39 ನೇ ವಾರ್ಡಿನಲ್ಲಿ ಉಮದೇವಿ ಆಯ್ಕೆಗೆ ಮತದಾರರ ಕಾತುರ

ಬಳ್ಳಾರಿ ಏ 24 : ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಅವರ ಪುತ್ರಿ ಕೆ.ಉಮಾದೇವಿ ಅವರನ್ನು 39 ನೇ ವಾರ್ಡಿನ ಜನತೆ ಆಯ್ಕೆ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಎ.27 ರಂದು ಅವರಿಗೆ ಮತ ನೀಡಿ ಎ.30 ರಂದು ವಿಜಯೋತ್ಸವ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ನಗರದ ಕೆಲ ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದೆ. ಅವುಗಳಲ್ಲಿ 39 ನೇ ವಾರ್ಡು ಸಹ ಎಂದರು. ಅಲ್ಲಿ ಉಮದೇವಿ ಅವರು ವಾರ್ಡಿನ ಎಲ್ಲಾ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿದ್ದು ಅವರನ್ನು ಆಯ್ಕೆ ಮಾಡುವ ಭರವಶೆ ನೀಡಿದ್ದಾರೆಂದರು.