4ನೇ ಅಂತರಾಷ್ಟ್ರೀಯ ಮಟ್ಟದ ಚಾಂಪಿಯನಶೀಪ್ ಆರ್. ಪ್ರದೀಪ ಜಾಧವ ಚಿನ್ನದ ಪದಕ

ವಿಜಯಪುರ, ಜು.13-ದಿನಾಂಕ 30-6-2022 ರಿಂದ 2-7-2022ರ ವರೆಗೆ ಇಂಡೋ ನೇಪಾಳದಲ್ಲಿ ಜರುಗಿದ 4ನೇ ಅಂತರಾಷ್ಟ್ರೀಯ ಮಟ್ಟದ ಚಾಂಪಿಯನಶೀಫದಲ್ಲಿ 5 ಕಿ.ಮಿ. ಓಟದ ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲೆಯ ಮಧಬಾವಿ ಎಲ್.ಟಿ.ನಂ.1 ತಾಂಡಾದ ಆರ್. ಪ್ರದೀಪ ಜಾಧವ ಚಿನ್ನದ ಪದಕ ಪಡೆದು ಜಿಲ್ಲೆಗೆ ಹಾಗೂ ಬಂಜಾರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿಗೆ ಹೆಸರು ತಂದಿದ್ದಾನೆ.
ಕಾಲೇಜಿನ ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗ ಹಾಗೂ ತರಬೇತುದಾರಾದ ಚಂದ್ರಕಾಂತ ತಾರನಾಳ, ದಾದಾಸಾಹೇಬ ಬಾಗಾಯತ ಹಾಗೂ ಊರಿನ ಹಿರಿಯರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದರು.