಟಪಾತ, ರಿಲಿಂಗ್ ಟೋಲ್ ಒಳಗೊಂಡಂತೆ ಕಾಮಗಾರಿ ಆಗುತ್ತದೆ. ಸದರಿ ರಸ್ತೆ ಕಾಮಗಾರಿಯ ಟೆಂಡರನ್ನು ಒಂದು ವಾರದಲ್ಲಿ ಕರೆಯಲಾಗುತ್ತದೆ.
ನಗರದಿಂದ 23 ನೇ ಕಿ.ಮೀ ತೆಲಸಂಗ ಹತ್ತಿರ ಟೋಲ್ ಆಗುತ್ತದೆ. ನಗರ ಶಾಸಕರ ಸತತ ಪ್ರಯತ್ನದಿಂದ ನನಸಾದ ಈ ರಸ್ತೆಯ ಕಾಮಗಾರಿಯಿಂದ ನಗರಕ್ಕೆ ಕಳೆ ಬಂದಂತಾಗಿದೆ ಎಂದು ಶಾಸಕರು ತಿಳಿಸಿರುತ್ತಾರೆ. ರಾಷ್ಟ್ರೀಯ ಹೆದ್ದಾರಿಯ ಜಿಲ್ಲಾ ಅಧಿಕಾರಿಗಳೊಂದಿಗೆ ಸತತವಾಗಿ ದೆಹಲಿಗೆ ಹೋಗಿ ನೀತಿನ್‍ಗಡ್ಕರಿ ಹಾಗು ವೈಭವ ಡಾಂಗೆಯವರಿಗೆ ಭೇಟಿಯಾಗಿ ಜಿಲ್ಲೆಯ ನಾಲ್ಕು ಪ್ರಮುಖ ರಸ್ತೆಗಳಿಗೆ ಅನುದಾನ ಮೀಸಲಿಡುವಂತೆ ವಿನಂತಿಸಿದ್ದರು.
ಈ ನಿಟ್ಟಿನಲ್ಲಿ ಪತ್ರ ವ್ಯವಹಾರ ಜೊತೆಗೆ, ಅನೇಕ ಬಾರಿ ವೈಯಕ್ತಿಕವಾಗಿ ಭೇಟಿ ಮಾಡಿ ಚರ್ಚಿಸಿ, ಸಪಲತೆಯನ್ನು ಹೊಂದಿದರು. ರಾಷ್ಟ್ರೀಯ ಹೆದ್ದಾರಿಯ ಸಚಿವರಿಗೆ ಹಾಗು ಜಿಲ್ಲಾ ಅಧಿಕಾರಿಗಳಿಗೆ ಶಾಸಕ ಯತ್ನಾಳ ಅಭಿನಂದನೆ ಸಲ್ಲಿಸಿದ್ದಾರೆ.