38 ಗ್ರಾ.ಪಂ.ಗಳಿಗೆ ಆದರ್ಶ ವಿದ್ಯಾಲಯದಲ್ಲಿ ನಾಳೆ ಮತ ಏಣಿಕೆಗೆ ಸಕಲ ಸಿದ್ದತೆ

(ಸಂಜೆವಾಣಿ ವಾರ್ತೆ)
ಇಂಡಿ :ಡಿ.29:ತಾಲೂಕಿನ 38 ಗ್ರಾಮ ಪಂಚಾಯಿತಿಗಳಿಗೆ ಭಾನುವಾರ ನಡೆದ ಚುನಾವಣೆಯ ಮತ ಏಣಿಕೆ ಡಿ.30 ರಂದು ಬೆಳಿಗ್ಗೆ 7 ಗಂಟೆಗೆ ವಿಜಯಪುರ ರಸ್ತೆಯ ಆದರ್ಶ ವಿದ್ಯಾಲಯದಲ್ಲಿ ನಡೆಯಲಿದೆ ಎಂದು ತಹಶೀಲ್ದಾರ ಚಿದಂಬರ ಕುಲಕರ್ಣಿ ಹೇಳಿದರು.

ಅವರು ಸೋಮವಾರ ಪಟ್ಟಣದ ಮಿನಿ ವಿಧಾನಸೌದ ತಹಶೀಲ್ದಾರ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.225 ವಾರ್ಡಗಳಿಗೆ ಮತ ಏಣಿಕೆ ನಡೆಯಲಿದ್ದು,623 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.ಮತ ಏಣಿಕೆಗಾಗಿ 18 ಕೋಣೆಗಳನ್ನು ಬಳಸಿಕೊಳ್ಳಲಾಗಿದ್ದು,114 ಟೆಬಲ್‍ಗಳನ್ನು ತೆರೆಯಲಾಗಿದೆ.342 ಸಿಬ್ಬಂದಿಗಳನ್ನು ಮತ ಏಣಿಕೆಗಾಗಿ ನೇಮಿಸಿಕೊಳ್ಳಲಾಗಿದೆ.ಎರಡು ಸುತ್ತಿನಲ್ಲಿ 38 ಗ್ರಾಮ ಪಂಚಾಯಿತಿಗಳ ಮತ ಏಣಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.ಡಿ.30 ರಂದು ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಳ್ಳಲಿರುವ ಮತ ಏಣಿಕೆಗೆ ನಿಯೋಜಿತಗೊಂಡಿರುವ ಸಿಬ್ಬಂದಿಗಳು ಮತ ಎಣಿಕೆ ಸ್ಥಳದಲ್ಲಿ ಬೆಳಿಗ್ಗೆ 6 ಗಂಟೆಗೆ ಹಾಜರಿರಬೇಕು.ಒಂದನೇ ಸುತ್ತಿಗೆ ಆಯ್ಕೆಯಾದ ಪಂಚಾಯಿತಿಯ ಆಯಾ ಅಭ್ಯರ್ಥಿಗಳು ಇಲ್ಲವೆ ಏಜೆಂಟರು ಒಬ್ಬರು ಮಾತ್ರ ಬೆಳಿಗ್ಗೆ 6 ಗಂಟೆಗೆ ಮತ ಎಣಿಕೆಯ ಕೋಣೆಯಲ್ಲಿ ಹಾಜರಿರಬೇಕು.ಅಭ್ಯರ್ಥಿಗಳು ಹಾಗೂ ಸಿಬ್ಬಂದಿಗಳು ತಮ್ಮ ವಾಹನಗಳನ್ನು ವಿಜಯಪುರಕ್ಕೆ ಹೋಗುವ ರಸ್ತೆಯ ಎಡಭಾಗದಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದ್ದು,ವಾಹನಗಳನ್ನು ಅಲ್ಲಿಯೇ ನಿಲುಗಡೆ ಮಾಡಬೇಕು.ಮತ ಎಣಿಕೆ ಕೇಂದ್ರದಲ್ಲಿ ಮೋಬೈಲ್ ಹಾಗೂ ಎಲೆಕ್ಟ್ರಾನಿಕ್ಸ ವಸ್ತುಗಳು,ಧೂಮಪಾನ,ತಂಬಾಕು,ಬೆಂಕಿಪೆÇಟ್ಟಣ ಇತ್ಯಾದಿ ವಸ್ತುಗಳನ್ನು ನಿಷೇ„ಸಲಾಗಿದೆ.ಅಭ್ಯರ್ಥಿ ಇಲ್ಲವೆ ಏಜೆಂಟರು ಚುನಾವಣಾ„ಕಾರಿಗಳು ನೀಡಿದ ಪಾಸ್‍ನ್ನು ಕಡ್ಡಾಯವಾಗಿ ತರಬೇಕು.ಆರೋಗ್ಯ ಇಲಾಖೆಗೆ ಸಂಬಂ„ಸಿದ ಮಾಸ್ಕನ್ನು ಕಡ್ಡಾಯವಾಗಿ ಧರಿಸಿಕೊಂಡು ಬರಬೇಕು.ಮಾಸ್ಕ ಧರಿಸದೆ ಬಂದರೆ ಮತ ಎಣಿಕೆ ಕೋಣೆಗೆ ಪ್ರವೇಶಿಸಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.

ಮೊದಲ ಸುತ್ತಿನಲ್ಲಿ ಸಾಲೋಟಗಿ,ತಾಂಬಾ,ತಡವಲಗಾ,ಅಥರ್ಗಾ,ನಿಂಬಾಳ ಕೆಡಿ,ಹೊರ್ತಿ,ಮಸಳಿ ಬಿಕೆ,ಬಳ್ಳೊಳ್ಳಿ,ರೂಗಿ,ಬೆನಕನಹಳ್ಳಿ, ಇಂಗಳಗಿ,ಹಿರೇಬೇವನೂರ,ಝಳಕಿ,ಆಳೂರ,ಹಿಂಗಣಿ,ಚವಡಿಹಾಳ ಗ್ರಾಮ ಪಂಚಾತಿಗಳಿಗೆ ಮತ ಎಣಿಕೆ ನಡೆಯಲಿದೆ. ಎರಡನೇ ಸುತ್ತಿನಲ್ಲಿ ಅಂಜುಟಗಿ,ಅಹಿರಸಂಗ,ಹಂಜಗಿ,ಕೊಳೂರಗಿ,ಮಿರಗಿ,ಖೇಡಗಿ,ಲಾಳಸಂಗಿ,ಲಚ್ಯಾಣ,ತೆನ್ನಿಹಳ್ಳಿ,ಶಿರಶ್ಯಾಡ,ಭತಗುಣಕಿ,ಪಡನೂರ,ನಾದ ಕೆಡಿ,ಬಸನಾಳ,ಹಡಲಸಂಗ,ಅರ್ಜುಣಗಿ ಬಿಕೆ,ಕಪನಿಂಬರಗಿ,ಅಗರಖೇಡ,ಚಿಕ್ಕಬೇವನೂರ,ಸಂಗೋಗಿ,ಬಬಲಾದ,ಗುಬ್ಬೇವಾಡ ಗ್ರಾಪಂ.ಗಳಿಗೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.ಭಾನುವಾರ ತಾಲೂಕಿನ 38 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ಶಾಂತಿಯುತವಾಗಿ ಮತ ಚಲಾಯಿಸಿದ ಮತದಾರರು,ಸಾರ್ವಜನಿಕರಿಗೆ ಅಭಿನಂದಿಸುವುದಾಗಿ ಹೇಳಿದರು.

ಸಿಪಿಐ ರಾಜಶೇಖರ ಬಡದೇಸಾರ ಮಾತನಾಡಿ,ಮತ ಎಣಿಕೆ ಶಾಂತಿಯುತವಾಗಿ ನಡೆಯಲು ಅಗತ್ಯ ಪೆÇಲೀಸ್‍ಬಂದೋಬಸ್ತ ಎರ್ಪಡಿಸಲಾಗಿದೆ. ಮತ ಎಣಿಕೆ ಕಾರ್ಯಕ್ಕೆ 110 ಪೆÇಲೀಸ್ ಸಿಬ್ಬಂದಿ ಹಾಗೂ ಡಿಆರ್ ವಾಹನ ಬಳಕೆ ಮಾಡಿಕೊಳ್ಳಲಾಗುತ್ತದೆ. ಮತ ಎಣಿಕೆ ನಂತರ ಗ್ರಾಮೀಣ ಪ್ರದೇಶದಲ್ಲಿ ಮೆರವಣಿಗೆಯ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ,ಗ್ರಾಮದಲ್ಲಿ ಅಶಾಂತತೆ ಉಂಟು ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.ಕಂದಾಯ ನಿರೀಕ್ಷಕ ಬಸವರಾಜ ರಾವೂರ,ಚುನಾವಣೆ ಶಿರಸ್ತೆದಾರ ಆರ್.ಬಿ.ಮೂಗಿ,ಬಳ್ಳೊಳ್ಳಿ ಕಂದಾಯ ನಿರೀಕ್ಷಕ ಸಂತೋಷ ಹೊಟಗಾರ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.