38 ಗುಡ್ಡಗಾಡು ಸ್ಪರ್ಧೆಗೆ ಚಾಲನೆ

ಚಿಕ್ಕಬಳ್ಳಾಪುರ ಸೆ ೨೫-ಕ್ರೀಡಾಕೂಟಗಳಲ್ಲಿ ಕ್ರೀಡಾಳುಗಳು ಪಾಲ್ಗೊಳ್ಳುವುದರಿಂದ ಅವರಲ್ಲಿ ದೈಹಿಕ ದ್ರಾಷ್ಟ್ಯ ಮತ್ತು ಮನೋ ಬಲ ಹೆಚ್ಚಾಗುತ್ತದೆ ಎಂದು ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ತಿಳಿಸಿದರು.
ನಗರದ ಹೊರವಲಯದ ಕೆ. ವಿ. ದೈಹಿಕ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಏರ್ಪಡಿಸಿದ್ದ ೩೮ ನೆಯ ಗುಡ್ಡಗಾಡು ಓಟದ ಸ್ಪರ್ಧೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ರೀಡಾಪಟುಗಳು ಫಲಿತಾಂಶದ ಬಗ್ಗೆ ಗಮನ ಕೊಡದೆ ಉತ್ತಮ ರೀತಿಯಲ್ಲಿ ಕ್ರೀಡಾ ಸ್ಫೂರ್ತಿಯೊಂದಿಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹಿತವಚನ ನೀಡಿದರು. ಕಾರ್ಯಕ್ರಮಕ್ಕೆ ವೃತ್ತ ನಿರೀಕ್ಷಕ ಪ್ರಶಾಂತ ಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.


ಕ್ರೀಡಾ ಸ್ಪರ್ಧೆಯಲ್ಲಿ ಕೆ .ವಿ. ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ರೇಖಾ ಪ್ರಥಮ ಸ್ಥಾನ ಗಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಆರ್ ವೆಂಕಟೇಶ್ ಹಿರಿಯ ಉಪನ್ಯಾಸಕರುಗಳಾದ ಅಮರೇಂದ್ರ ಅಶ್ವತ್ಥಪ್ಪ ಅಶೋಕ್ ಅಂತರ ರಾಷ್ಟ್ರೀಯ ಓಟಗಾರ ಮಂಚನಬಲೆ ಶ್ರೀನಿವಾಸ್ ಹಿರಿಯ ಛಾಯಾಗ್ರಾಹಕ ಜಿ. ಕೃಷ್ಣಾಚಾರಿ ಒಳಗೊಂಡಂತೆ ಭಾಗವಹಿಸಿದ್ದರು.