4ನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ ಲಸಿಕೆ: ಜಿಲ್ಲಾಧಿಕಾರಿ

ವಿಜಯಪುರ, ಮಾ.31-ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್-19 ಲಸಿಕೆ ಅಭಿಯಾನದಡಿಯಲ್ಲಿ ನಾಲ್ಕನೇಯ ಹಂತ ಏಪ್ರಿಲ್ 1 ರಿಂದ ಆರಂಭವಾಗುತ್ತಿದ್ದು ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳುವ ಸಮಯದಲ್ಲಿ ನೊಂದಣಿ ಮಾಡಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದ್ದು, ನೋಂದಣಿ ಮಾಡಿಕೊಳ್ಳುವ ಮೂಲಕ 45 ವರ್ಷ ಮತ್ತು 45 ವರ್ಷ ವಯಸ್ಸಿನ ಮೇಲ್ಪಟ್ಟವರು ಹಾಗೂ 1 ನೇ ಜನೇವರಿ 1977 ರಲ್ಲಿ ಜನಸಿದವರೂ ಸೇರಿ ಲಸಿಕೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ತಿಳಿಸಿದ್ದಾರೆ.
ಲಸಿಕೆ ಪಡೆಯುವರು ನೇರವಾಗಿ ಆನ್‍ಲೈನ ಮತ್ತು ವೆಬ್‍ಸೈಟ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಅಥವಾ ಸಮೀಪದ ಲಸಿಕಾ ವಿತರಣಾ ಕೇಂದ್ರಕ್ಕೆ ತೆರಳಿ ಸ್ಥಳದಲ್ಲಿಯೆ ನೋಂದಣಿಮಾಡಿಕೊಳ್ಳಬಹುದಾಗಿದೆ ನೋಂದಣಿ ಸಮಯದಲ್ಲಿ ಗುರುತಿನ ಚೀಟಿ ಸೇರಿ ಅಗತ್ಯ ದಾಖಲಾತಿಗಳನ್ನು ನೀಡಬೇಕು ಇನ್ನು ಆನಲೈನ ಸಮಯದಲ್ಲಿಯೇ ಸಮೀಪದ ಆರೋಗ್ಯ ಕೇಂದ್ರ ದಿನಾಂಕವನ್ನು ಆಯ್ಕೆ ಮಾಡುವ ಅವಕಾಶ ಲಭ್ಯವಿದೆ ಒಂದು ವೇಳೆ ಆಯ್ಕೆ ಮಾಡಿದ ದಿನಾಂಕದಂದು ಲಸಿಕೆ ಪಡೆಯಲು ಸಾದ್ಯವಾಗದಿದ್ದರೆ ಬದಲಿ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇದೆ.
ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ಉಚಿತವಿದ್ದು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸಗೆ ರೂ 250 ದರ ನಿಗದಿ ಮಾಡಲಾಗಿದೆ. ಮೊದಲು ಡೋಸ ಪಡೆದ 28 ದಿನಕ್ಕೆ ಎರಡನೇಯ ಡೋಸ ಪಡೆಯಬೇಕು ಜಿಲ್ಲೆಯ ಜಿಲ್ಲಾ ಆಸ್ಪತ್ರೆ ತಾಲೂಕಾ ಆಸ್ಪತ್ರೆಗಳಾದ ಬ ಬಾಗೇವಾಡಿ, ಮುದ್ದೆಬಿಹಾಳ, ಇಂಡಿ ಹಾಗೂ ಸಿಂದಗಿಯಲ್ಲಿ ಉಚಿತ ಲಸಿಕೆಯನ್ನು ನೀಡಲಾಗುತ್ತಿದೆ ಮತ್ತು ಜಿಲ್ಲೆಯ ಖಾಸಗಿ ಆರೋಗ್ಯ ಸಂಸ್ಥೆಗಳಾದ ಬಿ.ಎಲ್.ಡಿ.ಈ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಅಲ್-ಅಮೀನ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲೆಯ ಸರ್ಕಾರಿ ಆರೋಗ್ಯ ಉಪಕೇಂದ್ರಗಳಲ್ಲಿ 100% ರಷ್ಟು ಆನ್‍ಸೈಟ್ ನೋಂದಣಿಯನ್ನು ಮಾಡಿಸಲು ಗ್ರಾಮೀಣ ಪ್ರದೇಶದಲ್ಲಿ ಇರುವÀ ಸಾರ್ವಜನಿಕರಿಗೆ ಕೋವಿಡ್-19 ಲಸಿಕೆಯ ಕುರಿತು ಮನವಲಿಸಿ ಲಸಿಕೆ ಹಾಕಿಸಿಕೊಳ್ಳಲು ಆರೋಗ್ಯ ಸಹಾಯಕರು ಮತ್ತು ಒಐಊP ಸಿಬ್ಬಂದಿಯವರು ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು. ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಹಾಗೂ ಆಯ್ದ ಆರೋಗ್ಯ ಉಪಕೇಂದ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆಯನ್ನು ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆÀ ಹಾಕಲಾಗುವದು, ಮತ್ತು ಊigh ಣesಣ Posiಣiviಣಥಿ ಡಿಚಿಣe ಇರುವ ಪ್ರದೇಶಗಳಲ್ಲಿ ಹೆಚ್ಚಿನ ಆದ್ಯತೆ ನೀಡಿ ಲಸಿಕೆ ಹಾಕಿಸಿಕೊಳ್ಳಲು ಮನವೊಲಿಸಿ ಲಸಿಕಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 46438 ಹಿರಿನಾಗರಿಕರಿಗೆ, ಅದರಂತೆ 45 ರಿಂದ 60 ವರ್ಷದ ವಯಸ್ಸಿನವರು ಇತರೆ ಕಾಯಿಲೆಗಳಿಂದ ಬಳಲುತ್ತಿರುವ 22925 ಜನರಿಗೆ ಕೂಡಾ ಲಸಿಕೆಯನ್ನು ನೀಡಲಾಗಿದ್ದು, ಹಾಗೂ ಮುಂಚೂಣಿ ಕಾರ್ಯಕರ್ತೆಯರಿಗೂ ಮತ್ತು ಆರೋಗ್ಯ ಕಾರ್ಯಕರ್ತರಗೂ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.