ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಒಂಬತ್ತು ದಿನಗಳ ಕಾಲ ನಡೆದ ದುರ್ಗಾಪರಮೇಶ್ವರಿ ದೇವಸ್ಥಾನದ ಪೂಜಾ ವಿಧಿವಿಧಾನಗಳ ಕೊನೆಯ ದಿನವಾದ ಶುಕ್ರವಾರ ಧನುರ್ಮಾಸದ ನಿಮಿತ್ಯ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಪಾರಮ್ಮ ಕರ್ಜಗಿ, ಗೌರಮ್ಮ ಹಂಜಿ, ಸವಿತಮ್ಮ ನೆಗಳೂರ, ಈರಮ್ಮ ಕೆಸರಳ್ಳಿ, ನಿಂಗಮ್ಮ ಹುಲಗೂರ, ಶಾಂತಮ್ಮ ತೋಟದ, ಕಮಲವ್ವ ಮೂಲಿಮನಿ, ಲಕ್ಷ್ಮವ್ವ ಕೆರಳ್ಳಿ, ಬಸವಣ್ಣೆವ್ವಾ ಹುಲಗೂರ, ಅನಸವ್ವ ತೋಟದ, ಬಸವರಾಜಪ್ಪ ಹಂಜಿ, ಫಕ್ಕಿರೇಶಪ್ಪ ತೋಟದ, ಎನ್ ಎನ್ ನೆಗಳೂರ, ಶಿವಪ್ಪ ಕೆಸರಳ್ಳಿ, ವೀರಣ್ಣ ಪವಾಡದ, ಶ್ರೀಧರ್ ಜನಿವಾರದ, ಮಾದೇವಪ್ಪ ಹುಲಗೂರ ಸೇರಿದಂತೆ ಅನೇಕರಿದ್ದರು.