38 ನೇ ವಾರ್ಡಿನ ಬಡ ಜನತೆಗೆ ಕಾಂಗ್ರೆಸ್ ಮುಖಂಡರಿಂದ ಆಹಾರ ವಿತರಣೆ

ಬಳ್ಳಾರಿ ಜೂ 04 : ಕೋವಿಡ್ ನ‌ ಲಾಕ್ ಡೌನ ಸಂಕಷ್ಟಕ್ಕೆ ಸಿಲುಕಿರುವ ಬಡ ಜನತೆಗೆ ನೆರವಾಗಲೆಂದು‌ ಇಂದು ನಗರದ 38 ನೇ ವಾರ್ಡಿನಲ್ಲಿ ಕಾಂಗ್ರೆಸ್ ಮುಖಂಡರು ಆಹಾರದ ಪಾಕೆಟ್ ಮತ್ತು ನೀರಿನ‌ ಬಾಟಲ್ ಗಳನ್ನು‌ ವಿತರಿಸಿದರು.
ರಾಜ್ಯ ಸಭಾ ಸದಸ್ಯ ಡಾ.ಸಯ್ಯದ್ ನಾಸೀರ್ ಹುಸೇನ್, ಸ್ಥಳೀಯ ವಾರ್ಡಿನ‌ ಪಾಲಿಕೆ ಸದಸ್ಯ ವಿ.ಕುಬೇರ , 20 ನೇ ವಾರ್ಡಿನ ಸದಸ್ಯ ಪೇರಂ‌ ವಿವೇಕ್ , ಕಾಂಗ್ರೆಸ್ ಮುಖಂಡ ಅಯಾಜ್ ಮೊದಲಾದವರು ಆಹಾರದ ಪಾಕೆಟ್ ಗಳನ್ನು‌ ವಿತರಿಸಿದರು.